ಅಂಕೋಲಾ: ‘ಆತ್ಮತೃಪ್ತಿ ಹಾಗೂ ಸಮಾಜದ ಹಿತಕ್ಕಾಗಿ ಮಾಡುವ ಸಮಾಜ ಸೇವೆ ಸರ್ವಶ್ರೇಷ್ಠ. ಲಯನ್ಸ್ ಕ್ಲಬ್ ಸದಸ್ಯರು ನಿಸ್ವಾರ್ಥ ಮನೋಭಾವದಿಂದ ಪರಿಸರ ರಕ್ಷಣೆ, ಹಸಿವು ನಿವಾರಣೆ, ನೇತ್ರ ತಪಾಸಣೆ ಶಿಬಿರಗಳನ್ನು ಹಮ್ಮಿಕೊಳ್ಳುವ ಕಾರ್ಯ ಶ್ಲಾಘನೀಯ’ ಎಂದು ಲಯನ್ಸ್ ಕ್ಲಬ್ ಪ್ರಾಂತಪಾಲ ಪಿಎಂಜೆಎಫ್ ಜೈಅಮೊಲ್ ನಾಯ್ಕ ಹೇಳಿದರು.

ಪಟ್ಟಣದ ಪಿ.ಎಂ.ಜೂನಿಯರ್ ಕಾಲೇಜಿನ ಗಂಗಾಬಾಯಿ ತೊರ್ಕೆ ಸಭಾಂಗಣದಲ್ಲಿ ಬುಧವಾರ ಜರುಗಿದ ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿಯ ವಾರ್ಷಿಕ ಕಾರ್ಯಕ್ರಮದಲ್ಲಿಮಾತನಾಡಿದರು.

ಕಾರ್ಯದರ್ಶಿ ಡಾ.ಕೀರ್ತಿ ನಾಯ್ಕ ಮಾತನಾಡಿ, ‘ವಿಶ್ವದಲ್ಲಿ ಅತಿದೊಡ್ಡ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆಯ ಲಯನ್ಸ್ ಕ್ಲಬ್ ಸದಸ್ಯರಾಗಿರುವುದು ಹೆಮ್ಮೆಯ ಸಂಗತಿ. ಲಯನ್ಸ್ ಕ್ಲಬ್ ಸಮಾಜ ಸೇವೆಯ ಜೊತೆಗೆ ಸಮಾಜದಲ್ಲಿನ ಮನಸ್ಸುಗಳನ್ನು ಬೆಸೆಯುವ ಕಾರ್ಯ ಮಾಡುತ್ತಲಿದೆ’ಎಂದರು.

ಅಧ್ಯಕ್ಷ ರಮೇಶ ಪರಮಾರ, ಕೆ.ವಿ.ಶೆಟ್ಟಿ, ಜಿ.ಆರ್. ತಾಂಡೇಲ, ರಾಜೇಶ ಸಾಲೆಹಿತ್ತಲ, ಲಯನ್ಸ್ ಪರಿಸರ ವಿಭಾಗದ ಮುಖ್ಯಸ್ಥ ರವಿ ನಾಯಕ ಮಾತನಾಡಿದರು. ನಿವೃತ್ತ ಶಿಕ್ಷಕ ಸುಖದ ನಾಯಕ, ಶ್ರೀನಿವಾಸ ನಾಯಕ, ಕಾರ್ಯದರ್ಶಿ ಕೆ.ಎಂ. ಗೌಡ, ಕರುಣಾಕರ, ಸದಾನಂದ ಶೆಟ್ಟಿ, ಚೈನ್ಸಿಂಗ್ ಚೌಹಾಣ, ಮಹಾಂತೇಶ ರೇವಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-20-1563542102

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.