ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (SBI) ಖಾಲಿ ಇರುವ 821 ಲೆಕ್ಕ ಪರಿಶೋಧಕ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಇದೇ ಜೂನ್ 11 ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮುಖ್ಯವಾಗಿ ಈಗಾಗಲೇ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡಿ, ನಿವೃತ್ತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಅಮರಾವತಿ, ಬೆಂಗಳೂರು, ಭೋಪಾಲ್, ಭುವನೇಶ್ವರ್, ಚಂಡೀಗಢ, ಚೆನ್ನೈ, ಗಾಂಧಿನಗರ, ಗುವಾಹಟಿ, ಹೈದರಾಬಾದ್, ಜೈಪುರ, ಕೋಲ್ಕತ್ತಾ, ಲಕ್ನೋ, ಮಹಾರಾಷ್ಟ್ರ, ಮುಂಬೈ , ನವದೆಹಲಿ ಪಟ್ನಾ ಹಾಗೂ ತಿರುವನಂತಪುರಂನಲ್ಲಿ ಹುದ್ದೆಗಳು ಖಾಲಿ ಇವೆ. ಮುಖ್ಯವಾಗಿ ಬೆಂಗಳೂರಿನಲ್ಲಿ 55 ಹುದ್ದೆಗಳು ಖಾಲಿ ಇವೆ.

ಹಾಗಾದರೆ ಲೆಕ್ಕ ಪರಿಶೋಧಕ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ, ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳು, ಅರ್ಜಿ ಪ್ರಕ್ರಿಯೆ, ವೇತನ ಸೇರಿದಂತೆ ಇತರೆ ಮಹತ್ವದ ಮಾಹಿತಿಯನ್ನು ತಿಳಿಯೋಣ.

ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭ ದಿನಾಂಕ– 2026ರ ಮೇ 14

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 2026ರ ಜೂನ್ 11

ಅರ್ಹತೆಗಳು

ಲೆಕ್ಕ ಪರಿಶೋಧಕ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಎಸ್ಬಿಐನ ನಿವೃತ್ತ ಸಿಬ್ಬಂದಿಯಾಗಿರಬೇಕು. ಅದರಲ್ಲಿಯೂ ಮುಖ್ಯವಾಗಿ ಕ್ರೆಡಿಟಿಂಗ್, ಆಡಿಟಿಂಗ್ ಅಥವಾ ವಿದೇಶಿ ವಿನಿಮಯ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವವಿರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಎಸ್ಬಿಐನಿಂದ 60 ವರ್ಷದ ಬಳಿಕ ನಿವೃತ್ತಿ ಹೊಂದಿರಬೇಕು. ರಾಜೀನಾಮೆ ನೀಡಿದ, ಸ್ವಯಂ ಪ್ರೇರಿತವಾಗಿ ನಿವೃತ್ತಿ ಪಡೆದ ಅಥವಾ ಅಮಾನತುಗೊಂಡ ಅಭ್ಯರ್ಥಿಗಳು ಅರ್ಹರಾಗಿರುವುದಿಲ್ಲ.

ವಯೋಮಿತಿ

60 ವರ್ಷದಿಂದ 65 ವರ್ಷದೊಳಗಿರುವವರಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳ ಶಾಟ್ಲಿಸ್ಟ್

ವೈಯಕ್ತಿಕ ಸಂದರ್ಶನ

ಎಸ್ಬಿಐ ರಚಿಸಿರುವ ಸಮಿತಿಯು ಶಾರ್ಟ್ಲಿಸ್ಟ್ ಮಾಡಿದ ಬಳಿಕ ಸಂದರ್ಶನಕ್ಕೆ ಕರೆಯಬೇಕಾದ ಅಭ್ಯರ್ಥಿಗಳ ಪಟ್ಟಿಯನ್ನು ಮತ್ತೊಮ್ಮೆ ಸಿದ್ಧಪಡಿಸುತ್ತದೆ.

ನಂತರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ.

ವೇತನ

ಹುದ್ದೆಯ ಶ್ರೇಣಿಗೆ ಅನುಗುಣವಾಗಿ ತಿಂಗಳಿಗೆ ₹45,000 ರಿಂದ ₹80,000 ವರೆಗೂ ವೇತನ ಸಿಗಲಿದೆ

ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ....

ಅರ್ಜಿ ಸಲ್ಲಿಸಲಿ ಇಲ್ಲಿ ಕ್ಲಿಕ್ ಮಾಡಿ.....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.