ಆಳಂದ: ತಾಲ್ಲೂಕಿನಲ್ಲಿನ ಶೈಕ್ಷಣಿಕ ವಾತಾವರಣದ ಪ್ರಗತಿಗೆ ಸಮುದಾಯದ ಸಹಭಾಗಿತ್ವವು ಅಗತ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ರಂಗಸ್ವಾಮಿ ಶೆಟ್ಟಿ ತಿಳಿಸಿದರು.

ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಸರ್ಕಾರಿ ಶಾಲಾ ಶಿಕ್ಷಕರ ಸಂಘ ಹಾಗೂ ಅನುದಾನಿತ ಶಾಲಾ ಶಿಕ್ಷಕರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರಂಗಸ್ವಾಮಿ ಶೆಟ್ಟಿ ಅವರ ವಯೋ ನಿವೃತ್ತಿ ನಿಮಿತ್ತ ಸಮಾರಂಭದಲ್ಲಿ ಶಿಕ್ಷಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

‘ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.40ರಷ್ಟು ಫಲಿತಾಂಶ ಇತ್ತು, ಇದನ್ನು ಸವಾಲಾಗಿ ಸ್ವೀಕರಿಸಿ ಎಲ್ಲ ಮುಖ್ಯಶಿಕ್ಷಕರು, ಶಿಕ್ಷಕರು ಹಾಗೂ ಶಿಕ್ಷಣ ಇಲಾಖೆ ಸಿಬ್ಬಂದಿಗಳ ಸಹಕಾರದಲ್ಲಿ ಶೇ.90ಕ್ಕೆ ಸಾಧಿಸಿದ್ದು ಸಂತೃಪ್ತಿ ಇದೆ. ಆದರೆ ಶಾಲೆ ಜತೆಯಲ್ಲಿ ಮನೆಯಲ್ಲೂ ಸಹ ಮಕ್ಕಳಿಗೆ ಕಲಿಕಾ ಸೌಲಭ್ಯ, ಪರಿಸರ ನಿರ್ಮಿಸುವ ಅರಿವು ಪಾಲಕರಲ್ಲಿ ಮೂಡಿಸಬೇಕಿದೆ’ ಎಂದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ ಸನ್ಮುಖ ಮಾತನಾಡಿ, ‘ವಿ.ರಂಗಸ್ವಾಮಿ ಶೆಟ್ಟಿ ಅವರು 13 ತಿಂಗಳಲ್ಲಿ ತಾಲ್ಲೂಕಿನ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಮನಸ್ಸು ಗೆದ್ದಿದ್ದಾರೆ, ಅವರ ನಡೆ ನುಡಿ, ವಿದ್ಯಾರ್ಥಿ ಸ್ನೇಹಿ ಗುಣ ಹಾಗೂ ವೃತ್ತಿಬದ್ದತೆಯು ಮಾದರಿಯಾದದು’ ಎಂದರು.

ತಹಶೀಲ್ದಾರ್ ಅಣ್ಣಾರಾವ ಪಾಟೀಲ, ತಾಪಂ ಇಒ ಮಾನಪ್ಪ ಕಟ್ಟಿಮನಿ ,ಮರೆಪ್ಪ ಬಡಿಗೇರ, ಶ್ರೀಶೈಲ ಮಾಡ್ಯಾಳೆ, ಪಂಕಜ ಪಾಟೀಲ ಮಾತನಾಡಿದರು.

ಶಿಕ್ಷಕರ ಸಂಘದ ಅಧ್ಯಕ್ಷರಾದ ವಿಜಯಕುಮಾರ ಜಿಡಗೆ, ಮಲ್ಲಿಕಾರ್ಜುನ ಖಜೂರಿ, ಎಲ್ ಎಸ್ ಬೀದಿ, ಮಹಾದೇವ ಗುಣಕಿ, ಶಿವಲಿಂಗಪ್ಪ ಬಾವಿಮನಿ, ಚಂದ್ರಶೇಖರ ಪೂಜಾರಿ, ವಿಜಯಲಕ್ಷ್ಮಿ ಹೋಳ್ಕರ್, ಶರಣಬಸಪ್ಪ ಕೊಡ್ಲಾ, ಶೈಲಜಾ ಪೋಮಾಜಿ, ಸೋಮಶೇಖರ ಜಳಕೋಟೆ, ಮಿನ್ನಾಜಿ ಸೂರ್ಯವಂಶಿ, ಅರವಿಂದ ಬಾಸಗಿ, ಪ್ರಕಾಶ ಅಂಬಲಗಿ, ನಾಗಪ್ಪ ಕಾಮನಳ್ಳಿ, ಶಿವಬಸಪ್ಪ ಟಕ್ಕಳಕಿ, ಶಬೀರ ಅಲಿ ನದಾಪ್, ದಿನೇಶ ರೆಡ್ಡಿ, ಶ್ರೀಮಂತ ಪಾಟೀಲ, ಕಲ್ಯಾಣಿ ಬಿಜ್ಜರಗಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-31-1562506425

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.