ಅಳವಂಡಿ: ‘ವಿದ್ಯಾರ್ಥಿಗಳಿಗೆ ಶಿಸ್ತು, ಸಮಯ ಪ್ರಜ್ಞೆ ಅಳವಡಿಸಿಕೊಳ್ಳಬೇಕು. ಕಲಿಕೆಯ ಜೊತೆಗೆ ನಿಮ್ಮ ಗುರಿಯತ್ತ ಆತ್ಮವಿಶ್ವಾಸದಿಂದ ಮುನ್ನಡೆಯಬೇಕು. ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಸಮಾಜದ ಆಧಾರ ಸ್ತಂಭವಾಗಬೇಕು’ ಎಂದು ಪ್ರಾಚಾರ್ಯ ನಾಗರಾಜ ಹಾವಿನಾಳ ಹೇಳಿದರು.

ಗ್ರಾಮದ ಶಿವಮೂರ್ತಿಸ್ವಾಮಿ ಇನಾಮದಾರ ಕಟ್ಟಿಮನಿ ಹಿರೇಮಠ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಿವೃತ್ತ ಪ್ರಾಚಾರ್ಯ ಎಂ.ಎಸ್. ಹೊಟ್ಟಿನ ಮಾತನಾಡಿ, ‘ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ವಿನಯ, ಸರಳತೆ ಮತ್ತು ಕಠಿಣ ಪರಿಶ್ರಮ ಅಳವಡಿಸಿಕೊಂಡು, ಗುರುವಿನ ಮಾರ್ಗದರ್ಶನ ಚಾಚು ತಪ್ಪದೇ ಪಾಲಿಸಿ, ಉನ್ನತ ಜ್ಞಾನ ಪಡೆಯುವಂತಾಗಬೇಕು’ ಎಂದು ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಬಸವರಡ್ಡೆಪ್ಪ ಹಳ್ಳಿಕೇರಿ ಮಾತನಾಡಿ, ‘ಅಳವಂಡಿ ಹೋರಾಟದ ಭೂಮಿಯಾಗಿದೆ. ಶಿಕ್ಷಣಕ್ಕೆ ಅಗತ್ಯ ಎಲ್ಲ ಸೌಲಭ್ಯಗಳು ಇಲ್ಲಿವೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ಸಮಯವನ್ನು ವ್ಯರ್ಥ ಮಾಡದೆ, ವಿನಯ–ವಿಧೇಯ ಅಳವಡಿಸಿಕೊಂಡು ಸಾಧನೆಯತ್ತ ಮುನ್ನಡೆಯಬೇಕು’ ಎಂದು ಹೇಳಿದರು.

ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ನೆನಪು–ಅನುಭವ ಮತ್ತು ಕಲಿಕಾ ದಿನಗಳನ್ನು ಸ್ಮರಿಸಿದರು. ನಂತರ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಭುಜಂಗಸ್ವಾಮಿ ಇನಾಮದಾರ, ಚೌಡಪ್ಪ ಜಂತ್ಲಿ, ಅರವಿಂದಪ್ಪ ಬಿರಾದಾರ, ಮಂಜುನಾಥ ಹಿರೇಮಠ, ನಜೀರುದ್ದೀನ್ ಬಿಸರಳ್ಳಿ, ಇಸ್ಮಾಯಿಲ್ ಕವಲೂರು, ಹನುಮಂತಪ್ಪ ಜಾಣಗಾರ, ಸಾಗರ ಉಪ್ಪಾರ, ಉಮಾ ಕರ್ಕಿಹಳ್ಳಿ, ಪ್ರಾಧ್ಯಾಪಕರಾದ ಜಗದೀಶ ಆಲದಕಟ್ಟಿ, ಶಂಕ್ರಪ್ಪ, ಪ್ರವೀಣಕುಮಾರ, ಮಹೇಶ ಕುಮಾರ, ರೇಷ್ಮಾ, ಹಂಪಾದೇವಿ, ಸಾಲಿಯಾಬೇಗಂ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-35-2076304326

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.