ತಿ. ನರಸೀಪುರ: ಗ್ರಾಮೀಣ ಜನರಿಗೆ ಕೌಶಲ ಕಲಿಸಿ, ಅವರ ಜೀವನಕ್ಕೆ ಆಧಾರ ಕಲ್ಪಿಸಲು ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಕಾರ್ಯ ನಿರ್ವಹಿಸುತ್ತಿದ್ದು, 21 ರೀತಿಯ ತರಬೇತಿಗಳನ್ನು ನೀಡುತ್ತಿದೆ ಎಂದು ಕೇಂದ್ರದ ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಪಿ. ಡಿ. ನಾಯಕ್ ತಿಳಿಸಿದರು.

ಪಟ್ಟಣದಲ್ಲಿ ಶನಿವಾರ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಉದ್ಘಾಟನೆ, ಫ್ಯಾಷನ್ ಡಿಸೈನಿಂಗ್ ಮತ್ತು ಬ್ಯೂಟಿಷಿಯನ್ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಒಬ್ಬರ ದುಡಿಮೆಯಿಂದ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯ. ಒಬ್ಬರ ದುಡಿಮೆ ಸಾಲದೆ ಅನೇಕ ಕುಟುಂಬಗಳು ಸಂಕಷ್ಟಕ್ಕೀಡಾಗಿವೆ. ಈ ಸಂದರ್ಭಗಳಲ್ಲಿ ಕುಟುಂಬದ ಇತರೆ ಸದಸ್ಯರ ದುಡಿಮೆಯೂ ಅಗತ್ಯ ಎಂಬ ಕಾರಣಕ್ಕೆ ಮಹಿಳೆಯರ ಸಬಲೀಕರಣಕ್ಕೆ ಪೂರಕವಾಗಿ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ನ ಅಂಗ ಸಂಸ್ಥೆಯಾಗಿ 2017ರಲ್ಲಿ ಎಚ್.ಡಿ. ಕೋಟೆಯ ಕೆಂಚನಹಳ್ಳಿಯಲ್ಲಿ ವಿವೇಕ ಗ್ರಾಮೀಣ ಜೀವನಾಧಾರ ಕೇಂದ್ರ ಸ್ಥಾಪಿಸಿ, ಗ್ರಾಮೀಣ ಜನರಿಗೆ ತರಬೇತಿ ನೀಡಲಾಗುತ್ತಿದೆ. ಮಹಿಳೆಯರು ಆರ್ಥಿಕ ಸ್ವಾವಲಂಬನೆ ಪಡೆದರೆ ಕುಟುಂಬ ನಿರ್ವಹಣೆಗೆ ಸಹಕಾರಿಯಾಗುವುದರ ಜತೆಗೆ ನೆಮ್ಮದಿಯ ಬದುಕು ರೂಪಿಸಿಕೊಳ್ಳಲು ಸಾಧ್ಯ. ನಮ್ಮ ಸಂಸ್ಥೆ ಮೈಸೂರು, ಚಾಮರಾಜನಗರ, ಧಾರವಾಡ ಮುಂತಾದ ವಿವಿಧೆಡೆಗಳಲ್ಲಿ ತರಬೇತಿ ನೀಡುತ್ತಿದೆ. 15 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ತರಬೇತಿಗಳನ್ನು ಪಡೆದಿದ್ದು, ಶೇ 85 ಭಾಗ ಜನ ಆರ್ಥಿಕ ಸ್ವಾವಲಂಬನೆ ಕಂಡಿದ್ದಾರೆ ಎಂದು ತಿಳಿಸಿದರು.

ತಿ.ನರಸೀಪುರ ಪಟ್ಟಣದಲ್ಲಿ ಈಗ ತರಬೇತಿ ಪ್ರಾರಂಭವಾಗುತ್ತಿದ್ದು, ತಾಲ್ಲೂಕಿನ ಜನರು ತರಬೇತಿ ಪಡೆದು, ಆದಾಯ ಹೆಚ್ಚಿಸಿಕೊಳ್ಳುವಂತೆ ಸಲಹೆ ನೀಡಿದರು. ಉಪನ್ಯಾಸಕ ಎಂ. ಮಹಾದೇವ್ ಉದ್ಘಾಟಿಸಿ ಮಾತನಾಡಿ, ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಸಕ್ರಿಯವಾಗಿದ್ದು, ಪ್ರತಿಯೊಬ್ಬರು ದುಡಿದರೆ ನೆಮ್ಮದಿಯ ಜೀವನ ಕಂಡು ಕೊಳ್ಳಬಹುದು. ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಪಡೆಯಲು ಇಂತಹ ತರಬೇತಿಗಳು ಪ್ರಸ್ತುತವಾಗಿವೆ ಎಂದು ತಿಳಿಸಿದರು.

ಮಾಂಡೋವಿ ಮೋಟಾರ್ಸ್ ವ್ಯವಸ್ಥಾಪಕ ಚಂದ್ರಶೇಖರ್ ಮಾತನಾಡಿದರು. ತರಬೇತಿ ಪಡೆದಿರುವ ಅನಿತಾ ಅನಿಸಿಕೆ ಹಂಚಿಕೊಂಡರು. ಕಾರ್ಯಪಡೆ ಸಂಯೋಜಕ ಅಬ್ದುಲ್ ರಶೀದ್, ಕಾರ್ಯಕ್ರಮ ವ್ಯವಸ್ಥಾಪಕ ಚಿನ್ನ ಮಹಾದೇವ್ ಕೇಂದ್ರದ ಯೋಜನೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ವ್ಯವಸ್ಥಾಪಕ ಕೆ.ರಾಜು, ತರಬೇತಿ ಶಿಕ್ಷಕರಾದ ನೇತ್ರಾವತಿ, ವಿಜಯಲಕ್ಷ್ಮಿ, ಸಂಚಾಲಕ ಮಹದೇವ್, ಅಶ್ವಥ್, ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-38-788136735

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.