ಅಂಕೋಲಾ: ಭಾರತ ಸರ್ಕಾರದ ರಕ್ಷಣಾ ಇಲಾಖೆ ಮತ್ತು ನವದೆಹಲಿಯ ಡೈರೆಕ್ಟರ್ ಆಫ್ ಜನರಲ್ ನಿರ್ದೇಶನಾಲಯದ ಆದೇಶದ ಮೇರೆಗೆ 29ನೇ ಕರ್ನಾಟಕ ಬಟಾಲಿಯನ್ ಎನ್.ಸಿ.ಸಿ. ಕಾರವಾರ ಇವರ ನೇತೃತ್ವದಲ್ಲಿ ಎನ್.ಸಿ.ಸಿ. ವಾರ್ಷಿಕ ತರಬೇತಿ ಶಿಬಿರವನ್ನು ಕಾರವಾರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 10 ದಿನಗಳವರೆಗೆ ಆಯೋಜಿಸಲಾಗಿತ್ತು.

ಈ ತರಬೇತಿ ಶಿಬಿರದಲ್ಲಿ ಎನ್.ಸಿ.ಸಿ. ಕೆಡೆಟ್ಗಳಿಗೆ ವಿಶೇಷ ತರಬೇತಿಗಳನ್ನು ನೀಡಲಾಗಿತ್ತು. ಕೆಡೆಟ್ ಗಳಿಗೆ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ಪಟ್ಟಣದ ಪಿ.ಎಂ.ಹೈಸ್ಕೂಲಿನ ಎನ್.ಸಿ.ಸಿ. ಘಟಕದ ಕೆಡೆಟ್ಗಳು ಬ್ರಾವೊ ಕಂಪನಿಯ ಜೊತೆಗೆ ಸೇರಿ ಡ್ರಿಲ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಡ್ರಿಲ್ ಚಾಂಪಿಯನ್ ಶಿಪ್ ಪ್ರಶಸ್ತಿ ಫಲಕ ಪಡೆದುಕೊಂಡರು .

ಗಾಯನ ಸ್ಪರ್ಧೆಯಲ್ಲಿ ಸಾರ್ಜೆಂಟ್ ಮೇಧಶ್ರೀ ಜಿ. ತಾಂಡೇಲ ಪ್ರಥಮ, ಬಾಲಕರ ವಿಭಾಗದ ಟ್ರೆಸರ್ ಹಂಟ್ ನಲ್ಲಿ ಪ್ರಣವ್ ಕುರ್ಲೆ ಮತ್ತು ನಾಗರಾಜ್ ಅಂಬಿಗ ದ್ವಿತೀಯ, ಬಾಲಕಿಯಯರ ವಿಭಾಗದ ಟ್ರಜರ್ ಹಂಟನಲ್ಲಿ ಗುಣಶ್ರೀ ನಾಯ್ಕ ಮತ್ತು ಧರ್ತಿ ಚೋಡನಕರ ದ್ವಿತೀಯ, ಕ್ರಿಕೆಟ್ ನಲ್ಲಿ ಭಾಗವಹಿಸಿ ರೋಷನ್ ಗೌಡ ಮತ್ತು ತ್ರಿಶಾಂಕ ಖಾರ್ವಿ ದ್ವಿತೀಯ, ಬ್ರಾವೊ ಕಂಪನಿ ಜೊತೆಗೆ ಸೇರಿ ಕೊಕ್ಕೊ ಆಟದಲ್ಲಿ ಗುಣಶ್ರೀ ನಾಯ್ಕ ದ್ವಿತೀಯ ಸ್ಥಾನ, ಫೈರಿಂಗ್ ವಿಭಾಗದಲ್ಲಿ ಮೇಧನ್ ಬಾನಾವಳಿಕರ, ಆದಿತ್ಯ ನಾಯ್ಕ, ಅಪೇಕ್ಷಾ ಗಾಂವಕರ ಉತ್ತಮ ಸಾಧನೆ ಮಾಡಿದ್ದಾರೆ.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಮಾಂಡಿಂಗ್ ಆಫೀಸರ್ ಕರ್ನಲ್ ಏ.ಕೆ.ಮಿಶ್ರಾ, ಅನುದೀಪ್ ಅಲುಕ, ಸುಬೇದಾರ್ ಮೇಜರ್ ಧನಂಜಯ್ ಬಿ.ಬಿ, ಶಿಬಿರದ ಚೀಫ್ ಆಫೀಸರ್ ಜಿ.ಆರ್.ತಾಂಡೇಲ, ರಾಜೇಶ್ ನೇತ್ರೇಕರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-20-905230275

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.