ಆನವಟ್ಟಿ: ‘ಪಿಯುಸಿ ನಂತರ ದೂರದ ಜಿಲ್ಲೆಗಳಿಗೆ ವಿದ್ಯಾಭ್ಯಾಸಕ್ಕೆ ಹೋಗುವುದನ್ನು ನಿಲ್ಲಿಸಿ. ನಿಮ್ಮ ಊರಿನಲ್ಲೇ ಇರುವ ಉತ್ತಮ ಪದವಿ ಕಾಲೇಜಿನಲ್ಲಿ ಪ್ರವೇಶ ಪಡೆಯಿರಿ. ಇಲ್ಲೂ ಅನುಭವಿ ಉಪನ್ಯಾಸಕರು ಇದ್ದಾರೆ. ವಿಷಯವಾರು ಉಪನ್ಯಾಸಕರ ಕೊರತೆ ಇಲ್ಲ’ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಬಿಎ ವಿಭಾಗದಲ್ಲಿ ಮೂರು ರ್ಯಾಂಕ್ ಪಡೆದಿರುವ ಕಾಲೇಜಿನ ವಿದ್ಯಾರ್ಥಿನಿಯರಾದ ಕೆ.ಎಸ್.ಐಶ್ವರ್ಯ (ಪ್ರಥಮ ರ್ಯಾಂಕ್), ಐಶ್ವರ್ಯ ಅಲೂರು (ತೃತೀಯ ರ್ಯಾಂಕ್) ಹಾಗೂ ಎಸ್.ಎಂ.ಸ್ವಪ್ನಾ (ಆರನೇ ರ್ಯಾಂಕ್) ಅವರನ್ನು ಸನ್ಮಾನಿಸಿ ಮಾತನಾಡಿದರು.

‘ದೂರದ ಪಟ್ಟಣಕ್ಕೆ ಹೋಗಿ ಆರ್ಥಿಕ ಸಂಕಷ್ಟ ಎದುರಿಸುವುದನ್ನು ಬಿಟ್ಟು ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಇಲ್ಲಿಯೇ ಓದಿ. ನಿಮ್ಮ ಮುಂದೆಯೇ ಸಾಧನೆ ಮಾಡಿರುವ ವಿದ್ಯಾರ್ಥಿನಿಯರು ಇದ್ದಾರೆ’ ಎಂದು ಹೇಳಿದರು.

‘ವಿಜ್ಞಾನ ವಿಭಾಗಕ್ಕೆ ಕಟ್ಟಡವಿದೆ. ಸಕಲ ಸವಲತ್ತುಗಳನ್ನು ಒದಗಿಸಿಕೊಡಲಾಗುವುದು. ತಾಲ್ಲೂಕಿನಲ್ಲಿ ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳು ಈ ವರ್ಷ ವಿಜ್ಞಾನ ವಿಭಾಗಕ್ಕೆ ಆನವಟ್ಟಿ ಪದವಿ ಕಾಲೇಜಿಗೆ ಸೇರಿಕೊಳ್ಳಿ’ ಎಂದು ಸಲಹೆ ನೀಡಿದರು.

‘ಕಾಲೇಜಿನ ಮುಂಭಾಗದ ಕಾಂಪೌಂಡ್, ಗ್ರಂಥಾಲಯ ಸೇರಿ ಅಂದಾಜು ₹ 2 ಕೋಟಿ ಅನುದಾನವನ್ನು ಸಚಿವ ಮಧು ಬಂಗಾರಪ್ಪ ಒದಗಿಸುವ ಮೂಲಕ ಕಾಲೇಜಿನ ಅಭಿವೃದ್ಧಿಗೆ ಸದಾ ಕಾಳಜಿ ವಹಿಸಿದ್ದಾರೆ. ಕಾಲೇಜಿನ ಹಿಂಬದಿಯ ಕಾಂಪೌಂಡ್, ಕುಡಿಯುವ ನೀರಿನ ಕೊಳವೆ ಬಾವಿ, ಪದವಿ ವಿದ್ಯಾರ್ಥಿನಿಯರ ಹಾಸ್ಟೆಲ್ ಸೇರಿ ಕಾಲೇಜಿನ ಅಗತ್ಯ ಸಲವತ್ತುಗಳಿಗಾಗಿ ಅನುದಾನ ಒದಗಿಸಬೇಕು’ ಎಂದು ಸಿಡಿಸಿ ಉಪಾಧ್ಯಕ್ಷ ಎಚ್.ಸಿ ಮಧುಕೇಶ್ವರ ಪಾಟೀಲ್ ಮನವಿ ಮಾಡಿದರು.

ಮುಖಂಡರಾದ ಸದಾನಂದಗೌಡ ಬಿಳಗಲಿ, ಕೆ.ಪಿ. ರುದ್ರಗೌಡ, ಶಿವಲಿಂಗೇಗೌಡ, ಪ್ರಾಂಶುಪಾಲ ಆರ್.ಸಿ. ಭೀಮಪ್ಪ, ಸಿಡಿಸಿ ಸದಸ್ಯರಾದ ಎಚ್.ಎಚ್. ಬಸವರಾಜಪ್ಪ, ಚನ್ನಾನಾಯ್ಕ, ಚಾಂದ್ ಸಾಬ್, ಶ್ರೀಕಾಂತ್ ಕುಬಟೂರು, ರಾಜಶೇಖರ್ ಸಮನವಳ್ಳಿ, ಸುಮಾ ಶಿವಕುಮಾರ್, ವಿದ್ಯಾರ್ಥಿಗಳಾದ ಪೃಥ್ವಿ, ಮಿಥುನ್, ಹೇಮಂತ್, ಪ್ರವೀಣ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-42-1131750004

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.