ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವಿತೀಯ ಪಿಯು ಪರೀಕ್ಷೆ ಮರು ಮೌಲ್ಯಮಾಪನ; 219 ವಿದ್ಯಾರ್ಥಿಗಳು ತೇರ್ಗಡೆ!

Last Updated 4 ಆಗಸ್ಟ್ 2022, 21:10 IST
ಅಕ್ಷರ ಗಾತ್ರ

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದ 219 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

13,848 ವಿದ್ಯಾರ್ಥಿಗಳುಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ 532 ವಿದ್ಯಾರ್ಥಿಗಳು 10ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ವಾರ್ಷಿಕ ಪರೀಕ್ಷೆಯಲ್ಲಿ 40 ಅಂಕಗಳನ್ನು ಗಳಿಸಿದ್ದ ವಿದ್ಯಾರ್ಥಿಯೊಬ್ಬರು ಮರು ಮೌಲ್ಯಮಾಪನದ ನಂತರ 99 ಅಂಕಗಳನ್ನು ಪಡೆದಿದ್ದಾರೆ. 59 ಅಂಕಗಳು ಆ ವಿದ್ಯಾರ್ಥಿಗೆ ಹೆಚ್ಚುವರಿ ಬಂದಿವೆ. 2020ರಲ್ಲಿ ಅಂಕಗಳ ವ್ಯತ್ಯಾಸ ಗರಿಷ್ಠ 35, 2021ರಲ್ಲಿ ಗರಿಷ್ಠ ಅಂಕ 21 ಆಗಿತ್ತು.

479 ವಿದ್ಯಾರ್ಥಿಗಳು ತಾವು ಗಳಿಸಿದ್ದಕ್ಕಿಂತ ಕಡಿಮೆ ಅಂಕ ಪಡೆದಿದ್ದಾರೆ. ಅಂತಹ ವಿದ್ಯಾರ್ಥಿಗಳು ಕಳೆದುಕೊಂಡ ಗರಿಷ್ಠಅಂಕ 20.

ಮರುಎಣಿಕೆಗೆ ಅರ್ಜಿ ಸಲ್ಲಿಸಿದ್ದ 1,249 ವಿದ್ಯಾರ್ಥಿಗಳಲ್ಲಿ ಹಲವು ವಿದ್ಯಾರ್ಥಿಗಳ ಅಂಕಗಳು ಹೆಚ್ಚಳವಾಗಿವೆ. ಅನುತ್ತೀರ್ಣನಾಗಿದ್ದ ಒಬ್ಬ ವಿದ್ಯಾರ್ಥಿ 66 ಹೆಚ್ಚುವರಿ ಅಂಕಗಳನ್ನು ಪಡೆದಿರುವುದು ಎಣಿಕೆಯ ಕಾರ್ಯದಲ್ಲೂ ಮೌಲ್ಯಮಾಪಕರು ಗಂಭೀರಲೋಪ ಎಸಗಿರುವುದು ಬೆಳಕಿಗೆ ಬಂದಿದೆ.

ಉತ್ತೀರ್ಣನಾಗಿದ್ದ ಒಬ್ಬ ವಿದ್ಯಾರ್ಥಿ ಮಾತ್ರ ನಾಲ್ಕು ಅಂಕಗಳನ್ನು ಕಳೆದುಕೊಂಡು ಅನುತ್ತೀರ್ಣ ಆಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT