ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರಿಂಕೋರ್ಟ್‌: ಭಾಷಾಂತರಕಾರರು ಹುದ್ದೆಗಳಿಗೆ ಅರ್ಜಿ, ಪದವಿ ವಿದ್ಯಾರ್ಹತೆ

Last Updated 2 ಮೇ 2022, 7:47 IST
ಅಕ್ಷರ ಗಾತ್ರ

ಸುಪ್ರಿಂಕೋರ್ಟ್‌ನಲ್ಲಿ ಖಾಲಿ ಇರುವ 25 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14-05-2022.

ಹುದ್ದೆ ಹೆಸರು: ಭಾಷಾಂತರಕಾರರು (ಅಸಿಸ್ಟೆಂಟ್)

ಒಟ್ಟು ಹುದ್ದೆ: 25

ವೇತನ ಶ್ರೇಣಿ: ವಿವಿಧ ಭತ್ಯೆಗಳು ಸೇರಿ ಮಾಸಿಕ ₹ 42 ವೇತನ ದೊರೆಯಲಿದೆ.

ವಯೋಮಿತಿ: ಕನಿಷ್ಠ 18 ವರ್ಷ. ಗರಿಷ್ಠ 32. ಎಸ್‌ಸಿ, ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ ಹಾಗೂ ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಸಡಿಲಿಕೆ ಇದೆ.

ವಿದ್ಯಾರ್ಹತೆ: ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಂಗೀಕೃತ ವಿಶ್ವವಿದ್ಯಾಲಯ / ಶಿಕ್ಷಣ ಸಂಸ್ಥೆಗಳಿಂದಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಹಾಗೂ ಎರಡು ವರ್ಷ ಭಾಷಾಂತರ ಕೆಲಸದ ಅನುಭವ ಹೊಂದಿರಬೇಕು. ಕಂಪ್ಯೂಟರ್ ಹಾಗೂ ಇಂಗ್ಲಿಷ್‌ ಜ್ಞಾನ ಇರಬೇಕು.

ಸುಪ್ರಿಂಕೋರ್ಟಿನ ಅಧಿಕೃತ ವೆಬ್‌ಸೈಟ್‌ https://main.sci.gov.in/ ಗೆ ಭೇಟಿ ನೀಡಿ. ನೇಮಕಾತಿ ಸೆಕ್ಷನ್‌ನಲ್ಲಿ ಅಧಿಸೂಚನೆ ಡೌನ್‌ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು. ಇದೇ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ಅರ್ಜಿ ದೊರೆಯಲಿದೆ.

ಅರ್ಜಿ ಸಲ್ಲಿಕೆ ಕಡೆ ದಿನ:14-05-2022

ಹೆಚ್ಚಿನ ಮಾಹಿತಿಗೆ: https://main.sci.gov.in/ ವೆಬ್‌ಸೈಟ್ ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT