ಅರಸೀಕೆರೆ: ‘ವಿದ್ಯಾರ್ಥಿಗಳು ತಮ್ಮ ಕನಸನ್ನ ತಾವೇ ಕಟ್ಟಿಕೊಳ್ಳಬೇಕು. ತಮ್ಮಲ್ಲಿರುವ ನೈಪುಣ್ಯತೆ ಹಾಗೂ ಆತ್ಮವಿಶ್ವಾಸದ ಮೂಲಕ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು’ ಎಂದು ಹುನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಪ್ರಾಧ್ಯಾಪಕ ಡಾ.ಎನ್.ವಿ.ಅಸ್ಕಿ ತಿಳಿಸಿದರು.

ಜಾಜೂರು ಸಮೀಪದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2025–26ನೇ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಪ್ರತಿದಿನ ಕಲಿಯುತ್ತಾ ಭವಿಷ್ಯಕ್ಕೆ ಭದ್ರಬುನಾದಿಯನ್ನ ಹಾಕಬೇಕು. ಇಲ್ಲಿ ಸೋಲಿನ ವೈಫಲ್ಯಕ್ಕೆ ಎದೆಗುಂದದೆ ಆತ್ಮವಿಶ್ವಾಸದಿಂದ ತಮ್ಮ ಸಮಸ್ಯೆಗಳನ್ನ ಎದುರಿಸಬೇಕೆನ್ನುವಂತಹ ಮನಸ್ಥಿತಿಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು’ ಎಂದರು.

‘ಸಾಧನೆ ಮಾಡಲು ಮುಕ್ತ ಅವಕಾಶ, ತಂದೆ–ತಾಯಿಗಳ ಪರಿಶ್ರಮ ಬಡತನದ ಬದುಕು ನಮ್ಮನ್ನು ದೊಡ್ಡ ಸಾಧನೆಯ ಕಡೆಗೆ ಕರೆದೊಯ್ಯುತ್ತದೆ. ನಮ್ಮ ಉನ್ನತಿ ಅವನತಿ ನಮ್ಮ ಕೈಯಲ್ಲಿಯೇ ಇದೆ. ನಮ್ಮ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳುವ ಕನಸು ನಮ್ಮದಾಗಬೇಕು. ವಿದ್ಯಾವಂತರೆಲ್ಲರಿಗೂ ಸರ್ಕಾರಿ ನೌಕರಿ ಲಭ್ಯವಿರುವುದಿಲ್ಲ. ಆದರೆ ಸಾಧನೆ ಮಾಡಲು ಸಮಾಜದಲ್ಲಿ ಮುಕ್ತ ಅವಕಾಶವಿದೆ’ ಎಂದು ಹೇಳಿದರು.

ಕಳೆದ ಸಾಲಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಹಾಸನ ವಿಶ್ವವಿದ್ಯಾಲಯದ ಕುಲಸಚಿವ ಪ್ರೊಫೆಸರ್ ಎನ್. ನಾಗರಾಜ್, ಕಾಲೇಜಿನ ಪ್ರಾಂಶುಪಾಲರಾದ ಎ.ಗೀತಾ, ಉಪನ್ಯಾಸಕರಾದ ಶಿವಕುಮಾರ್ ರಾಜೇಶ್ ಖನ್ನಾ, ಶಿವಪ್ರಸಾದ್, ಸುನಿಲ್ ಕುಮಾರ್, ಕುಮಾರ, ಚಿತ್ರಕಲಾ, ವಸಂತ್ ಕುಮಾರಿ, ಕಚೇರಿ ಸಿಬ್ಬಂದಿ ಬಿ.ಜಿ .ವೀಣಾ, ಮೋಹನ್ ರಾಜ್, ಪ್ರತಿಭಾ ಹಾಗೂ ಸಿಡಿಸಿ ಸದಸ್ಯರಾದ ಸುಬ್ರಹ್ಮಣ್ಯ ಬಾಬು, ಜಾಜೂರು ಸಿದ್ದೇಶ್ ಬೆಂಡೆಕೆರೆ ಅಜ್ಜಪ್ಪ, ಚಂದ್ರೇಗೌಡರು ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-36-278375862

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.