ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಪ್ಲೊಮಾ ನಂತರ ಮುಂದೇನು ಓದಬಹುದು ?

Last Updated 5 ಫೆಬ್ರುವರಿ 2023, 22:15 IST
ಅಕ್ಷರ ಗಾತ್ರ

1.ನಾನು 2017ರಲ್ಲಿ ಡಿಪ್ಲೊಮಾ (ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌) ಮುಗಿಸಿದ್ದೇನೆ. ಎಂಜಿನಿಯರಿಂಗ್ ಬಿಟ್ಟು ಬೇರೆ ಯಾವ ಪದವಿ/ಕೋರ್ಸ್ ಮಾಡಬಹುದು? ದೂರ ಶಿಕ್ಷಣದಲ್ಲಿ ಮಾಡಬಹುದೇ?

ಹೆಸರು, ಊರು ತಿಳಿಸಿಲ್ಲ.

ನೀವು ಈಗ ಯಾವ ಉದ್ಯೋಗದಲ್ಲಿದ್ದೀರಿ ಎಂದು ತಿಳಿಸಿಲ್ಲ. ಹಾಗಾಗಿ, ಈಗ ಉದ್ಯೋಗದಲ್ಲಿರುವ ಅಥವಾ ನಿಮ್ಮ ಆಸಕ್ತಿ ಮತ್ತು ಅಭಿರುಚಿಯಂತೆ ಯಾವ ಉದ್ಯೋಗವನ್ನು ಮಾಡಲು ಇಚ್ಛಿಸುತ್ತೀರ, ಅದಕ್ಕೆ ಅನುಗುಣವಾಗಿ ಸರ್ಟಿಫಿಕೆಟ್/ಡಿಪ್ಲೊಮಾ ಕೋರ್ಸ್ ಮಾಡಬಹುದು. ಉದಾಹರಣೆಗೆ ರೊಬೊಟಿಕ್ಸ್, ಮೆಕಾಟ್ರಾನಿಕ್ಸ್, ವಿಎಲ್‌ಎಸ್‌ಐ, ಪಿಎಲ್‌ಸಿ, ನೆಟ್‌ವರ್ಕಿಂಗ್, ಏರ್‌ಕ್ರಾಫ್ಟ್ ನಿರ್ವಹಣೆ, ಪ್ರೋಗ್ರಾಮಿಂಗ್, ಎಲೆಕ್ಟ್ರಿಕಲ್‌ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳ ರಿಪೇರಿ ಮತ್ತು ನಿರ್ವಹಣೆ ಇತ್ಯಾದಿ. ಈ ಕೋರ್ಸ್‌ಗಳನ್ನು ವಾರಾಂತ್ಯ/ದೂರಶಿಕ್ಷಣ/ಆನ್‌ಲೈನ್ ಪದ್ಧತಿಗಳಲ್ಲಿ ಮಾಡಬಹುದು. ಹಾಗಾಗಿ, ವೃತ್ತಿಯ ಅನುಭವ, ಆಸಕ್ತಿ ಮತ್ತು ಅಭಿರುಚಿಯನ್ನು
ಗಮನದಲ್ಲಿಟ್ಟುಕೊಂಡು ವೃತ್ತಿಯೋಜನೆಯನ್ನು ಮಾಡಿದರೆ, ಮುಂದಿನ ಹಾದಿ ಸ್ಪಷ್ಟವಾಗುತ್ತದೆ. ಹೆಚ್ಚಿನ ಮಾರ್ಗದರ್ಶನಕ್ಕಾಗಿ ಈ ವಿಡಿಯೊ ವೀಕ್ಷಿಸಿ:
https://www.youtube.com/@ExpertCareerConsultantAuthor

2. ನಾನು ಪದವಿ ಮುಗಿಸಿ ಸರ್ಕಾರಿ ಹುದ್ದೆಯನ್ನು ಅರಸುತ್ತಿದ್ದೇನೆ. ನನ್ನ ಬಾಲ್ಯದ ಶಿಕ್ಷಣವನ್ನು ನಮ್ಮ ಹಳ್ಳಿಯ ಕನ್ನಡ ಶಾಲೆಯಲ್ಲಿ ಮುಗಿಸಿದ್ದು, ಗ್ರಾಮೀಣ ಮತ್ತು ಕನ್ನಡ ಮಾಧ್ಯಮದ ಸರ್ಟಿಫಿಕೆಟ್ ಪಡೆಯಲು ಹೋದಾಗ ಶಾಲೆ ಬಿಟ್ಟ ಮಕ್ಕಳ ಚಿಣ್ಣರ ಅಂಗಳ ಕಾರ್ಯಕ್ರಮದಡಿ ನಿನ್ನನ್ನು ನೇರವಾಗಿ 2ನೇ ತರಗತಿಗೆ ದಾಖಲಿಸಿಕೊಳ್ಳ ಲಾಗಿದೆ ಎಂದರು. ಆದ್ದರಿಂದ, ಈಗ ಕನ್ನಡ ಮತ್ತು ಗ್ರಾಮೀಣ ಮಾಧ್ಯಮ ಸರ್ಟಿಫಿಕೆಟ್ ಸಿಗದೆ, ನನಗೆ ಕಲ್ಯಾಣ ಕರ್ನಾಟಕ ಸರ್ಟಿಫಿಕೆಟ್ ಕೂಡ ತಿರಸ್ಕರಿಸಿದ್ದಾರೆ. ಹಾಗಾಗಿ, ಸರ್ಕಾರಿ ಹುದ್ದೆಗಳಿಗೆ ಮೀಸಲಾತಿ ಸಿಗದೆ, ತೊಂದರೆಯಲ್ಲಿದ್ದೇನೆ. ದಯವಿಟ್ಟು ನಿಮ್ಮ ಸಲಹೆ ನೀಡಿ.

ಹೆಸರು, ಊರು ತಿಳಿಸಿಲ್ಲ.

ಚಿಣ್ಣರ ಅಂಗಳ ಕಾರ್ಯಕ್ರಮದ ಅಡಿಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಿ, ಅವರನ್ನು ಶಾಲಾವಾಹಿನಿಗೆ ಕರೆತರುವುದು ಸರ್ಕಾರದ ಅಧಿಕೃತ ಯೋಜನೆ. ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ, ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಮಗೆ ಅರ್ಹತಾ ಧೃಡೀಕರಣ ಪತ್ರವನ್ನು ನೀಡಬೇಕು. ಹಾಗಾಗಿ, ನಮ್ಮ ಅಭಿಪ್ರಾಯದಂತೆ ಈಗಲೂ ಈ ಅರ್ಹತಾ ಪತ್ರವನ್ನು ಪಡೆದುಕೊಂಡು, ಕಲ್ಯಾಣ ಕರ್ನಾಟಕ ಸರ್ಟಿಫಿಕೆಟ್‌ಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಸಹಾಯಕ ಆಯುಕ್ತರ ಕಚೇರಿಯಲ್ಲಿ ವಿಚಾರಿಸಿ ಅಥವಾ ಈ ಜಾಲತಾಣವನ್ನು ಗಮನಿಸಿ:
https://nadakacheri.karnataka.gov.in/ajsk

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT