ಅಳವಂಡಿ: ‘ಮಹಿಳೆಯ ಮುಟ್ಟಿನ ಆರೋಗ್ಯದ ಕುರಿತು ಕುಟುಂಬದಲ್ಲಿ ನಡೆಯುವ ಕೆಲ ತಪ್ಪು ಕಲ್ಪನೆಗಳು ಹಾಗೂ ಮೂಡನಂಬಿಕೆಯ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಕೆಎಚ್ಪಿಟಿ ಕ್ಷೇತ್ರ ಸಂಯೋಜಕ ಮಲ್ಲಪ್ಪ ಬಡಿಗೇರ ಹೇಳಿದರು.

ಸಮೀಪದ ಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರ್ನಾಟಕ ಆರೋಗ್ಯ ಸಂವರ್ಧನ ಸಂಸ್ಥೆಯ ಸ್ಪೂರ್ತಿ ಯೋಜನೆಯಡಿ ಹದಿಹರೆಯದ ಹೆಣ್ಣು ಮಕ್ಕಳಿಗಾಗಿ ಆಯೋಜಿಸಿದ್ದ ಋತುಸ್ನೇಹಿ ಗ್ರಾಮ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮುಟ್ಟಾದ ಯಾವುದೇ ಮಹಿಳೆಯರನ್ನು ಮೈಲಿಗೆ ಎಂದು ಬಿಂಬಿಸಬಾರದು. ಹದಿಹರೆಯದ ಹೆಣ್ಣುಮಕ್ಕಳು ತಮಗೆ ಮುಟ್ಟು ಕಾಣಿಸಿಕೊಂಡಾಗ ತಮ್ಮ ಕುಟುಂಬ ಹಾಗೂ ಹತ್ತಿರದ ಸ್ನೇಹಿತೆಯೊಂದಿಗೆ ಹಂಚಿಕೊಳ್ಳಬೇಕು’ ಎಂದರು.

ಅಂಗನವಾಡಿ ಮೇಲ್ವೀಚಾರಕಿ ರೆಹಮತಬೀ ಮಾತನಾಡಿ, ‘ಹೆಣ್ಣು ಮಕ್ಕಳಿಗೆ ಋತುಚಕ್ರದ ಚಲನವಿರುತ್ತದೆ. ಹೀಗಾಗಿ ಯಾವುದೇ ಮುಜುಗುರವಿಲ್ಲದೇ ತಮ್ಮ ನೈಸರ್ಗಿಕ ಪ್ರಕ್ರಿಯೆಯ ಬಗ್ಗೆ ಮಾಹಿತಿ ನೀಡಬಹುದು. ಮುಟ್ಟಿನಿಂದಲೇ ಹುಟ್ಟು ಹೀಗಾಗಿ ಎಲ್ಲಾ ಮಹಿಳೆಯರು ಮುಟ್ಟು ಸಂದರ್ಭದಲ್ಲಿ ಬಹಳ ಸ್ವಚ್ಛತೆಯಿಂದ ಇರಬೇಕು. ನಿಮ್ಮ ಆರೋಗ್ಯದ ಸುರಕ್ಷತೆಗಾಗಿ ಮನೆಯಲ್ಲಿ ಮಹಿಳೆಯರು ಸಮತೋಲನದ ಪೌಷ್ಟಿಕ ಆಹಾರವನ್ನು ಸೇವಿಸಬೇಕು’ ಎಂದರು.

ಸಮುದಾಯ ಆರೋಗ್ಯ ಅಧಿಕಾರಿ ಆಸ್ಮಾ ಮಾತನಾಡಿ, ‘ಮುಟ್ಟು ಕಾಣಿಸಿಕೊಂಡ ಮಹಿಳೆಯರು ಸ್ವಚ್ಛತೆಯಿಂದ ಕಾಪಾಡಿಕೊಳ್ಳಬೇಕು. ಹಾಗೂ ನಿಮ್ಮ ಮುಟ್ಟಿನ ಬಗ್ಗೆ ಏನೇ ಸಮಸ್ಯೆ ಇದ್ದರೂ ಸಹ ಹತ್ತಿರ ಆರೋಗ್ಯ ಇಲಾಖೆಗೆ ಭೇಟಿ ನೀಡಬೇಕು’ ಎಂದರು.

ಮುಖ್ಯ ಶಿಕ್ಷಕ ಗುರುರಾಜ ಪಾಟೀಲ ಮಾತನಾಡಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಸಂಜೀವಿನಿ ಜಿಲ್ಲಾ ವ್ಯವಸ್ಥಾಪಕ ವೆಂಕೋಬ, ತಾಲ್ಲೂಕು ವ್ಯವಸ್ಥಾಪಕ ಸುನಿಲ್, ಎಸ್ಡಿಎಂಸಿ ಅಧ್ಯಕ್ಷ ಗುಡದಪ್ಪ ಚಿಲವಾಡಗಿ, ಆರೋಗ್ಯ ನಿರೀಕ್ಷಣಾಧಿಕಾರಿ ಗವಿಸಿದ್ದಪ್ಪ, ಪ್ರಮುಖರಾದ ರಮೇಶ ಹಳ್ಳಿಕೇರಿ, ಈರಪ್ಪ ಮೇಟಿ, ದೇವೇಂದ್ರ ಹಳ್ಳಿ, ರಾಮಣ್ಣ ಅಡವಿಸೋಮಾಪೂರ, ಕೆಎಚ್ಪಿಟಿಯ ಸಮುದಾಯ ಸಂಘಟಕ ಜುನಾಬಿ ವಡ್ಡಟ್ಟಿ, ಅನ್ನಪೂರ್ಣ, ಸುನಂದಾ, ಅಕ್ಕಮ್ಮ, ಆಶಾ, ಸಂಜನಾ, ಶಶಿಕಲಾ, ಗಾಯತ್ರಿ, ಭವ್ಯ, ಪ್ರತಿಭಾ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-35-2132053227

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.