ತ್ಯಾಗರ್ತಿ: ‘ಭಾರತದ ಪ್ರಾಚೀನ ಪರಂಪರೆಯಲ್ಲಿ, ವೈದ್ಯಕೀಯ, ಶಿಕ್ಷಣ ಮತ್ತು ಖಗೋಳ ವಿಜ್ಞಾನಗಳಲ್ಲಿ ಅಗಾಧ ಜ್ಞಾನ ಸಂಪತ್ತಿದೆ. ಅದರ ಸದ್ಬಳಕೆಗೆ ಯುವಕರು ಮುಂದಾಗಬೇಕು’ ಎಂದು ಗೇರುಸೊಪ್ಪದ ವೀರಾಂಜನೇಯ ದೇವಾಲಯದ ಧರ್ಮದರ್ಶಿ ಮಾರುತಿ ಗುರೂಜಿ ಹೇಳಿದರು.

ಆನಂದಪುರದ ಯಡೇಹಳ್ಳಿ ಸಮೀಪದ ಬಸವನಹೊಂಡದಲ್ಲಿ ನಡೆದ ಪ್ರಾಚೀನ ಆರೋಗ್ಯ ಶಿಕ್ಷಣ ತರಬೇತಿ ಸಂಶೋಧನೆ ಮತ್ತು ಚಿಕಿತ್ಸಾ ಕೇಂದ್ರ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

‘ಪ್ರಾಚೀನ ಕಾಲದಲ್ಲಿಯೇ ಭಾರತದ ಋಷಿಮುನಿಗಳು ಮತ್ತು ಸಾಧಕರು ಹಲವು ಸಂಶೋಧನೆ ನಡೆಸಿದ್ದು, ಪ್ರಕೃತಿಯಲ್ಲಿನ ಗಿಡಮೂಲಿಕೆ ಬಳಸಿಕೊಂಡು ನೂರಾರು ಚಿಕಿತ್ಸಾ ವಿಧಾನ ಕಂಡುಕೊಂಡಿದ್ದರು’ ಎಂದರು.

‘ಪ್ರಾಚೀನ ಜ್ಞಾನ ಸಂಪತ್ತು ವೈಜ್ಞಾನಿಕ ತಳಹದಿಯನ್ನು ಹೊಂದಿದೆ. ಇವುಗಳ ಅಧ್ಯಯನ ಮತ್ತು ಬಳಕೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ’ ಎಂದು ಕಾರ್ಯಕ್ರಮ ಉದ್ಘಾಟಿಸಿದ ಇರುವಕ್ಕಿಯ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಆರ್.ಸಿ.ಜಗದೀಶ್ ತಿಳಿಸಿದರು.

ಸಾನ್ನಿಧ್ಯ ವಹಿಸಿದ್ದ ಮುರುಘಾಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ‘ಪ್ರಾಚೀನ ತಾಳೆಗರಿಗಳು ವೈಜ್ಞಾನಿಕ ಮತ್ತು ಆರೋಗ್ಯ ಚಿಕಿತ್ಸಾ ಜ್ಞಾನಭಂಡಾರವಾಗಿವೆ. ಆಯುರ್ವೇದ ವೈದ್ಯ ಪದ್ಧತಿ ಜಗತ್ತಿನ ಸರ್ವಶ್ರೇಷ್ಠ ಚಿಕಿತ್ಸಾ ವಿಧಾನ ಎಂಬುದನ್ನು ಪಾಶ್ಚಾತ್ಯರೂ ಒಪ್ಪಿಕೊಂಡಿದ್ದು, ಇಲ್ಲಿನ ತರಬೇತಿ ಮತ್ತು ಚಿಕಿತ್ಸಾ ಕೇಂದ್ರಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹ ಅಗತ್ಯವಿದೆ’ ಎಂದರು.

‘ಈ ಕೇಂದ್ರದಲ್ಲಿ ಆಸಕ್ತರಿಗೆ ಆರೋಗ್ಯ ಚಿಕಿತ್ಸಾ ವಿಧಾನಗಳ ತರಬೇತಿ ನೀಡಿ, ವಿಶ್ವವಿದ್ಯಾಲಯದ ಅಧೀನದಲ್ಲಿ ಸರ್ಟಿಫಿಕೇಟ್ ಕೋರ್ಸ್ ನಡೆಸಿ, ಪಾರಂಪರಿಕ ಔಷಧ ತಜ್ಞರ ಮೂಲಕ ಮಾರ್ಗದರ್ಶನ ನೀಡಲಾಗುವುದು’ ಎಂದು ಪ್ರಾಚೀನ ಆರೋಗ್ಯ ಪರಂಪರೆಯ ಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಎಂ.ಸಾದಿಕ್ ಹೇಳಿದರು.

ಮ್ಯಾನೇಂಜಿಗ್ ಟ್ರಸ್ಟಿ ಕೆ.ಉಮೇಶ, ಉದ್ಯಮಿ ನಝರುಲ್ಲಾ ಖಾನ್, ಟ್ರಸ್ಟ್ನ ಉಪಾಧ್ಯಕ್ಷ ಮಂಜುನಾಥ, ಸುಬ್ರಹ್ಮಣ್ಯ, ರಾಜು ದೇವಾಡಿಗ ಹಾಗೂ ಇನ್ನಿತರರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-42-1349205810

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.