ಭಾನುವಾರ, ಏಪ್ರಿಲ್ 18, 2021
24 °C

ಫುಲ್ ಬ್ರೈಟ್ ಕಾರ್ಯಕ್ರಮದ 75ನೇ ವಾರ್ಷಿಕೋತ್ಸವ, ಫೆಲೋಶಿಪ್‌ಗೆ ಅರ್ಜಿ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯುನೈಟೆಡ್ ಸ್ಟೇಟ್ಸ್-ಇಂಡಿಯಾ ಎಜುಕೇಷನಲ್ ಫೌಂಡೇಶನ್ (USIEF) ಫುಲ್ ಬ್ರೈಟ್-ನೆಹರು ಮತ್ತು ಇತರ ಫುಲ್ ಬ್ರೈಟ್ ಫೆಲೋಶಿಪ್‌ಗಳಿಗಾಗಿ ತನ್ನ ವಾರ್ಷಿಕ ಸ್ಪರ್ಧೆಯನ್ನು ಪ್ರಾರಂಭಿಸುತ್ತಿದೆ.  

ಅಮೆರಿಕದ ಡಿಪಾರ್ಟ್‌ಮೆಂಟ್ ಆಫ್ ಸ್ಟೇಟ್ ಮತ್ತು ಭಾರತದ ವಿದೇಶಾಂಗ ಸಚಿವಾಲಯಗಳ ಧನಸಹಾಯದಿಂದ ಈ ಫೆಲೋಶಿಪ್ ನಡೆಸಲಾಗುತ್ತಿದೆ. ಭಾರತದ ಅತ್ಯುತ್ತಮ ವಿದ್ಯಾರ್ಥಿಗಳು, ವಿದ್ವಾಂಸರು, ಶಿಕ್ಷಕರು, ಕಲಾವಿದರು ಮತ್ತು ಎಲ್ಲಾ ಹಿನ್ನೆಲೆಯ ವೃತ್ತಿಪರರಿಗೆ ಈ ಅರ್ಜಿ ಸಲ್ಲಿಸಲು ಈ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. 

'ಅಮೆರಿಕ  ಮತ್ತು ಭಾರತದ ಬೆಂಬಲದಿಂದ ಅಮೆರಿಕದ ಆಸ್ಟಿನ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ಎಲ್‌ಎಲ್‌ಎಂ ಕೋರ್ಸ್ ಪೂರ್ಣಗೊಳಿಸಲು ಸಾಧ್ಯವಾಯಿತು. ಇತಿಹಾಸ ಮತ್ತು ಸರ್ಕಾರದ ಕೋರ್ಸ್‌ಗಳನ್ನು ತೆಗೆದುಕೊಳ್ಳುವುದರಿಂದ ಉತ್ತಮ ಪ್ರಯೋಜನವಾಗಿದೆ ಹಾಗೂ ಇಲ್ಲಿನ ಕಲಿಕೆ ಕಾನೂನಿನ ಬಗ್ಗೆ ನನ್ನ ದೃಷ್ಟಿಕೋನಗಳನ್ನು ಅದು ಬಹಳ ವಿಸ್ತರಿಸಿತು' ಎನ್ನುತ್ತಾರೆ.

ಪೆನ್ಸಿಲ್ವೇನಿಯಾ ಸ್ಟೇಟ್ ಯೂನಿವರ್ಸಿಟಿಯ ಫುಲ್‌ಬ್ರೈಟ್-ನೆಹರು ಡಾಕ್ಟರಲ್ ರಿಸರ್ಚ್ ಫೆಲೋಶಿಪ್ ಪಡೆದಿರುವ ಆಕರ್ಷ್ ವರ್ಮಾ, 'ನೀರಿನಿಂದ ಲವಣಾಂಶ ತೆಗೆಯುವ ಸಾಧ್ಯತೆಗಳನ್ನು ವಿಸ್ತರಿಸಲು ಸಹಾಯ ಮಾಡುವ ಸಂಶೋಧನೆ ನಡೆಸಲು ಈ ಫೆಲೋಶಿಪ್ ಅನುವು ಮಾಡಿತು ಎನ್ನುತ್ತಾರೆ. 
ಈ ಬಾರಿ ವಿಶ್ವದಾದ್ಯಂತ ಅಮೆರಿಕ ಸರ್ಕಾರದ ಫುಲ್ ಬ್ರೈಟ್ ಕಾರ್ಯಕ್ರಮದ 75ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಇದು ಸೆನೆಟರ್ ಜೆ. ವಿಲಿಯಂ ಫುಲ್‌ಬ್ರೈಟ್ ಅವರ 'ಕೊಂಚ ಹೆಚ್ಚು ಜ್ಞಾನ, ಕೊಂಚ ಹೆಚ್ಚು ಕಾರಣ ಮತ್ತು ವಿಶ್ವ ವ್ಯವಹಾರಗಳಲ್ಲಿ ಸ್ವಲ್ಪ ಹೆಚ್ಚು ಸಹಾನುಭೂತಿ' ತರುವ ಗುರಿ ಪೂರೈಸುವ ಬದ್ಧತೆಯನ್ನು ಎತ್ತಿ ಹಿಡಿಯಲಿದೆ. 

USIEF ಈಗ 2022-23ನೇ ಶೈಕ್ಷಣಿಕ ವರ್ಷಕ್ಕೆ ಭಾರತದ ನಾಗರಿಕರಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದ್ದು, ಅಮೆರಿಕನ್ ಮತ್ತು ಭಾರತೀಯ ವಿಷಯ-ತಜ್ಞರು ಮತ್ತು ಫುಲ್‌ಬ್ರೈಟ್ ಹಳೆಯ ವಿದ್ಯಾರ್ಥಿಗಳನ್ನು ಒಳಗೊಂಡ ಆಯ್ಕೆ ಸಮಿತಿಗಳು ಈ ಫೆಲೋಶಿಪ್‌ಗಳನ್ನು ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು, ಶಿಕ್ಷಕರು, ನೀತಿ ರೂಪಕರು, ನಿರ್ವಾಹಕರು ಮತ್ತು ವೃತ್ತಿಪರರಿಗೆ ಕಲೆ, ಮಾನವಿಕತೆ, ಸಾಮಾಜಿಕ ವಿಜ್ಞಾನ ಮತ್ತು STEM ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ನೀಡುತ್ತವೆ. ಹೆಚ್ಚಿನ ವಿವರಗಳಿಗಾಗಿ, www.usief.org.in ಗೆ ಭೇಟಿ ನೀಡಿ. 

ಅರ್ಜಿದಾರರು ip@usief.org.in ಗೆ ಪ್ರಶ್ನೆಗಳನ್ನು ಕಳುಹಿಸಬಹುದು ಅಥವಾ ನವದೆಹಲಿ, ಚೆನ್ನೈ, ಹೈದರಾಬಾದ್, ಕೋಲ್ಕತಾ, ಅಥವಾ ಮುಂಬೈಯಲ್ಲಿರುವ ಯುಎಸ್ಐಇಎಫ್ ಕಚೇರಿಗಳಲ್ಲಿ ಒಂದನ್ನು ಸಂಪರ್ಕಿಸಬಹುದು. ತಮಿಳುನಾಡು, ಕರ್ನಾಟಕ, ಕೇರಳ, ಮತ್ತು ಕೇಂದ್ರಾಡಳಿತ ಪ್ರದೇಶಗಳಾದ ಲಕ್ಷದ್ವೀಪ ದ್ವೀಪಗಳು, ಪುದುಚೇರಿ, ಮತ್ತು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಿರೀಕ್ಷಿತ ಅರ್ಜಿದಾರರು usiefchennai@usief.org.in ಗೆ ಬರೆಯಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು