ಭಾಲ್ಕಿ: ವೈರಾಗ್ಯನಿಧಿ, ವೀರವಿರಾಗಿಣಿ ಅಕ್ಕಮಹಾದೇವಿಯವರು ಸ್ತ್ರೀ ಕುಲದ ಧೈರ್ಯ, ಸ್ಥೈರ್ಯ, ಸ್ವಾಭಿಮಾನದ ನಿಧಿಯಾಗಿದ್ದಾರೆ ಎಂದು ಬೀದರ್ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವ ಪರಮೇಶ್ವರ ನಾಯ್ಕ ಟಿ. ಹೇಳಿದರು.

ತಾಲ್ಲೂಕಿನ ಹಾಲಹಳ್ಳಿ (ಕೆ) ಗ್ರಾಮದ ಬೀದರ್ ವಿಶ್ವವಿದ್ಯಾಲಯದಲ್ಲಿ ಅಕ್ಕಮಹಾದೇವಿ ಜಯಂತಿ ನಿಮಿತ್ತ ಅಕ್ಕಮಹಾದೇವಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

‘ಅಕ್ಕ ಮಹಾದೇವಿಯವರ 434 ವಚನಗಳು ತುಂಬಾ ಭಾವಗೀತಾತ್ಮಕವಾಗಿವೆ. ಅಕ್ಕನ ಅಂತರಂಗದ ದರ್ಶನವಾಗುವುದು ಅವರ ಅಮೂಲ್ಯ ವಚನಗಳಲ್ಲಿ. ಉಡುತಡಿಯಿಂದ ಕಲ್ಯಾಣ, ಕಲ್ಯಾಣದಿಂದ ಶ್ರೀಶೈಲದ ಕದಳಿವನದವರೆಗಿನ ಅಕ್ಕನವರ ಪಯಣ ಅಗ್ರಗಣ್ಯವಾದುದು’ ಎಂದು ತಿಳಿಸಿದರು.

ಅಕ್ಕಮಹಾದೇವಿ ಅವರ ಜೀವನ, ಸಾಧನೆ ಕುರಿತು ರಾಮಚಂದ್ರ ಗಣಾಪೂರ ವಿಶೇಷ ಉಪನ್ಯಾಸ ನೀಡಿದರು.

ವಿಶೇಷಾಧಿಕಾರಿ ರವೀಂದ್ರನಾಥ ವಿ.ಗಬಾಡಿ ಸೇರಿದಂತೆ ಅನೇಕರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260403-33-700214275

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.