ಅಳ್ನಾವರ: ರಜೆ ಸಮಯವನ್ನು ವ್ಯರ್ಥ ಮಾಡದೆ ಸದುಪಯೋಗ ಮಾಡಿಕೊಳ್ಳಬೇಕು. ಬೇಸಿಗೆ ಶಿಬಿರದಲ್ಲಿ ದೊರೆಯುವ ವಿವಿಧ ಕೌಶಲಗಳಿಂದ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಆಯೋಜಕ ಮಹಾದೇವ ಸಾಗರೇಕರ ಹೇಳಿದರು.

ಇಲ್ಲಿನ ನೆಸ್ಟ್ ಕ್ರೀಯೆಟಿವ್ ಫೌಂಡೇಷನ್ ವತಿಯಿಂದ ಸಾಲು ಮರದ ತಿಮ್ಮಕ್ಕ ಉದ್ಯಾನವನದಲ್ಲಿ ಶನಿವಾರದಿಂದ ಆರಂಭವಾದ 9 ದಿನಗಳ ಕಾಲದ ಬೇಸಿಗೆ ಶಿಬಿರದಲ್ಲಿ ಭಾನುವಾರ ಯೋಗದ ಮಹತ್ವ ಕುರಿತು ಅವರು ಮಾತನಾಡಿ, ದೈಹಿಕ, ಮಾನಸಿಕ ಸದೃಢತೆಗೆ ಯೋಗ ಉಪಯುಕ್ತ, ನಿತ್ಯ ಇದನ್ನು ಮಾಡುವ ಮೂಲಕ ಸದೃಢ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ರಾಜು ಕರ್ಲೇಕರ ಮಾತನಾಡಿ, ಈ ಶಿಬಿರದಲ್ಲಿ ಮಕ್ಕಳ ಮಾನಸಿಕ ಆಧ್ಮಾತ್ಮಿಕ, ಶೈಕ್ಷಣಿಕ, ಸಾಮರ್ಥ ಹೆಚ್ಚಿಸಲು ತರಬೇತಿ ನೀಡಲಾಗುವುದು ಜತೆಗೆ ನೃತ್ಯ, ಕರಾಟೆ, ಗಣಿತ, ಚಿತ್ರಕಲೆ, ಕ್ಲೇ ಮಾಡಲಿಂಗ್, ಪರಿಸರ ಅಧ್ಯಯನ ಮುಂತಾದ ಕೌಶಲಗಳನ್ನು ಉಣ ಬಡಿಸಲಾಗುವುದು ಇದರ ಲಾಭ ಮಕ್ಕಳು ಪಡೆದುಕೊಳ್ಳಿ ಎಂದು ಹೇಳಿದರು.

ಪಕೃತಿ ಮಡಿಲಿನ ಸುಂದರ ಪರಿಸರದಲ್ಲಿ ನಡೆಯುತ್ತಿರುವ ಶಿಬಿರದಲ್ಲಿ ಪೂರ್ಣಿಮಾ ಮುತ್ನಾಳ, ಎಸ್.ಡಿ. ದೇಗಾವಿಮಠ ಭಕ್ತಿ ಗೀತೆ ಹೇಳಿ ಕೊಟ್ಟರು.

ಎನ್.ಎಸ್. ಗರಗ ಚಿತ್ರಕಲೆ ಬರೆಯುವ ಕಲೆ ತಿಳಿಸಿದರು.

ಪುಂಡಲಿಕ ಪಾರ್ದಿ, ರಾಜು ಕರ್ಲೇಕರ, ನಾರಾಯಣ ಪಟೇಲ, ಅನ್ನಪೂರ್ಣ, ಮಹಾದೇವಿ ಹಿರೇಮಠ, ಸನ್ನೇರಿ, ಜಯಶ್ರೀ ಉಡುಪಿ, ಮಂಜುನಾಥ ಬೆಂಡಿಗೇರಿ, ಸನ್ನೇರ, ಸಚಿನ ಸಾಗರೇಕರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-24-818332874

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.