ಆಲೂರು: ಇಂಗ್ಲಿಷ್ ಕಲಿಕೆಗೆ ಮಕ್ಕಳು ಹಾಗೂ ಪೋಷಕರ ಆಸಕ್ತಿ ಹೆಚ್ಚುತ್ತಿದ್ದು, ತಾಲ್ಲೂಕಿನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್)ಗೆ ಬೇಡಿಕೆ ಹೆಚ್ಚಾಗುತ್ತಿದೆ. ತಾಲ್ಲೂಕಿನ ಇರುವ ಒಂದು ಕೆಪಿಎಸ್ ಶಾಲೆಗೆ ಮಕ್ಕಳು ಪ್ರವೇಶ ಪಡೆಯಲು ಪ್ರಯಾಸ ಪಡುವಂತಾಗಿದೆ.

ತಾಲ್ಲೂಕಿನ ರಾಯರಕೊಪ್ಪಲು ಗ್ರಾಮದಲ್ಲಿ ಮಾತ್ರ ಸರ್ಕಾರಿ ಕೆಪಿಎಸ್ ಶಾಲೆ ಕಾರ್ಯ ನಿರ್ವಹಿಸುತ್ತಿದೆ. ಈ ಶಾಲೆಯಲ್ಲಿ ಎಲ್.ಕೆ.ಜಿ.ಯಿಂದ ಹತ್ತನೇ ತರಗತಿವರೆಗೆ ಒಂದೇ ಕಾಂಪೌಂಡ್ ಒಳಗೆ ತರಗತಿಗಳು ನಡೆಯುತ್ತವೆ. ಶಿಕ್ಷಕ, ಶಿಕ್ಷಕಿಯರು ಗುಣಮಟ್ಟದ ಬೋಧನೆ ಮಾಡುತ್ತಿರುವುದರಿಂದ ಉತ್ತಮ ಶಿಕ್ಷಣ ನೀಡಲಾಗುತ್ತಿದೆ. ಪ್ರತಿ ವಿದ್ಯಾರ್ಥಿಗೆ ಉಚಿತವಾಗಿ ಇಂಗ್ಲಿಷ್, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ.

ಖಾಸಗಿ ಶಾಲೆಗಳು ಪ್ರತಿ ವಿದ್ಯಾರ್ಥಿಗಳ ಮನೆ ಬಳಿಗೆ ಶಾಲಾ ವಾಹನ ಕಳುಹಿಸುವುದರಿಂದ ಬಹುತೇಕ ಪೋಷಕರು, ತಮ್ಮ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಖಾಸಗಿ ಶಾಲೆಗಳನ್ನು ಅವಲಂಬಿಸಿದ್ದಾರೆ. ಮಕ್ಕಳು ಶಾಲೆಗೆ ಹೋಗಿ ಬರುವವರೆಗೂ ಪೋಷಕರಿಗೆ ಮಕ್ಕಳ ಬಗ್ಗೆ ಯಾವುದೇ ಆತಂಕ ಇರುವುದಿಲ್ಲ.

ಆದರೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರು, ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದೊಂದಿಗೆ ಬಟ್ಟೆ, ಪುಸ್ತಕವನ್ನೆಲ್ಲ ಉಚಿತವಾಗಿ ಕೊಟ್ಟರೂ, ವೈಯಕ್ತಿಕ ಸುರಕ್ಷತೆ ಇಲ್ಲದೇ ಇರುವುದರಿಂದ ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿಲ್ಲ. ಇದರಿಂದ ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.

ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲು ಮಾಡಿ ಎಂದು ಸರ್ಕಾರ ಯಾವುದೇ ಆಸೆ, ಒತ್ತಡ ಹೇರಿದರೂ, ಪೋಷಕರು ದಾಖಲು ಮಾಡಲು ಹಿಂಜರಿಯುತ್ತಾರೆ. ತಿಳಿ ಹೇಳಲು ಮನೆ ಬಾಗಿಲಿಗೆ ಬಂದ ಶಿಕ್ಷಕರಿಗೆ, ತಮ್ಮ ಮಕ್ಕಳು ಯಾವ ಶಾಲೆಯಲ್ಲಿ ದಾಖಲಾಗಿದ್ದಾರೆ ಎಂಬ ಮರು ಪ್ರಶ್ನೆಯನ್ನು ಪೋಷಕರು ಕೇಳುತ್ತಿದ್ದಾರೆ.

ಸರ್ಕಾರಿ ಸೇವೆಯಲ್ಲಿ ಕೆಲಸ ಮಾಡುವ ಮತ್ತು ಗ್ರಾಮ ಪಂಚಾಯಿತಿಯಿಂದ ಶಾಸಕ, ಸಂಸದರವರೆಗೆ ಪ್ರತಿನಿಧಿಸುವ ವ್ಯಕ್ತಿಗಳು, ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ದಾಖಲು ಮಾಡಬೇಕು ಎಂಬ ನಿಯಮವನ್ನು ಸರ್ಕಾರ ಜಾರಿಗೆ ತರಬೇಕು. ಆಗ ಸರ್ಕಾರಿ ಶಾಲೆಗಳಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತದೆ ಎನ್ನುತ್ತಾರೆ ಪೋಷಕರು.

ಹೋಬಳಿಗೊಂದು ಶಾಲಾ ವಾಹನ ಒಳಗೊಂಡಂತೆ ಕೆಪಿಎಸ್ ಶಾಲೆ ಪ್ರಾರಂಭ ಮಾಡಬೇಕು. ಪ್ರತಿ ವಿದ್ಯಾರ್ಥಿಗಳ ಮನೆಗಳ ಬಳಿಗೆ ವಾಹನ ಹೋಗಿ ಕರೆದುಕೊಂಡು ಬಂದು, ಮರು ಕಳಿಸುವ ವ್ಯವಸ್ಥೆ ಆಗಬೇಕು. ಆಗ ಮಾತ್ರ ಸರ್ಕಾರಿ ಶಾಲೆಗಳು ಉಳಿಯುತ್ತವೆ. ಮುಂದುವರಿದ ಸಮಾಜದಲ್ಲಿ ಪೋಷಕರು ಕೂಲಿ ಮಾಡಿಯಾದರೂ ತಮ್ಮ ಮಕ್ಕಳನ್ನು ಶಾಲಾ ವಾಹನಗಳಲ್ಲಿ ಕಳುಹಿಸುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-36-21166895

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.