ಅರಸೀಕೆರೆ: ಸತ್ಯ ಹೇಳಿದ, ವೈಚಾರಿಕ ಚಿಂತನೆಯನ್ನು ಸಾರಿದವರನ್ನೇ ಕೀಳಾಗಿ ಕಾಣಲಾಗಿದೆ, ಆ ಕಾರಣದಿಂದ ಸಮಸಮಾಜ ನಿರ್ಮಾಣವಾಗುತ್ತಿಲ್ಲ ಎಂದು ಸಾಹಿತಿ ಎಲ್.ಎನ್ ಮುಕುಂದರಾಜ್ ಕಳವಳ ವ್ಯಕ್ತಪಡಿಸಿದರು.

ನಗರದ ಕಲಾಭವನದಲ್ಲಿ ಬಿ.ಡಿ ಕುಮಾರ್ ಅವರ ಅಭಿನಂದನಾ ಗ್ರಂಥ ಬಿಡುಗಡೆ ಮತ್ತು ಬೀಳ್ಕೂಡುಗೆ ಸಮಾರಂಭದಲ್ಲಿ ಮಾತನಾಡಿದರು. ಇತಿಹಾಸದುದ್ದಕ್ಕೂ ಸಮಾಜದಲ್ಲಿನ ಮೂಢನಂಬಿಕೆಗಳು, ಅಸಮಾನತೆ ಮತ್ತು ಕಂದಾಚಾರಗಳನ್ನು ಪ್ರಶ್ನಿಸಿ ವೈಚಾರಿಕ ಚಿಂತನೆಗಳನ್ನು ಸಾರಿದ ಅನೇಕರು ವಿರೋಧಗಳನ್ನು ಎದುರಿಸಿದ್ದಾರೆ. ಕೆಲವೊಮ್ಮೆ ಕೀಳಾಗಿ ಕಾಣಲ್ಪಟ್ಟು ಶಿಕ್ಷೆಗೂ ಗುರಿಯಾಗಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ರಾಮಚಂದ್ರೇಗೌಡ, ಕುಮಾರ್ ಅವರಂತಹ ಮೇಷ್ಟ್ರು ಪ್ರಸ್ತುತ ಸಮಾಜಕ್ಕೆ ಅಗತ್ಯ. ವೈಚಾರಿಕ ಚಿಂತನೆಗಳಿಲ್ಲದ ಶಿಕ್ಷಣದಿಂದ ಪ್ರಯೋಜನವಿಲ್ಲ ಎಂದರು.

ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ, ಇಂದು ಕೃಷಿಯ ಸುಧಾರಣೆ ಅಗತ್ಯವಾಗಿದೆ. ಕುಮಾರ್ ಕೇವಲ ಪಾಠ ಮಾಡಲಿಲ್ಲ ಬದುಕಿ ತೋರಿಸಿ ಮಾದರಿಯಾಗಿದ್ದಾರೆ ಎಂದರು. ತಾಲ್ಲೂಕು ಹಾಗೂ ಜಿಲ್ಲೆಯ ಸಾಹಿತಿಗಳು, ಉಪನ್ಯಾಸಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ವಿಧ್ಯಾರ್ಥಿಗಳು ಉಪನ್ಯಾಸಕ ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಿದರು. ಮುಖ್ಯ ಅತಿಥಿ ಕೆ.ಅಮರನಾರಾಯಣ, ಮಳಲಿಗೌಡ, ಅನಂತ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್.ಅನಂತ್ ಕುಮಾರ್, ಪತ್ರಕರ್ತ ರವಿನಾಕಲಗೂಡು , ಕೋಡಿಮಠ ಪಿ.ಯು ಕಾಲೇಜು ಪ್ರಾಂಶುಪಾಲ ಸುರೇಶ್, ಉಪನ್ಯಾಸಕರಾದ ದೊರೇಶ್ , ಕೆ.ಎಸ್ ಮಂಜುನಾಥ್, ಹರೀಶ್ ಕುಮಾರ್, ಬಸವರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-36-1331930627

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.