ಅಳ್ನಾವರ: ‘ಕಾಲೇಜು ದಿನಗಳಲ್ಲಿ ಪಡೆದ ಶಿಕ್ಷಣ, ಸ್ನೇಹ, ಅನುಭವ ಹಾಗೂ ಮೌಲ್ಯಗಳು ಮುಂದಿನ ಜೀವನದ ದಾರಿ ರೂಪಿಸಲು ಸಹಕಾರಿಯಾಗಲಿವೆ. ಕಠಿಣ ಅಧ್ಯಯನ ಮೂಲಕ ಹೆಚ್ಚಿನ ಅಂಕ ಗಳಿಸಲು ಶ್ರಮಿಸುವುದರ ಜೊತೆಗೆ ಸಮಾಜದ ಉತ್ತಮ ನಾಗರಿಕರಾಗಿ ಸೇವೆ ಸಲ್ಲಿಸಲು ಸಜ್ಜಾಗಿ’ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಉಮಾ ಪೂಜಾರ ಹೇಳಿದರು.

ಕಾಲೇಜಿನ ಸಭಾ ಭವನದಲ್ಲಿ ಶನಿವಾರ ಸಾಂಸ್ಕೃತಿಕ ಘಟಕದ ಅಡಿಯಲ್ಲಿ ನಡೆದ ಕಲಾ ಹಾಗೂ ವಾಣಿಜ್ಯ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ‘ಸಾಧನೆ ಮೂಲಕ ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕು. ನಿಮ್ಮ ಗುರಿ ಸಾಧನೆಗೆ ಮಹಾವಿದ್ಯಾಲಯ ಸದಾ ಬೆಂಬಲವಾಗಿರುತ್ತದೆ’ ಎಂದರು.

ವಿದ್ಯಾರ್ಥಿಗಳ ಹಸ್ತ ಪ್ರತಿ ಬ್ಯಾನರ್ ಅನಾವರಣಗೊಳಿಡಲಾಯಿತು. ವಿದ್ಯಾರ್ಥಿನಿಯರ ನೃತ್ಯ ಗಮನ ಸೆಳೆಯಿತು. ಬಿಎ ಮತ್ತು ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿಗಳು ಕಾಲೇಜು ದಿನಗಳ ಅನುಭವ ಹಂಚಿಕೊಂಡರು. ಸಾಂಸ್ಕತಿಕ ಕಾರ್ಯಕ್ರಮಗಳ ರಂಗು ಕಾರ್ಯಕ್ರಮಕ್ಕೆ ಮೆರಗು ತಂದಿತ್ತು. ಆರಂಭದಲ್ಲಿ ಶ್ರೇಯಾ ಕೊಡಕಿ ಪ್ರಾರ್ಥನೆ ಹಾಡಿದರು. ಪ್ರಾಧ್ಯಾಪಕ ದೇವೇಂದ್ರ ತಳವಾರ ಮಾತನಾಡಿದರು.

ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಪರ್ವೀನ್ ಶೇಖ ಹಾಗೂ ಉಪನ್ಯಾಸಕರಾದ ತೇಜಸ್ವಿನಿ, ಬೋಧಕ, ಬೋಧಕೇತರ ಸಿಬ್ಬಂದಿ ಇದ್ದರು.

ಶ್ರೇಯಾ ಖೊಡಕಿ ಪ್ರಾರ್ಥಿಸಿದರು. ಅನಿಲಕುಮಾರ ಖಾತೇದಾರ ಪ್ರಾಸ್ತಾವಿಕ ಮಾತನಾಡಿದರು. ಸುಮತಿ ಸ್ವಾಗತಿಸಿದರು. ಸಂಗೀತಾ ಬಾಗೇವಾಡಿ ಮತ್ತು ಭೂಮಿಕಾ ಪಾಟೀಲ ನಿರೂಪಿಸಿದರು. ಸೌಜನ್ಯ ರಪಾಟಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-24-1975962474

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.