ಅಥಣಿ: ‘ಗುರು ಎಂದರೆ ಬೆಳಕು, ಜ್ಞಾನ, ತೇಜಸ್ಸು. ಅದಕ್ಕೆ ಗುರುವನ್ನು ಜ್ಞಾನಸೂರ್ಯ ಎನ್ನುತ್ತಾರೆ. ಸೂರ್ಯ ಬಂದ ಕೂಡಲೆ ಕತ್ತಲೆ ಸಹಜವಾಗಿ ಕರಗುವಂತೆ ಗುರುವಿನ ಜ್ಞಾನದ ಅನುಗ್ರಹ ಆದ ಕೂಡಲೇ ಅಜ್ಞಾನ ತಾನಾಗಿಯೇ ನಿವಾರಣೆಯಾಗಿ ಸುಜ್ಞಾನ ಫಲಿಸುತ್ತದೆ. ಗುರುಗಳು ಜ್ಞಾನದ ಸಂಜೀವಿನಿ ನೀಡುವ ಶಕ್ತಿಯಾಗಿದ್ದಾರೆ’ ಎಂದು ವಿದ್ಯಾವರ್ಧಕ ಸಂಸ್ಥೆಯ ಅಧ್ಯಕ್ಷ ಶಿವಶಂಕರ ಹಂಜಿ ಹೇಳಿದರು.

ಪಟ್ಟಣದ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ 2006-07ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದ ಭಾನುವಾರ ಆಯೋಜಿಸಿದ್ದ ಗುರುವಂದನೆ ಹಾಗೂ ಸ್ನೇಹಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಎಲ್ಲರನ್ನು ಸಮ ದೃಷ್ಟಿಯಿಂದ ನೋಡುತ್ತ ಜ್ಞಾನದ ಧಾರೆಯನ್ನು ಹರಿಸುವ ಗುರುಗಳನ್ನು ಗೌರವಿಸುವುದು ನಿಜಕ್ಕೂ ಸತ್ಕಾರ್ಯ’ ಎಂದು ಹೇಳಿದರು.

ಶಾಲೆಯ ಮುಖ್ಯ ದ್ವಾರದಿಂದ ವೇದಿಕೆಯವರೆಗೆ ಆಡಳಿತ ಮಂಡಳಿಯ ಸದಸ್ಯರು ಹಾಗೂ ಶಿಕ್ಷಕರನ್ನು ಪುಷ್ಪ ಮಳೆಗೈದು ಸ್ವಾಗತಿಸಿದರು. ಶಿಕ್ಷಕರಾದ ಎಸ್.ಬಿ. ಜೋರಾಪುರ, ಬಂಡು ಕೋಳಿ, ಸಿದ್ದು ಹುಲ್ಲೆನ್ನವರ, ಕೆ.ಎಂ. ಖೋದಾನಪೂರ ಮಾತನಾಡಿದರು. ಮುಖ್ಯೋಪಾಧ್ಯಾಯ ಮಲ್ಲನಗೌಡಾ ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಶೆಟ್ಟರ ಮಠದ ಮರಳುಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಪ್ರಕಾಶ ಮಹಾಜನ್, ಸದಸ್ಯರಾದ ಶ್ರೀಶೈಲ ಸಂಕ, ಸುನೀಲ ಶಿವಣಗಿ, ವಿಜಯ ಬುರ್ಲಿ, ಅಶೋಕ ಬುರ್ಲಿ, ಶಿಕ್ಷಕರಾದ ಪ್ರಕಾಶ ಚನ್ನಗೌಡರ, ಮಹಾಂತೇಶ ಬುರ್ಲಿ, ಕುಮಾರ ಹುಲ್ಲೆನ್ನವರ, ನರಸಗೌಡಾ ಗಸ್ತಿ, ಮಹಾದೇವ ಪಾಟೀಲ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-21-143643923

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.