ಸುರಪುರ: ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 100 ಗಂಟೆಗೂ ಹೆಚ್ಚುಕಾಲ ಹಮ್ಮಿಕೊಂಡಿದ್ದ ಯುವ ಉದ್ಯೋಗ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಸೋಮವಾರ ಜರುಗಿತು.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ವತಿಯಿಂದ ಸಾಂಸ್ಥಿಕ, ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಉಪಕ್ರಮದ ಭಾಗವಾಗಿ ಯುವ ಉದ್ಯೋಗ ತರಬೇತಿ ಕಾರ್ಯಕ್ರಮ ಕಳೆದ ಮಾರ್ಚ್ 2 ರಂದು ಆರಂಭಗೊಂಡಿತ್ತು.

ಎಂಜಿನಿಯರಿಂಗ್ ಮತ್ತು ಎಂಜಿನಿಯರಿಂಗ್ ಅಲ್ಲದ ಯುವಕರಿಗೆ ಕೌಶಲ ತರಬೇತಿ ಕೊಟ್ಟು ಅವರನ್ನು ಕಾರ್ಪೋರೇಟ್ ಜಗತ್ತಿಗೆ ಆತ್ಮವಿಶ್ವಾಸದಿಂದ ಪ್ರವೇಶಿಸಲು ಸಜ್ಜುಗೊಳಿಸುವುದು ತರಬೇತಿ ಕಾರ್ಯಕ್ರಮದ ಉದ್ದೇಶವಾಗಿತ್ತು.

ತರಬೇತಿ ಪಡೆದ 8 ಜನ ವಿದ್ಯಾರ್ಥಿಗಳಾದ ಮಹೇಶ, ಗಿರಿಜಾ ಪಾಟೀಲ, ಮಂಜುನಾಥ ಕಟ್ಟಿಮನಿ, ಹರ್ಷಿತಾ, ಸುಶೀಲಾ, ಸಂಗಮೇಶ, ಪ್ರಜೋತ್ ಮತ್ತು ನಯನ ಅವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಶರಣಬಸಪ್ಪ ವಿ.ನಿಷ್ಠಿ ಮಾತನಾಡಿ, ‘ಇಂದು ತಾವೆಲ್ಲ ಪಡೆದುಕೊಂಡ ತರಬೇತಿ ಭವಿಷ್ಯದಲ್ಲಿ ನಿಮ್ಮ ಬದುಕನ್ನು ಉಜ್ವಲಗೊಳಿಸುವಲ್ಲಿ ಹೆಚ್ಚಿನ ಸಹಕಾರ ನೀಡಲಿದೆ. ತರಬೇತಿಯಲ್ಲಿ ಪಡೆದುಕೊಂಡ ಕೌಶಲ್ಯಗಳು ನಿಮ್ಮ ವೃತ್ತಿ ಬದುಕನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲದು’ ಎಂದು ಹೇಳಿದರು.

ಸಂಸ್ಥೆಯ ಕಾರ್ಯದರ್ಶಿ ಶಾಂತಲಾ ಎಸ್.ನಿಷ್ಠಿ, ಪ್ರಾಂಶುಪಾಲ ಶರಣಬಸಪ್ಪ ಸಾಲಿ, ವಿವಿಧ ವಿಭಾಗಗಳ ಉಪನ್ಯಾಸಕರಾದ ಮಂಜುನಾಥ ಯಾಳವಾರ, ಅಶೋಕ ಪಾಟೀಲ, ಶರಣಗೌಡ ಪಾಟೀಲ, ಶೃತಿಶ್ರೀ, ಅಶ್ವಿನಿ ಮಾಲಿಪಾಟೀಲ, ಈಶ್ವರರಾಜ ಪಾಟೀಲ, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-30-277071896

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.