ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗ– 28: ಪೊಲೀಸ್‌ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯ ಮಾದರಿ ಪ್ರಶ್ನೆಗಳು

Last Updated 21 ಜುಲೈ 2021, 19:30 IST
ಅಕ್ಷರ ಗಾತ್ರ

376. ಈ ಕೆಳಕಂಡವುಗಳಲ್ಲಿ ಯಾವುದನ್ನು ತಪ್ಪಾಗಿ ಹೊಂದಿಸಲಾಗಿದೆ?

ಎ) ಐಫೆಲ್ ಟವರ್-ಫ್ರಾನ್ಸ್

ಬಿ) ಲೀನಿಂಗ್ ಟವರ್ ಆಫ್ ಪೀಸಾ-ಇಟಲಿ

ಸಿ) ಅಂಗೋರ್ ವಾಟ್-ಕಾಂಬೋಡಿಯಾ

ಡಿ) ಸ್ಟ್ಯಾಚ್ಯು ಆಫ್ ಲಿಬರ್ಟಿ-ಆಸ್ಟ್ರೇಲಿಯಾ

377. ಹಸಿರು ಎಲೆಗಳಲ್ಲಿ ಕಂಡುಬರುವ ಲೋಹ

ಎ) ಕಬ್ಬಿಣ

ಬಿ) ಮ್ಯಾಗ್ನೇಷಿಯಂ

ಸಿ) ಪೊಟ್ಯಾಷಿಯಂ

ಡಿ) ಕೋಬಾಲ್ಟ್

378. ನಾಡಿದ್ದು ಸೋಮವಾರವಾದರೆ, ಮೊನ್ನೆಯ ದಿನ ಯಾವುದು?

ಎ) ಬುಧವಾರ

ಬಿ) ಶುಕ್ರವಾರ

ಸಿ) ಗುರುವಾರ

ಡಿ) ಶನಿವಾರ

379. ಯಾವುದೇ ಬಿಲ್ ಅನ್ನು ‘ಹಣಕಾಸಿನ ಬಿಲ್’ ಎಂದು ದೃಢೀಕರಿಸುವವರು ಯಾರು?

ಎ) ಹಣಕಾಸು ಸಚಿವರು

ಬಿ) ರಾಷ್ಟ್ರಪತಿ

ಸಿ) ಲೋಕಸಭೆಯ ಸ್ಪೀಕರ್

ಡಿ) ಪ್ರಧಾನಮಂತ್ರಿ

380. ರಾಜ್ಯ ನೀತಿ ನಿರ್ದೇಶಕ ತತ್ವಗಳು ಸಂವಿಧಾನದ ಯಾವ ಭಾಗದಲ್ಲಿ ಅಡಕವಾಗಿದೆ?

ಎ) ಭಾಗ 2

ಬಿ) ಭಾಗ 3

ಸಿ) ಭಾಗ 4

ಡಿ) ಭಾಗ 5

381. ಪಂಚಾಯತ್ ರಾಜ್‌ ವ್ಯವಸ್ಥೆಯನ್ನು ಯಾವ ಪಟ್ಟಿಯಲ್ಲಿ ಸೇರಿಸಲಾಗಿದೆ?

ಎ) ರಾಜ್ಯ ಪಟ್ಟಿ

ಬಿ) ಕೇಂದ್ರ ಪಟ್ಟಿ

ಸಿ) ಸಮವರ್ತಿ ಪಟ್ಟಿ

ಡಿ) ಮೇಲಿನ ಯಾವುದೂ ಅಲ್ಲ

382. ಹೊಂದಿಸಿ ಬರೆಯಿರಿ:

1) ಸಮಾನತೆಯ ಹಕ್ಕು ಎ) ಅನುಚ್ಛೇದ 25

2) ಜೀವಿಸುವ ಹಕ್ಕು ಬಿ) ಅನುಚ್ಛೇದ 32

3) ಧಾರ್ಮಿಕ ಸ್ವಾತಂತ್ರ್ಯದ ಸಿ) ಅನುಚ್ಛೇದ 21ಹಕ್ಕು

4) ಸಾಂವಿಧಾನಿಕ ಡಿ) ಅನುಚ್ಛೇದ 14ಪರಿಹಾರಗಳ ಹಕ್ಕು

ಎ) 1-ಎ, 2-ಬಿ, 3-ಸಿ, 4-ಡಿ

ಬಿ) 1-ಬಿ, 2-ಸಿ, 3-ಎ, 4-ಡಿ

ಸಿ) 1-ಡಿ, 2-ಸಿ, 3-ಎ, 4-ಬಿ

ಡಿ) 1-ಸಿ, 2-ಎ, 3-ಡಿ, 4-ಬಿ

383. ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಮೊದಲ ಕನ್ನಡಿಗ ಯಾರು?

ಎ) ಮಾಸ್ತಿ ವೆಂಕಟೇಶ ಅಯ್ಯಂಗಾರ್

ಬಿ) ದ.ರಾ. ಬೇಂದ್ರೆ

ಸಿ) ಕುವೆಂಪು

ಡಿ) ವಿ.ಕೃ. ಗೋಕಾಕ್‌

384. ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆ ಆಗುವುದಿಲ್ಲ?

ಎ) ಗೊಮ್ಮಟೇಶ್ವರ ವಿಗ್ರಹ–ಗಂಗರು

ಬಿ) ಬೇಲೂರಿನ ಚೆನ್ನಕೇಶವ ದೇವಾಲಯ-ಹೊಯ್ಸಳರು

ಸಿ) ಪಟ್ಟದಕಲ್ಲಿನ ಹುಚ್ಚಿಮಲ್ಲಿ ದೇವಾಲಯ-ಚಾಲುಕ್ಯರು

ಡಿ) ಐಹೊಳೆಯ ದುರ್ಗಾ ದೇವಾಲಯ-ಕದಂಬರು

385. ‘ವಿಪ್ರೋ’ ಸಂಸ್ಥಾಪಕರು ಯಾರು?

ಎ) ಕಿರಣ್ ಮಜುಮ್‌ದಾರ್‌ ಶಾ

ಬಿ) ನಾರಾಯಣ ಮೂರ್ತಿ

ಸಿ) ಅಜೀಂ ಪ್ರೇಮ್‌ಜೀ

ಡಿ) ನೀತಾ ಅಂಬಾನಿ

386. ‘ವಿಕ್ರಮಾರ್ಜುನ ವಿಜಯ’ ಮಹಾಕಾವ್ಯವನ್ನು ಬರೆದವರು ಯಾರು?

ಎ) ಪಂಪ

ಬಿ) ಹರಿಹರ

ಸಿ) ರಾಘವಾಂಕ

ಡಿ) ಶ್ರೀವಿಜಯ

387. 135 ರ 80% + 750 ರ 16% =?

ಎ) 228

ಬಿ) 338

ಸಿ) 224

ಡಿ) 822

388. ಕೂಚಿಪುಡಿ ಶಾಸ್ತ್ರೀಯ ನೃತ್ಯ ಯಾವ ರಾಜ್ಯದ ಕಲೆ?

ಎ) ತಮಿಳುನಾಡು

ಬಿ) ಕೇರಳ

ಸಿ) ಒಡಿಶಾ

ಡಿ) ಗುಜರಾತ್

389. 6t6‘ಹಾರ್ನ್ ಬಿಲ್’ ಎಂಬ ಪ್ರಸಿದ್ಧ ಹಬ್ಬವನ್ನು ಎಲ್ಲಿ ಆಚರಿಸಲಾಗುತ್ತದೆ?

ಎ) ನಾಗಾಲ್ಯಾಂಡ್

ಬಿ) ಆಂಧ್ರಪ್ರದೇಶ

ಸಿ) ಕರ್ನಾಟಕ

ಡಿ) ಛತ್ತೀಸಗಡ

390. ಒಂದು ತೋಟದಲ್ಲಿ ತೆಂಗಿನ ಮರ ಮತ್ತು ಮಾವಿನ ಮರಗಳು 5:6 ಅನುಪಾತದಲ್ಲಿ ಇದ್ದು, ಒಟ್ಟು ಮರಗಳ ಸಂಖ್ಯೆ 121 ಇದ್ದರೆ ತೋಟದಲ್ಲಿ ತೆಂಗಿನ ಮರಗಳ ಸಂಖ್ಯೆ ಎಷ್ಟು?

ಎ) 50

ಬಿ) 45

ಸಿ) 55

ಡಿ) 66

ಭಾಗ– 27 ರ ಉತ್ತರ: 362. ಸಿ, 363. ಡಿ, 364. ಡಿ, 365. ಎ, 366. ಬಿ, 367. ಬಿ, 368. ಸಿ, 369. ಎ, 370. ಸಿ, 371. ಎ, 372. ಸಿ, 373. ಬಿ, 374. ಬಿ, 375. ಸಿ

(ಪ್ರಶ್ನೋತ್ತರ ಸಂಯೋಜನೆ: ಸ್ಲೇಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT