ಅಫಜಲಪುರ: ‘ವಿಶ್ವ ಮಾನವತೆಯ ಮೌಲ್ಯಗಳು, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಸಂದೇಶವನ್ನು ಸಾರಿದ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ’ ಎಂದು ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ತಿಳಿಸಿದರು.

ತಾಲ್ಲೂಕಿನ ಬಡದಾಳ ಗ್ರಾಮದ ಬುದ್ಧನಗರದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಬುದ್ದ–ಬಸವ–ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮಹಾನಾಯಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ನಾಗೇಶ ಕೊಳ್ಳಿ ಹಾಗೂ ಸಿದ್ದಾರ್ಥ ಡಿಗ್ರಿ ಕಾಲೇಜಿನ ಪ್ರಾಚಾರ್ಯ ಉದಯಕುಮಾರ ವಾಡೇಕರ್ ಮಾತನಾಡಿ, ‘ಅಂಬೇಡ್ಕರ್ ಅವರು ಕಷ್ಟದಲ್ಲೂ ಶಿಕ್ಷಣ ಪಡೆದು ದೇಶದ ಶೋಷಿತ ಸಮುದಾಯಗಳಿಗೆ ನ್ಯಾಯ ಒದಗಿಸಿದ್ದಾರೆ. ಅಂಬೇಡ್ಕರ್ ಆಶಯ ಈಡೇರಬೇಕಾದರೆ ನಾವೆಲ್ಲರೂ ಚೆನ್ನಾಗಿ ಓದಬೇಕು’ ಎಂದು ನುಡಿದರು.

ಖಾಜಪ್ಪ ಸಿಂಗೆ ಮಾತನಾಡಿ, ‘ತಾನು ಅತ್ಯಂತ ಬಡತನದಲ್ಲಿ ಬೆಳೆದಿದ್ದರೂ ಕುಟುಂಬದವರ ಹಾಗೂ ಓಣಿಯ ಹಿರಿಯರ ಪ್ರೋತ್ಸಾಹದಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಿ ಇಂದು ಎಂಜಿನಿಯರ್ ಆಗಿ ಉತ್ತಮ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಓದಲು ಅನುಕೂಲತೆ ಇಲ್ಲದ್ದಕ್ಕೆ ಶಾಲೆ, ಕಾಲೇಜು ಬಿಡುವ ಮಕ್ಕಳಿಗೆ ನನ್ನ ಕೈಲಾದ ಸಹಾಯ ಮಾಡುವ ಮೂಲಕ ಅಂಬೇಡ್ಕರ್ ಅವರ ಕನಸಿನ ಪ್ರಬುದ್ಧ ಭಾರತದ ಸಾಕಾರಕ್ಕೆ ಶ್ರಮಿಸುತ್ತೇನೆ’ ಎಂದರು.

ಕೆಕೆಆರ್ಟಿಸಿ ಸಿಬ್ಬಂದಿ ತಿಪ್ಪಣ್ಣ ಸಿಂಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದ್ಯಮಿ ಅಶೋಕ ಗುತ್ತೇದಾರ ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ಸಿದ್ದಯ್ಯ ಗುತ್ತೇದಾರ, ಸಾತು ಮುತ್ಯಾ ಮಾತಾರಿ, ಮಲ್ಲಿನಾಥ ಅತನೂರೆ, ಶರಣಬಸಪ್ಪ ಅತನೂರೆ, ಮಡಿವಾಳಪ್ಪ ಗಂಗಾ, ಗೋರಖನಾಥ ಮಳಗಿ, ದತ್ತು ತೆನ್ನಳ್ಳಿ, ಮಹಾಂತೇಶ ಬಡದಾಳ, ಪ್ರಕಾಶ ಖೈರಾಟ, ವಿಜಯಕುಮಾರ ಶಂಕರಶೆಟ್ಟಿ ಸೇರಿದಂತೆ ಅನೇಕರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-31-1310458240

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.