ಅಫಜಲಪುರ: ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಎಂ.ಎಸ್. ರಾಜೇಶ್ವರಿ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.

ನಿವೃತ್ತ ಪ್ರಾಚಾರ್ಯ ಎಸ್.ವೈ. ಪಾಟೀಲ ಮಾತನಾಡಿ, ‘ರಾಜೇಶ್ವರಿ ಅವರು ತಮ್ಮ ವೃತ್ತಿ ಜೀವನದುದ್ದಕ್ಕೂ ಕರ್ತವ್ಯನಿಷ್ಠೆ, ಶಿಸ್ತು ಹಾಗೂ ವಿದ್ಯಾರ್ಥಿ ಕೇಂದ್ರಿತ ಬೋಧನೆಯ ಮೂಲಕ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ’ ಎಂದರು.

ಪ್ರಕಾಶ ಜಮಾದಾರ ಮಾತನಾಡಿ, ‘ಸರ್ಕಾರಿ ಕಾಲೇಜುಗಳ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಆ ನಿಟ್ಟಿನಲ್ಲಿ ರಾಜೇಶ್ವರಿ ಅವರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿ ಕಾಲೇಜಿನ ಶೈಕ್ಷಣಿಕ ವಾತಾವರಣವನ್ನು ಉತ್ತಮಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ’ ಎಂದರು.

ಎಂ.ಎಸ್. ರಾಜೇಶ್ವರಿ ಮಾತನಾಡಿ, ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ, ಅದು ಉತ್ತಮ ಸಮಾಜ ನಿರ್ಮಾಣದ ಜವಾಬ್ದಾರಿ. ಸೇವಾ ಅವಧಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ’ ಎಂದರು.

ಎಂ.ಎಸ್. ರಾಜೇಶ್ವರಿ ಅವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ನಿವೃತ್ತ ಪ್ರಾಂಶುಪಾಲ ಪಿ.ಎಸ್. ಕೊಕಟನೂರ, ಪ್ರೊ.ವೆಂಕಟೇಶ ನಿರಡಗಿ, ವಿನಾಯಕ ಸಾಕ್ರೆ, ನೌಕರರ ಸಂಘದ ಕಾರ್ಯದರ್ಶಿ ಬಸವರಾಜ ಕಲ್ಲೂರ, ಹೀರು ರಾಠೋಡ, ಸಂಗಣ್ಣ ಎಂ. ಸಿಂಗೆ, ರಾಜಶೇಖರ ಪಾಟೀಲ, ಸಂತೋಷ ಹುಗ್ಗಿ, ಶಾಂತಲಾ, ಚಿನ್ನಾ ಆಸೆಪ್ಪ, ಮಹ್ಮದ್ ಯೂನುಷ್, ಸಾವಿತ್ರಿ ಕೃಷ್ಣ, ಭಾರತಿ ಬೂಸಾರೆ, ದತ್ತಾತ್ರೇಯ ಸಿ.ಎಚ್., ಪ್ರವೀಣ ಸೇಡಂಕರ್, ಶರಣು ಅವಟೆ, ಅಮೃತಾ ಕಟಕೆ, ಇಂದುಮತಿ ಪಾಟೀಲ, ಎಸ್.ಎಸ್. ತಾವರಖೇಡ, ವೈಜನಾಥ ಭಾವಿ, ವೀರಭದ್ರ ಅಡಗಲ್, ಶಿವಕುಮಾರ ಯಾದಗಿರಿ, ಗೌರಿಶಂಕರ, ಶರಣಗೌಡ ಪಾಟೀಲ, ಸೂಗುರೇಶ್ವರ, ಪರ್ವಿನ್ ನಸ್ರೀನ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-31-1963303002

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.