ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ | ಐಐಟಿ ಬಿಎಚ್‌ಯು ವಾರಾಣಸಿ; ಜೂನಿಯರ್ ರಿಸರ್ಚ್ ಫೆಲೋಶಿಪ್ 2022

Last Updated 2 ಜನವರಿ 2022, 19:30 IST
ಅಕ್ಷರ ಗಾತ್ರ

ಐಐಟಿ ಬಿಎಚ್‌ಯು ವಾರಾಣಸಿ ಡಿಪಾರ್ಟ್‌ಮೆಂಟ್ ಆಫ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಜೂನಿಯರ್ ರಿಸರ್ಚ್ ಫೆಲೋಶಿಪ್ 2022

ವಿವರ: ಐಐಟಿ ಬಿಎಚ್‌ಯು ವಾರಾಣಸಿ ಡಿಪಾರ್ಟ್‌ಮೆಂಟ್ ಆಫ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಜೂನಿಯರ್ ರಿಸರ್ಚ್ ಫೆಲೋಶಿಪ್ 2022, ಬಿಇ, ಬಿಟೆಕ್ ಅಥವಾ ಎಂಇ, ಎಂಟೆಕ್ ಪದವಿ ಪಡೆದವರು ಈ ವಿದ್ಯಾರ್ಥಿವೇತನಕ್ಕೆ ಅರ್ಹರು.

ಅರ್ಹತೆ: ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ ಎಂಜಿನಿಯರಿಂಗ್‌ನಲ್ಲಿ ಕನಿಷ್ಠ ಶೇ 55 ಅಂಕಗಳು ಮತ್ತು ಗೇಟ್ ಪರೀಕ್ಷೆ ತೇರ್ಗಡೆ ಹೊಂದಿ ಬಿಇ, ಬಿಟೆಕ್ ಪದವಿ ಅಥವಾ ಆರ್‌ಎಫ್ ಅಂಡ್ ಮೈಕ್ರೋವೇವ್ ಎಂಜಿನಿಯರಿಂಗ್‌ನಲ್ಲಿ ಕನಿಷ್ಠ ಶೇ 55 ಅಂಕಗಳು ಮತ್ತು ಗೇಟ್ ಅರ್ಹತೆಯೊಂದಿಗೆ ಎಂಇ, ಎಂಟೆಕ್ ಪದವಿ ಪಡೆದಿರುವ 28 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಭ್ಯರ್ಥಿಗಳಿಗೆ ಫೆಲೋಶಿಪ್ ಮುಕ್ತವಾಗಿದೆ.

ಆರ್ಥಿಕ ನೆರವು: ತಿಂಗಳಿಗೆ ₹ 31,000 ಹಾಗೂ ಮನೆ ಬಾಡಿಗೆ ಭತ್ಯೆಯ ಮೇಲೆ ಶೇ 16 ರಷ್ಟನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 08, 2022

ಅರ್ಜಿ ಸಲ್ಲಿಕೆ ವಿಧಾನ: ತೊಟ್ಟಪ್ಪನ್, ಪ್ರಿನ್ಸಿಪಾಲ್ ಇನ್ವೆಸ್ಟಿಗೇಟರ್, ಡಿಆರ್‌ಡಿಓ ಸ್ಪಾನ್ಸರ್ಡ್ ರಿಸರ್ಚ್ ಪ್ರಾಜೆಕ್ಟ್, ಡಿಪಾರ್ಟ್‌ಮೆಂಟ್ ಆಫ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್, ಐಐಟಿಬಿಎಚ್‌ಯು, ವಾರಾಣಸಿ – 221005 ಯುಪಿ

ಹೆಚ್ಚಿನ ಮಾಹಿತಿಗೆ: www.b4s.in/praja/VEF2

ಎಚ್‌ಡಿಎಫ್‌ಸಿ ಲಿಮಿಟೆಡ್ಸ್ ಬಡ್ತೆ ಕದಮ್ ಸ್ಕಾಲರ್‌ಶಿಪ್ 2021-22

ವಿವರ: ಎಚ್‌ಡಿಎಫ್‌ಸಿ ಲಿಮಿಟೆಡ್ಸ್ ಬಡ್ತೆ ಕದಮ್ ಸ್ಕಾಲರ್‌ಶಿಪ್ – 2021-22, 9 ನೇ ತರಗತಿಯಿಂದ ಪದವಿ ಹಂತದವರೆಗಿನ (ಸಾಮಾನ್ಯ ಮತ್ತು ವೃತ್ತಿಪರ) ವಿಶೇಷವಾಗಿ ಕೋವಿಡ್-19 ನಿಂದ ಪ್ರಭಾವಿತರಾದ ವಿದ್ಯಾರ್ಥಿಗಳಿಗೆ ತಮ್ಮ ಶಿಕ್ಷಣವನ್ನು ಮುಂದುವರಿಸಲು ಹಣಕಾಸಿನ ನೆರವು ನೀಡುವುದು ಈ ವಿದ್ಯಾರ್ಥಿವೇತನದ ಉದ್ದೇಶ.

ಅರ್ಹತೆ: ಕೋವಿಡ್‌– 19 ನಿಂದ ಪೋಷಕರು ಅಥವಾ ಕುಟುಂಬದಲ್ಲಿ ದುಡಿಯುವ ಸದಸ್ಯರನ್ನು ಕಳೆದುಕೊಂಡಿರುವ ಭಾರತೀಯ ವಿದ್ಯಾರ್ಥಿಗಳು ಈ ವಿದ್ಯಾರ್ಥಿವೇತನಕ್ಕೆ ಅರ್ಹರು. ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ
₹ 6 ಲಕ್ಷ ಮೀರಿರಬಾರದು.‌

ಆರ್ಥಿಕ ನೆರವು: ₹ 1 ಲಕ್ಷದವರೆಗೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಫೆಬ್ರುವರಿ 15, 2022

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ ಮೂಲಕ ‌

ಹೆಚ್ಚಿನ ಮಾಹಿತಿಗೆ: www.b4s.in/praja/HTPF1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT