ಅಂಕೋಲಾ: ‘ಇಂದಿನ ಸಮಾಜದಲ್ಲಿ ಮಾನವಿಯ ಮೌಲ್ಯಗಳ ಅಧಃಪತನ ಕಾಣುತ್ತಿದ್ದೇವೆ. ಸಾಹಿತಿಗಳು ತಮ್ಮ ಕೃತಿಗಳ ಮೂಲಕ ಸಮಾಜದಲ್ಲಿ ಮಾನವಿಯ ಮೌಲ್ಯಗಳ ಮರುಪೂರಣ ಕಾರ್ಯ ಮಾಡಬೇಕಿದೆ. ಅಂಕೋಲೆಯ ಕವಯಿತ್ರಿ ಹೊನ್ನಮ್ಮ ನಾಯಕ ತಮ್ಮ ಕೃತಿಗಳ ಮೂಲಕ ಸಮಾಜದಲ್ಲಿ ಸದಾಶಯಗಳನ್ನು ಬಿತ್ತುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ’ ಎಂದು ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಗುಂದಿ ಹೇಳಿದರು.

ಪಟ್ಟಣದಲ್ಲಿ ಡಾ.ದಿನಕರ ದೇಸಾಯಿ ಸ್ಮಾರಕ ಪ್ರತಿಷ್ಠಾನದಿಂದ ನಡೆದ ಕವಯಿತ್ರಿ ಹೊನ್ನಮ್ಮ ನಾಯಕ ಅವರ ಕೃತಿಗಳ ಅವಲೋಕನ ಹಾಗೂ ಕವನವಾಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಶಾಂತಾರಾಮ ಹಿಚಕಡ ಮಾತನಾಡಿ, ‘ಕಾವ್ಯ ಬಿಟ್ಟು ಬದುಕಿಲ್ಲ, ಮಾನವ ಮನುಷ್ಯನಾಗಲು ಸಾಹಿತ್ಯದ ಸ್ಪರ್ಶ’ ಅವಶ್ಯಕ ಎಂದರು. ಕವಯಿತ್ರಿ ಹೊನ್ನಮ್ಮ ನಾಯಕ, ಕಾರ್ಯದರ್ಶಿ ಜಗದೀಶ ನಾಯಕ ಹೊಸ್ಕೇರಿ ಮಾತನಾಡಿದರು.

ಶಿಕ್ಷಕಿ ವೀಣಾ ಜೊಶಿಯವರ, ಜೆ. ಪ್ರೇಮಾನಂದ, ಪುಷ್ಪಾ ನಾಯ್ಕ, ವಿಠ್ಠಲ ಗಾಂವಕಾರ, ಜಿ.ಆರ್. ತಾಂಡೇಲ, ಶ್ರೀಧರ ನಾಯ್ಕ, ಅಮಿತಾ ನಾಯ್ಕ, ರಾಮಮೂರ್ತಿ ನಾಯಕ, ರವೀಂದ್ರ ಕೇಣಿ, ಕೃಷ್ಣ ಹಿಚಕಡ, ದೇವಿದಾಸ ಸುವರ್ಣ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260501-20-1240519119

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.