ಕೆ.ಆರ್.ಪುರ: ಬಿ.ಆರ್.ಅಂಬೇಡ್ಕರ್ ಅವರ 135ನೇ ಜನ್ಮದಿನದ ಪ್ರಯುಕ್ತ ಮೇ 10,17,24 ಮತ್ತು 31 ರಂದು ‘ಮೇಳ’ (ಸಾಂಸ್ಕೃತಿಕ ಕಲೆಗಳ ಸಂಭ್ರಮ) ಆಯೋಜಿಸಲಾಗಿದೆ ಎಂದು ವೈಚಾರಿಕ ಪ್ರಗತಿಪರ ವೇದಿಕೆ (ಕರ್ನಾಟಕ) ಅಧ್ಯಕ್ಷ ಎಂ.ಆರ್. ವೆಂಕಟೇಶ್ ತಿಳಿಸಿದರು.

ಮೇ 10 ರಂದು ಚಿತ್ರಕಲೆ, ಮೇ 17 ರಂದು ರಸಪ್ರಶ್ನೆ ಹಾಗೂ ಪ್ರಬಂಧ ಸ್ಪರ್ಧೆ, ಮೇ 24ರಂದು ಮ್ಯಾರಥಾನ್ ಓಟ ಆಯೋಜಿಸಲಾಗಿದ್ದು, ಮೇ 31ರಂದು ವೇದಿಕೆ ಕಾರ್ಯಕ್ರಮ ಜರುಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಚಿತ್ರಕಲೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ 5ನೇ ತರಗತಿಯಿಂದ ಪಿಯುಸಿ ವಿದ್ಯಾರ್ಥಿಗಳು, ಪ್ರಬಂಧ ಸ್ಪರ್ಧೆಯಲ್ಲಿ ಪದವಿ ವಿದ್ಯಾರ್ಥಿಗಳು ಭಾಗವಹಿಸಬಹುದು. 5 ಹಾಗೂ 10 ಕಿ.ಮೀ. ಮ್ಯಾರಥಾನ್ ಇರಲಿದೆ. ಚಿತ್ರಕಲೆ ಸ್ಪರ್ಧೆಗೆ ₹28 ಸಾವಿರ, ರಸಪ್ರಶ್ನೆಗೆ ₹30 ಸಾವಿರ, ಮ್ಯಾರಥಾನ್ ಸ್ಪರ್ಧೆ ₹25 ಸಾವಿರ ಹಾಗೂ ಪ್ರಬಂಧ ಸ್ಪರ್ಧೆ ವಿಜೇತರಿಗೆ ₹22 ಸಾವಿರ ಬಹುಮಾನ ನೀಡಲಾಗುವುದು ಎಂದರು. ವಿಜೇತರಿಗೆ ಮೇ 31ರ ಸಂಜೆ 4 ಗಂಟೆಗೆ ಕಾಟಂನಲ್ಲೂರು ಬಳಿಯಿರುವ ಜನಪದರು ರಂಗ ಮಂದಿರದಲ್ಲಿ ನಡೆಯಲಿರುವ ‘ಮೇಳ’ ಕಾರ್ಯಕ್ರಮದಲ್ಲಿ ಬಹುಮಾನ ನೀಡಿ ಗೌರವಿಸಲಾಗುವುದು ಎಂದರು.

ಮಾಹಿತಿಗೆ ಮೊಬೈಲ್ 9845284848 ಮತ್ತು 8123021966ಗೆ ಸಂಪರ್ಕಿಸಬಹುದು.

ಗೋಷ್ಠಿಯಲ್ಲಿ ವೇದಿಕೆ ಸದಸ್ಯರಾದ ಚಿನ್ನಸ್ವಾಮಿ, ದೇವರಾಜ್, ಆಸಿಫ್ ಅಕ್ರಮ್ ಹಾಗೂ ವಿಜಯನ್ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-4-209069967

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.