ಬಸವಕಲ್ಯಾಣ: ‘ದೇಶದ ಉತ್ತರದ ಹಾಗೂ ಇತರೆ ಎಲ್ಲ ರಾಜ್ಯಗಳ ಪಠ್ಯದಲ್ಲಿ ಅಕ್ಕಮಹಾದೇವಿಯ ಚರಿತ್ರೆ ಅಳವಡಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು’ ಎಂದು ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಸಲಹೆ ನೀಡಿದರು.

ನಗರದ ಬಂದವರ ಓಣಿಯಲ್ಲಿ ಅಕ್ಕಮಹಾದೇವಿ ಅನುಭಾವ ಪೀಠದಿಂದ ಗುರುವಾರ ಆಯೋಜಿಸಿದ್ದ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬಂದವರ ಓಣಿಯು 12ನೇ ಶತಮಾನದಲ್ಲಿ ಕಲ್ಯಾಣಕ್ಕೆ ಬಂದ ಶರಣರಿಗೆ ಪ್ರಥಮ ಆಶ್ರಯ ತಾಣವಾಗಿತ್ತು. ಇಲ್ಲಿ ಅಕ್ಕ ಮಹಾದೇವಿ ಅವರ ಗವಿ ಸಹ ಇದ್ದು ಸುಂದರ ಪರಿಸರವಿದೆ. ಅಕ್ಕನಂತೆ ಜೀವನದಲ್ಲಿ ಗುರಿ ಹೊಂದಿರಬೇಕು. ಯಾವುದೇ ಕೆಲಸದಲ್ಲಿ ಸ್ಪಷ್ಟತೆ ಇರಬೇಕು’ ಎಂದರು.

ಲಿಂಗವಂತ ಹರಳಯ್ಯ ಪೀಠಾಧ್ಯಕ್ಷೆ ಅಕ್ಕ ಗಂಗಾಂಬಿಕಾ ಮಾತನಾಡಿ, ‘ಅಕ್ಕನ ವಚನಗಳು ಸ್ತ್ರೀ ಕುಲಕ್ಕೆ ಧೈರ್ಯ ತುಂಬುತ್ತವೆ. ಆತ್ಮವಿಶ್ವಾಸ ಹೆಚ್ಚಿಸುತ್ತವೆ. ಅಕ್ಕ ಅಧ್ಯಾತ್ಮ ಸಾಧನೆಯ ನವಯುಗ ಆರಂಭಿಸಿದರು’ ಎಂದರು.

ಸತ್ಯಕ್ಕತಾಯಿ ಮಾತನಾಡಿ, ‘ಅಕ್ಕನ ಜೀವನ ಭಕ್ತಿ, ತ್ಯಾಗ ಮತ್ತು ಆತ್ಮಸಾಕ್ಷಾತ್ಕಾರದ ಪ್ರತೀಕ’ ಎಂದರು.

ಹಂದಿಗುಂದ ಶಿವಾನಂದ ಸ್ವಾಮೀಜಿ, ಸಿದ್ದಬಸವ ಕಬೀರ ಸ್ವಾಮೀಜಿ, ಸಂಗಮೇಶ ತೊಗರಖೇಡೆ, ನಿರ್ಮಲಾ ಶಿವಣಕರ್ ಮಾತನಾಡಿದರು.

ಬಸವೇಶ್ವರ ದೇವಸ್ಥಾನ ಸಮಿತಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಕುರಕೋಟೆ ಧ್ವಜಾರೋಹಣಗೈದರು. ರಂಜನಾ ಭೂಶೆಟ್ಟೆ, ಮಂಜುನಾಥ ಹೇಮಶೆಟ್ಟಿ ಸಂಗೀತ ಪ್ರಸ್ತುತಪಡಿಸಿದರು. ಇದಕ್ಕೂ ಮೊದಲು ತೊಟ್ಟಿಲು ಕಾರ್ಯಕ್ರಮ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-33-1646718497

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.