ಸವದತ್ತಿ: ‘ಕಾರ್ಮಿಕರ ಕಾನೂನು ರದ್ದುಪಡಿಸಿ ಸಂಹಿತೆ ರಚಿಸಿರುವುದು ಖಂಡನೀಯ. ವೇತನ ಸಾಲದೆ ಆಶಾ ಕಾರ್ಯಕರ್ತೆಯರು ಬೆಲೆ ಏರಿಕೆಯಿಂದ ಸಂಕಷ್ಟ ಎದುರಿಸುವಂತಾಗಿದೆ’ ಎಂದು ಕಾರ್ಮಿಕ ಮುಖಂಡ ಎಲ್.ಎಸ್.ನಾಯಕ ಹೇಳಿದರು.

ಇಲ್ಲಿನ ಅಂಬೇಡ್ಕರ್ ಉದ್ಯಾನದಲ್ಲಿ ಶುಕ್ರವಾರ ನಡೆದ ವಿಶ್ವ ಕಾರ್ಮಿಕ ರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾರ್ಮಿಕರಿಗೆ ಸೌಲಭ್ಯಗಳಿಗಾಗಿ 25 ವರ್ಷಗಳಿಂದ ಹೋರಾಟ ನಡೆದಿದೆ. ಕಾರ್ಮಿಕರ ಹಕ್ಕು ಮತ್ತು ಅವರಿಗೆ ನ್ಯಾಯ ಒದಗಿಸಲು ದುಡಿಯುವ ವರ್ಗ ಒಂದಾಗಬೇಕು. ಶ್ರಮಜೀವಿಗಳಲ್ಲಿ ಒಗ್ಗಟ್ಟಿಲ್ಲದಿದ್ದಲ್ಲಿ ಬಂಡವಾಳ ಶಾಹಿಗಳು ಗುಲಾಮರಂತೆ ದುಡಿಸಿಕೊಳ್ಳುತ್ತಾರೆ’ ಎಂದು ಆಗ್ರಹಿಸಿದರು.

ಮುಖಂಡ ಫಕ್ರುಸಾಬ ನದಾಫ್ ಮಾತನಾಡಿ, ‘ಚುನಾಯಿತರು ಬಡ ಜನರಿಂದ ಸಿಲಿಂಡರ್ ಗ್ಯಾಸ್ಗೆ ದುಪ್ಪಟ್ಟು ತೆರಿಗೆ ವಿಧಿಸಿ ಶೋಷಿಸುತ್ತಿದ್ದಾರೆ. ಚುನಾಯಿತ ಸರ್ಕಾರ ಕೂಲಿಕಾರರು ಪಾವತಿಸಿದ ತೆರಿಗೆ ಹಣದಿಂದಲೇ ರೈತರ ಜಮೀನು ಖರೀದಿಸಿ ಬಂಡವಾಳ ಶಾಹಿಗಳ ಉದ್ಧಾರಕ್ಕೆ ನಿಂತಿದೆ’ ಎಂದರು.

ಇದಕ್ಕೂ ಮೊದಲು ಅಂಬೇಡ್ಕರ್ ಉದ್ಯಾನದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಅಲ್ಲಿಂದ ಬಜಾರ್ ಮಾರ್ಗವಾಗಿ ಕಲ್ಮಠದವರೆಗೆ ಮೆರವಣಿಗೆ ನಡೆಯಿತು. ಬಿ.ಎಸ್.ಕಪ್ಪಣ್ಣವರ, ಶ್ರೀಕಾಂತ ಹಟ್ಟಿಹೊಳಿ, ಶಂಕ್ರಪ್ಪ ತೊರಗಲ್ಲ, ಕರಿಯಪ್ಪ ಕಡಕೋಳ, ವಿಠ್ಠಲ ಪಾಟೀಲ ಹಾಗೂ ಬಿಸಿಯೂಟ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯಿತಿ ಕಾರ್ಮಿಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-21-119921073

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.