ಆನೇಕಲ್: ಪಟ್ಟಣದ ಹಳೆಯ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದ ‘ಬಾಲ್ಯ’ ಬೇಸಿಗೆ ಶಿಬಿರವು ವಿದ್ಯಾರ್ಥಿಗಳು ಸೃಜನಶೀಲತೆ ಮತ್ತು ಮತ್ತು ಸುಪ್ತ ಪ್ರತಿಭೆಯ ಅನಾವರಣಕ್ಕೆ ಸಾಕ್ಷಿಯಾಯಿತು.

ಸಂಕ್ರಮಣ ಬಳಗ, ಚಿನ್ಮಯ ಸೇವಾ ಸಂಸ್ಥೆ, ಪ್ರಜಾತಾರೆ, ಕಲಾ ಶಾಲೆ, ಸುಭಾಷ್ ಸೇವಾ ಸಮಿತಿ, ಸಂವಿಧಾನ ರಕ್ಷಣಾ ವೇದಿಕೆ, ಅಂಕುರ, ಗಂಧದ ನಾಡು ಜನಪರ ವೇದಿಕೆ, ಗುರುಶಿಷ್ಟ ಟ್ಯಾಲೆಂಟ್ ಅಕಾಡೆಮಿಯ ಸಹಯೋಗದಲ್ಲಿ ಆಯೋಜಿಸಿದ್ದ ಮೂರು ದಿನಗಳ ಬೇಸಿಗೆ ಶಿಬಿರಕ್ಕೆ ಭಾನುವಾರ ತೆರೆಬಿದ್ದಿತು.

ವಿದ್ಯಾರ್ಥಿಗಳು ಚಿತ್ರಕಲೆ, ಕ್ರಾಫ್ಟ್, ವ್ಯಕ್ತಿತ್ವ ವಿಕಸನ, ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ, ಸಾಮಾಜಿಕ ಅರಿವು, ಹಳ್ಳಿ ಆಟ ಸೇರಿದಂತೆ ವಿವಿಧ ಸೃಜನಶೀಲತೆಯ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು.

ಬೇಸಿಗೆ ರಜೆ ಸದುಪಯೋಗ ಪಡಿಸಿಕೊಳ್ಳುವಲ್ಲಿ ಬೇಸಿಗೆ ಶಿಬಿರ ಉಪಯುಕ್ತ. ಸಾಹಿತ್ಯ ಮತ್ತು ಸಾಂಸ್ಕೃತಿಕ ಜಾಗೃತಿ ಮೂಡಿಸಲು ಸಂಘ ಸಂಸ್ಥೆಗಳು ಕಾರ್ಯಕ್ರಮ ರೂಪಿಸಬೇಕು ಎಂದು ವಕೀಲ ಶಿವರಾಜು ಹೇಳಿದರು.

ರಜೆ ಸಜೆಯಾಗಬಾರದು. ಬಹುತೇಕ ಐಟಿ ಉದ್ಯೋಗಿಗಳು ತಮ್ಮ ಮಕ್ಕಳನ್ನು ಮನೆಯ ಒಳಗಡೆ ಬಿಟ್ಟು ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗುತ್ತಾರೆ. ಹಾಗಾಗಿ ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಗುರುತಿಸಿ ಅವರಿಗೆ ತರಬೇತಿ ನೀಡಲು ಬೇಸಿಗೆ ಶಿಬಿರ ರೂಪಿಸಲಾಗಿದೆ ಎಂದು ಪ್ರಜಾತಾರೆ ಬಳಗದ ಅನುರಾಧ ಪುರುಷೋತ್ತಮ್ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಗುರುಮೂರ್ತಿ, ಚಿನ್ಮಯ ಸೇವಾ ಸಂಸ್ಥೆಯ ಅಧ್ಯಕ್ಷ ಚಿನ್ನಪ್ಪ ವೈ.ಚಿಕ್ಕಹಾಗಡೆ, ಲಯನ್ಸ್ ಕ್ಲಬ್ ರಾಗಿ ನಾಡು ಘಟಕದ ಅಧ್ಯಕ್ಷ ಶಾಮರಾಜು, ವಕೀಲರಾದ ನಾಗೇಶ್, ಪ್ರಸಾದ್ ಬಾಬು, ಚೈತ್ರ, ಶಶಿ ಜನದನಿ, ಪುನೀತ್ ಕುಮಾರ್, ನೃತ್ಯ ಪಟು ಮಣಿಕಂಠ, ಪ್ರಾಧ್ಯಪಕ ಮಂಜುನಾಥ ತಟ್ಟನಹಳ್ಳಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-15-624684707

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.