ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾರ್ಥಿ ವೇತನ

Last Updated 27 ನವೆಂಬರ್ 2022, 20:25 IST
ಅಕ್ಷರ ಗಾತ್ರ

ಅಮೆಜಾನ್ ಫ್ಯೂಚರ್ ಎಂಜಿನಿಯರ್ ಸ್ಕಾಲರ್‌ಶಿಪ್

ಪ್ರಸ್ತುತ ಬಿ.ಇ/ಬಿ.ಟೆಕ್‌ ಕಂಪ್ಯೂಟರ್‌ ಸೈನ್ಸ್‌ ಕೋರ್ಸ್‌, ಐಟಿ ಮತ್ತು ಇತರ ಶಾಖೆಗಳಲ್ಲಿ ಮೊದಲ ವರ್ಷದ ಪದವಿ ಕಲಿಯುತ್ತಿರುವ ವಿದ್ಯಾರ್ಥಿನಿಯರಿಂದ ಸ್ಕಾಲರ್ಷಿಪ್‌ಗಾಗಿ ಅಮೆಜಾನ್‌ ಸಂಸ್ಥೆ ಅರ್ಜಿ ಆಹ್ವಾನಿಸಿದೆ.

ಈ ವಿದ್ಯಾರ್ಥಿವೇತನವು ಭಾರತದಲ್ಲಿರುವ ಯುವತಿಯರಿಗೆ ಕಂಪ್ಯೂಟರ್ ವಿಜ್ಞಾನ ಕಲಿಕೆ ಮತ್ತು ಉದ್ಯೋಗಾವಕಾಶ ಕಲ್ಪಿಸುವ ಗುರಿ ಹೊಂದಿದೆ. ಈ ಯುವತಿಯರು ಸಾಮಾನ್ಯವಾಗಿ 'ಮೊದಲ ತಲೆಮಾರಿನ ಕಲಿಕಾರ್ಥಿಗಳಾಗಿದ್ದು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಕುಟುಂಬದ ಹಿನ್ನೆಲೆಯವರಾಗಿರುತ್ತಾರೆ.

ಅರ್ಹತೆ :ಕಂಪ್ಯೂಟರ್ ಸೈನ್ಸ್ ಅಥವಾ ಸಂಬಂಧಿತ ಶಾಖೆಗಳಲ್ಲಿ ಬಿ.ಇ./ ಬಿ. ಟೆಕ್. ವ್ಯಾಸಂಗ ಮಾಡುತ್ತಿರುವ ಭಾರತೀಯ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು. ಈ ವಿದ್ಯಾರ್ಥಿನಿಯರು ಪ್ರಸ್ತುತ ಮೊದಲ ವರ್ಷದ ಪದವಿಗೆ ದಾಖಲಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ₹3ಲಕ್ಷಕ್ಕಿಂತ ಕಡಿಮೆ ಇರಬೇಕು. ರಾಜ್ಯ ಅಥವಾ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯ ಮೂಲಕ ಪ್ರವೇಶವನ್ನು ತೆಗೆದುಕೊಳ್ಳಬೇಕು.

ಆರ್ಥಿಕ ನೆರವು: ₹ 1,60,000 (ಪದವಿ ಮುಗಿಯುವವರೆ ವರ್ಷಕ್ಕೆ ₹ 40,000).

ಅಮೆಜಾನ್ ಸ್ಕಾಲರ್‌ಷಿಪ್‌ನೊಂದಿಗೆ ಎಂಜಿನಿಯರಿಂಗ್ ಪದವಿ ಪಡೆಯುವವರು ಮುಂದೆ ಕೌಶಲ ಅಭಿವೃದ್ಧಿ, ಉದ್ಯೋಗ ಹುಡುಕುವುದಕ್ಕೂ ನೆರವು ಪಡೆಯಬಹುದು. ಮಾತ್ರವಲ್ಲ, ಅಮೆಜಾನ್‌ ಇಂಟರ್ನ್‌ಷಿಪ್‌ ಪಡೆಯಲು ಅವಕಾಶವಿರುತ್ತದೆ.

ಅರ್ಜಿ ಸಲ್ಲಿಕೆಗೆ ಕೊನೆದಿನ: 31–12–2022

ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್‌ನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:www.b4s.in/praja/AFES3

*****

ಕ್ರೀಡಾಪಟುಗಳಿಗೆ ಸ್ಕಾಲರ್‌ಷಿಪ್‌

ವಿವಿರ: ಕೀಪ್ ಇಂಡಿಯಾ ಸ್ಮೈಲಿಂಗ್ ಫೌಂಡೇಶನಲ್ ಸ್ಕಾಲರ್‌ಷಿಪ್ ಆ್ಯಂಡ್ ಮೆಂಟರ್‌ಷಿಪ್ ಪ್ರೋಗ್ರಾಂ ಫಾರ್ ಸ್ಪೋರ್ಟ್ಸ್‌ ಪರ್ಸನ್ ಅಂಡ್ ಇಂಡಿವಿಶುವಲ್ಸ್.

ಪ್ರತಿಭೆ ಇದ್ದರೂ, ಆರ್ಥಿಕ ಸಂಕಷ್ಟದ ಕಾರಣದಿಂದ ವಿದ್ಯಾಭ್ಯಾಸ ಮುಂದುವರಿಸಲು ಅಶಕ್ತರಾಗಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್‌ ಮೂಲಕ ಆರ್ಥಿಕ ಬೆಂಬಲ ನೀಡಲು ಕೋಲ್ಗೆಟ್‌ – ಪಾಮೊಲಿವ್‌ (ಇಂಡಿಯಾ) ಲಿಮಿಟೆಡ್ ಕಂಪನಿ ಈ ಸ್ಕಾಲರ್‌ಷಿಪ್‌ ಪ್ರೋಗ್ರಾಂ ರೂಪಿಸಿದೆ.

ಅರ್ಹತೆ:ಅರ್ಜಿದಾರರು ಪದವಿಧರರಾಗಿದ್ದು, ದುರ್ಬಲ ವರ್ಗದ ಮಕ್ಕಳಿಗೆ ಪಾಠ ಮಾಡುವ ಅಥವಾ ಕ್ರೀಡಾ ತರಬೇತಿಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬೇಕು.
ಅರ್ಜಿದಾರರು ಕ್ರೀಡಾಪಟುಗಳಾಗಿದ್ದರೆ, ಕಳೆದ ಎರಡು–ಮೂರು ವರ್ಷಗಳಲ್ಲಿ ರಾಜ್ಯ/ರಾಷ್ಟ್ರ/ಅಂತರರಾಷ್ಟ್ರೀಯ ಮಟ್ಟದ ರಾಜ್ಯ/ರಾಷ್ಟ್ರವನ್ನು ಪ್ರತಿನಿಧಿಸಿರಬೇಕು. ರಾಷ್ಟ್ರೀಯ ಶ್ರೇಯಾಂಕದಲ್ಲಿ 500 ಒಳಗೆ / ರಾಜ್ಯ ಶ್ರೇಯಾಂಕದಲ್ಲಿ100 ಒಳಗೆ ಸ್ಥಾನಪಡೆದಿರಬೇಕು. 9 ವರ್ಷಗಳಿಂದ 20 ವರ್ಷಗಳೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬೇಕು. ಎಲ್ಲ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯ ₹ 5 ಲಕ್ಷ ಮೀರಿರಬಾರದು.

ಆರ್ಥಿಕ ನೆರವು:ಆಯ್ದ ವಿದ್ಯಾರ್ಥಿಗಳಿಗೆ 3 ವರ್ಷಗಳವರೆಗೆ ವರ್ಷಕ್ಕೆ ₹ 75,000ದಂತೆ ವಿದ್ಯಾರ್ಥಿವೇತನ ಪಡೆಯಬಹುದು

ಅರ್ಜಿ ಸಲ್ಲಿಸಲು ಕೊನೆ ದಿನ: 31–12–2022

ಅರ್ಜಿ ಸಲ್ಲಿಕೆ ವಿಧಾನ: ಆನ್‌ಲೈನಲ್ಲಿ ಅರ್ಜಿ ಹಾಕಿ.

ಹೆಚ್ಚಿನ ಮಾಹಿತಿಗೆ:www.b4s.in/praja/KSSI2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT