ಕುಂದಾಪುರ: ಎಸ್ಸಿ–ಎಸ್ಟಿ ಸಮುದಾಯದವರಿಗೆ ಸ್ವಉದ್ಯಮ ಆರಂಭಿಸುವ ನಿಟ್ಟಿನಲ್ಲಿ ಇಲ್ಲಿ ನಡೆಯುತ್ತಿರುವ ‘ಭೀಮೋದ್ಯಮ’ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಶನಿವಾರ ಸಮಾಜ ಕಲ್ಯಾಣ ಇಲಾಖೆ ಹಾಗೂ ವಿವಿಧ ಇಲಾಖೆಗಳು, ಎಸ್ಸಿ–ಎಸ್ಟಿ ಅಧ್ಯಯನ ಟ್ರಸ್ಟ್ ಸಹಯೋಗದಲ್ಲಿ ನಡೆದ ‘ಭೀಮೋದ್ಯಮ’ ಎಸ್ಸಿ–ಎಸ್ಟಿ ಯುವ ಉದ್ಯಮಶೀಲತಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಧ್ವನಿ ಕಳೆದುಕೊಂಡಿರುವ ಶೋಷಿತ ಸಮುದಾಯದವರ ಬದುಕು ಗಟ್ಟಿಗೊಳಿಸಲು ಇದು ಪರ್ವ ಕಾಲ. ಈ ಸಮಾವೇಶದಿಂದ ಒಂದಷ್ಟು ಜನರಿಗೆ ಕೆಲಸ ಸಿಗುವಂತಾಗಬೇಕು. ಹತ್ತಾರು ಜನರಿಗೆ ಉದ್ಯೋಗ ಕೊಡುವ ಮಟ್ಟಿಗೆ ಅವರ ಉದ್ಯಮ ಬೆಳೆಯಬೇಕು. ಯಾವ ಉದ್ಯಮ ಮಾಡಿದರೆ ಒಳ್ಳೆಯದು. ಅದಕ್ಕೆ ಬ್ಯಾಂಕಿಂಗ್ ಸೌಲಭ್ಯಗಳೇನು? ಸರ್ಕಾರಗಳಿಂದ ಸಿಗುವ ಸಹಾಯ ಹಾಗೂ ಸೌಲಭ್ಯಗಳೇನು? ಎನ್ನುವ ಸಮಗ್ರ ಮಾಹಿತಿ ಸಮಾವೇಶದಲ್ಲಿ ಸಿಗಲಿದೆ. ಇಲ್ಲಿನ ಅನುಭವ, ವಿಚಾರ ವಿಮರ್ಶೆ, ಮಾರ್ಗದರ್ಶನಗಳು ಎಲ್ಲರಿಗೂ ಉಪಯುಕ್ತವಾಗಬೇಕು. ಇಷ್ಟು ವರ್ಷ ಇನ್ನೊಬ್ಬರ ಕೆಳಗೆ ದುಡಿದವರು, ಇನ್ನಷ್ಟು ಜನರಿಗೆ ಉದ್ಯೋಗ ನೀಡು ವಂತಾಗಬೇಕು. ಈ ರೀತಿಯ ಸಮಾವೇಶ ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ನಡೆಯಬೇಕು ಎಂದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಭೀಮೋದ್ಯಮ ಕಾರ್ಯಕ್ರಮದ ಪರಿಕಲ್ಪನೆ, ಇದರಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಸಮುದಾಯದವರಿಗೆ ಸಿಗುವ ಪ್ರಯೋಜನಗಳ ಕುರಿತು ವಿವರಿಸಿದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿದರು. ಬೆಂಗಳೂರಿನ ಸಾಮರಸ್ಯ ವೇದಿಕೆಯ ವಾದಿರಾಜ್, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷೆ ಅನಿತಾ ಆರ್.ಕೆ., ಉಪಾಧ್ಯಕ್ಷೆ ಮಾಲತಿ ನಾಯಕ್ ಇದ್ದರು.

ಎಸ್ಸಿ–ಎಸ್ಟಿ ಅಧ್ಯಯನ ಟ್ರಸ್ಟ್ ಅಧ್ಯಕ್ಷ ಮೋಹನ್ ನಿಂಗಯ್ಯ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ಕುಮಾರದಾಸ್, ಶಿವಾನಂದ ತಲ್ಲೂರು, ಎಸ್.ನಾರಾಯಣ ಬ್ರಹ್ಮಾವರ, ಕೊಲ್ಲೂರು ದೇವಸ್ಥಾನದ ಟ್ರಸ್ಟಿ ಮಹಾಲಿಂಗ ನಾಯ್ಕ್ ಸೇರಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.

ಅಕ್ಷಯ್ ಮಂಕಿ ಸ್ವಾಗತಿಸಿದರು. ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ ವಂದಿಸಿದರು. ಸುಂದರ ಗಂಗೊಳ್ಳಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-28-1957286764

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.