ಅಳ್ನಾವರ: ‘ಮಹಿಳೆಯರಲ್ಲಿ ವಿಶಿಷ್ಟ ಶಕ್ತಿ ಅಡಗಿದೆ. ಶಾಂತಿ, ಸಹನೆಯ ಪ್ರತೀಕವಾದ ಮಹಿಳೆ ಎಲ್ಲ ರಂಗದಲ್ಲಿ ಮುಂದೆ ಬರಬೇಕು’ ಎಂದು ಸಿದ್ಧಾಯಿ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಪಾಂಡುರಂಗ ರೇವಣಕರ ಹೇಳಿದರು.

ರೇವಣಕರ ಸಭಾಭವನದಲ್ಲಿ ಈಚೆಗೆ ಸಿದ್ಧಾಯಿ ಕೆಡಿಟ್ ಸೌಹಾರ್ದ ಸಹಕಾರಿ ಸಂಘ ಹಮ್ಮಿಕೊಂಡ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ದೇಶದ ಮಹಿಳಾ ದಿಗ್ಗಜರ ಜೀವನ ಚರಿತ್ರೆ ಓದಬೇಕು, ಸಮಾಜದಲ್ಲಿ ನಡೆಯುವ ಲವ್ ಜಿಹಾದ್ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು’ ಎಂದರು.

ಕಸ್ತೂಬಾ ಗಾಂಧಿ ಬಾಲಕಿಯರ ವಸತಿ ಶಾಲೆಯ ಮುಖ್ಯ ಶಿಕ್ಷಕಿ ದೀಪಾ ಲಾಡ್ ಉಪನ್ಯಾಸ ನೀಡಿ, ಮಹಿಳೆಯರು ಕಡ್ಡಾಯವಾಗಿ ಶಿಕ್ಷಣ ಪಡೆದು ಪ್ರತಿ ಕ್ಷೇತ್ರದಲ್ಲಿ ಸೇವೆ ಮಾಡಲು ಮುಂದೆ ಬರಬೇಕು ಎಂದರು. ಸಾಮಾಜಿಕ ಚಿಂತಕ ಮಹಾದೇವ ಸಾಗರೇಕರ, ಸವಿತಾ ಮುರಗೋಡ, ಗಂಗಾ ಮಾತನಾಡಿದರು.

ಸಹಕಾರಿಯ ಉಪಾಧ್ಯಕ್ಷ ನಾರಾಯಣ ಪಟೇಲ, ನಿರ್ದೇಶಕರಾದ ಪರಶುರಾಮ ಗಾವಡೆ, ಮದನ್ ಹಿಂಡಸಗೇರಿ, ಬ್ರಹ್ಮಾನಂದ ಬೈಕೇರಿಕರ, ನಿತೇಶ ರೇವಣಕರ, ದತ್ತಾ ನಿಟ್ಟೂರಕರ, ಶುಭಂ ಗಾವಡೆ, ಸಾಧನಾ ಕಿನಾರೆ, ಸ್ವಾತಿ ಬೀಡಿಕರ, ಚಂದ್ರಬಾಗಾ ಪವಾರ ಇದ್ದರು.

ಸುನಿತಾ ಪೆಜೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಕಾಶ ಪೇಡ್ನೇಕರ, ಮಂಜುನಾಥ ನಂದಿಹಳ್ಳಿ, ಕವಿತಾ ರಾಂದೇವಾಡಿ, ಸುನಿತಾ ಬಡಸ್ಕರ್, ಮೂಕಾಂಬಿಕಾ ಬರಗುಂಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-24-908154395

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.