ಬಳ್ಳಾರಿ: ಆಂಧ್ರಪ್ರದೇಶದ ಕರ್ನೂಲು ಮತ್ತು ಅನಂತಪುರ ಜಿಲ್ಲೆಗಳ ಕನ್ನಡ ಶಿಕ್ಷಕರು ಭಾನುವಾರ ಬಳ್ಳಾರಿಯ ಕನ್ನಡ ಭವನದಲ್ಲಿ ಸಭೆ ಸೇರಿ, ‘ಆಂಧ್ರಪ್ರದೇಶ ಕನ್ನಡ ಶಿಕ್ಷಕರ ಸಂಘ’ವನ್ನು ಅಧಿಕೃತವಾಗಿ ರಚಿಸಿದ್ದಾರೆ.

ಸಭೆಯಲ್ಲಿ ರಾಜ್ಯಮಟ್ಟದ ಕನ್ನಡ ಶಿಕ್ಷಕರ ಸಂಘಟನೆಯ ಅವಶ್ಯಕತೆ ಹಾಗೂ ಕನ್ನಡ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಕನ್ನಡ ಶಿಕ್ಷಣದ ಪ್ರಚಾರ ಹಾಗೂ ಶಿಕ್ಷಕರ ಹಿತರಕ್ಷಣೆಗೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸುವ ನಿರ್ಧಾರ ಕೈಗೊಳ್ಳಲಾಯಿತು. ಆಂಧ್ರಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಕರ್ನಾಟಕದಲ್ಲಿ ಲಭ್ಯವಿರುವ ಶೈಕ್ಷಣಿಕ, ಉದ್ಯೋಗ ಮತ್ತು ವಸತಿ ಅವಕಾಶಗಳ ಕುರಿತೂ ಚರ್ಚಿಸಿ, ಅವರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಗೌರವ ಸಲಹೆಗಾರರಾಗಿ ಎಚ್.ಎಂ ತಿಪ್ಪೇಸ್ವಾಮಿ, ಕೆ. ಯಲ್ಲಪ್ಪ ಮತ್ತು ಡಿ.ಎಚ್ ವೆಂಕಟೇಶ್ ನೇಮಕಗೊಂಡರು. ಅಧ್ಯಕ್ಷರಾಗಿ ಎಂ. ಗಿರಿಜಾಪತಿ, ಪ್ರಧಾನ ಕಾರ್ಯದರ್ಶಿಯಾಗಿ ಜಿ. ದೊಡ್ಡಬಸಪ್ಪ ಆಯ್ಕೆಯಾದರು.

ಉಪಾಧ್ಯಕ್ಷರಾಗಿ ಎಂ. ಹೇಮಲತಾ, ಬಿ. ಇರಾಳಪ್ಪ, ಹೆಚ್.ವೈ ಶೇಷಾದ್ರಿ ಹಾಗೂ ಎಸ್. ಗುರುರಾಜ ಶೆಟ್ಟಿ, ಸಹ ಕಾರ್ಯದರ್ಶಿಗಳಾಗಿ ಜಿ.ಎಸ್ ಹನುಮಂತಪ್ಪ, ಪಿ. ಸೋಮಶೇಖರ್, ವೈ. ವೆಂಕಟೇಶ್ ಮತ್ತು ಕೆ. ಜಂಬೂನಾಥ ನೇಮಕಗೊಂಡರು. ಕೋಶಾಧಿಕಾರಿಯಾಗಿ ಮಾನ್ವಿ ಹನುಮಂತಪ್ಪ, ಸಹ ಕೋಶಾಧಿಕಾರಿಯಾಗಿ ಗಂಜಿ ತಿಪ್ಪೇಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾಗಿ ಕೆ. ಗಂಗಾಧರ, ಕೆ. ಶರಣಪ್ಪ ಮತ್ತು ಎಂ. ಸಿದ್ದಪ್ಪ ಆಯ್ಕೆಯಾದರು.

ಸಮೂಹ ಮಾಧ್ಯಮ ಕಾರ್ಯದರ್ಶಿಗಳಾಗಿ ಗಂಜಿ ಪಂಪಾಪತಿ, ಎನ್.ಎಂ ಚೆನ್ನಬಸವ ಹಾಗೂ ಕೆ.ಆರ್ ನಾಗರಾಜ ಶೆಟ್ಟಿ ನೇಮಕಗೊಂಡಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-25-1407321840

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.