ಅಳ್ನಾವರ: ಸಮೀಪದ ಕಕ್ಕೇರಿ ಗ್ರಾಮದ ಕಕ್ಕಯ್ಯ ಶಿಕ್ಷಣ ಸಂಸ್ಥೆಯ ಶ್ರೀ ಬಿಷ್ಟಾದೇವಿ ಪ್ರೌಢ ಶಾಲೆಯ 1991-92ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದಶಾಲಾ ಆವರಣದಲ್ಲಿ ಈಚೆಗೆ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಯಿತು.

ಗುರುಗಳ ಪಾದಪೂಜೆ ನೆರವೇರಿಸಿ, ಸತ್ಕರಿಸಿ, ಗೌರವ ಸಲ್ಲಿಸಿದ ಹಳೆಯ ವಿದ್ಯಾರ್ಥಿಗಳು, ಶಾಲಾ ದಿನಗಳ ಸಿಹಿ ನೆನಪುಗಳನ್ನು ಸವಿದರು.

ಸಾನ್ನಿಧ್ಯ ವಹಿಸಿದ್ದ ಬಿಳಕಿ ಅವರೊಳ್ಳಿ ಮಠದ ಚನ್ನಬಸವದೇವರು ಆಶೀರ್ವಚನ ನೀಡಿ, ‘ಸೌಲಭ್ಯಗಳ ಕೊರತೆಯ ನಡುವೆಯೂ ಉತ್ತಮ ಶಿಕ್ಷಣ ಪಡೆದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಈ ಶಾಲೆಯ ಹಳೆಯ ವಿದ್ಯಾರ್ಥಿಗಳ ಸೇವೆ ಶ್ಲಾಘನೀಯ. ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಬದುಕು ಕಟ್ಟಿಕೊಂಡು ಸಮಾಜ ನಿರ್ಮಾಣದಲ್ಲಿ ತೊಡಗಬೇಕು’ ಎಂದು ಹೇಳಿದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಶೋಕ ಉಳ್ಳಾಗಡ್ಡಿ, ‘ಶಿಕ್ಷಣ ಸಂಸ್ಥೆ ವಿದ್ಯಾಭ್ಯಾಸವಷ್ಟೇ ಅಲ್ಲದೆ, ಮಾನವೀಯ ಮೌಲ್ಯಗಳನ್ನು ಬಿತ್ತಿ ಉತ್ತಮ ವ್ಯಕ್ತಿತ್ವ ರೂಪಿಸುವ ಕಾರ್ಯ ಮಾಡಿದೆ’ ಎಂದರು.

ಐ.ಜಿ. ಸಂಪಗಾವಿ, ಬಿ.ಜಿ. ಕಿಲಾರಿ, ಎ.ಎನ್.ಎಸ್. ಪಾಟೀಲ, ವಿ.ಡಿ. ಪಿರೋಜಿ, ಡಿ.ಎನ್. ಶಾಹಾಪೂರಮಠ, ಆರ್.ವೈ. ಬೆನ್ನೂರ, ಎಸ್.ಎಸ್. ಗಾಣಿಗೇರ, ಪ್ರಭು ಪ್ರಭುಣ್ಣವರ, ಬಿ.ಎ. ಹುಲಮನಿ, ಎಂ.ಬಿ. ಹೊಸಕೋಟಿ, ಎಸ್.ಎಸ್. ಜಾಧವ, ಪರಶುರಾಮ ಸೆಡೇಕರ ಹಾಗೂ ನಾಗಪ್ಪ ಮಾದರ ಅವರನ್ನು ಸತ್ಕರಿಸಲಾಯಿತು.

ಮುಖ್ಯ ಶಿಕ್ಷಕ ಐ.ಎಫ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-24-32401390

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.