ಬಾದಾಮಿ: ‘ಕಾಲೇಜಿನ ಮೊದಲ ಹಂತದ ಕಟ್ಟಡ ಕಾಮಗಾರಿ ಮುಗಿದಿದ್ದು, 2ನೇ ಹಂತದ ಕಾಮಗಾರಿಯೂ ಬೇಗ ಮುಗಿಯಲಿದೆ. ಅತಿ ಶೀಘ್ರದಲ್ಲಿ ನೂತನ ಕಟ್ಟಡದಲ್ಲಿ ಕಾಲೇಜು ಆರಂಭಿಸಲಾಗುವುದು’ ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ₹1.60 ಕೋಟಿ ವೆಚ್ಚದ 2ನೇ ಹಂತದ ಕಟ್ಟಡ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

‘2007ರಲ್ಲಿ ಆರಂಭವಾದ ಸರ್ಕಾರಿ ಕಾಲೇಜಿಗೆ ಕಟ್ಟಡವೇ ಇಲ್ಲ. 2024ರಲ್ಲಿ ಕೇಂದ್ರದ ನ್ಯಾಕ್ ತಂಡವು ಕಾಲೇಜಿಗೆ ಭೇಟಿ ನೀಡಿ ‘ಬಿ’ ಗ್ರೇಡ್ ಕೊಟ್ಟಿರುವುದು ರಾಜ್ಯದಲ್ಲಿ ಇದೇ ಮೊದಲ ಕಾಲೇಜು ಇದ್ದಿರಬಹುದು. ಗ್ರೇಡ್ ಬರಲು ಕಾಲೇಜಿನ ಪ್ರಾಧ್ಯಾಪಕರ ಗುಣಮಟ್ಟದ ಶಿಕ್ಷಣ ಕಾರಣವಾಗಿದೆ. ವಿದ್ಯಾರ್ಥಿಗಳು ಸರಿಯಾದ ಶಿಕ್ಷಣ ಪಡೆದು ಉನ್ನತ ಹುದ್ದೆಯಲ್ಲಿ ತೊಡಗಿಕೊಳ್ಳಿ’ ಎಂದರು.

ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ: ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ 2024-25ನೇ ಸಾಲಿನಲ್ಲಿ ತಾಲ್ಲೂಕಿನ 22 ಮಹಿಳೆಯರಿಗೆ ₹3.30 ಲಕ್ಷ ಮೌಲ್ಯದ ಹೊಲಿಗೆ ಯಂತ್ರಗಳನ್ನು ಉಚಿತವಾಗಿ ಶಾಸಕರು ವಿತರಿಸಿದರು.

ಪೊಲೀಸ್ ಠಾಣೆಗೆ ಹೊಸ ವಾಹನ: ಶಾಸಕರ ಅನುದಾನದಲ್ಲಿ ₹10 ಲಕ್ಷ ಮೌಲ್ಯದ ನೂತನ ವಾಹನಕ್ಕೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಪೂಜೆ ಸಲ್ಲಿಸಿ ಸಿಪಿಐ ಕರಿಯಪ್ಪ ಬನ್ನೆ ಅವರಿಗೆ ವಾಹನದ ಚಾವಿ ಹಸ್ತಾಂತರಿಸಿದರು.

ಪರಿಹಾರ ವಿತರಣೆ: ನೆಲವಗಿ ಗ್ರಾಮದಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟ ಮಹಾಗುಂಡಯ್ಯ ಮುಪ್ಪಿನವರ ಕುಟುಂಬದವರಿಗೆ ಹೆಸ್ಕಾಂ ಇಲಾಖೆಯಿಂದ ಮಂಜೂರಾದ ₹5 ಲಕ್ಷ ಪರಿಹಾರದ ಚೆಕ್ನ್ನು ಶಾಸಕ ಭೀಮಸೇನ ಚಿಮ್ಮನಕಟ್ಟಿ ಕುಟುಂಬದ ಸದಸ್ಯರಿಗೆ ವಿತರಿಸಿದರು.

ನಗರ ಅಭಿವೃದ್ಧಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಶಿವು ಹಿರೇಮಠ, ಪುರಸಭೆ ಮಾಜಿ ಅಧ್ಯಕ್ಷ ಮಂಜುನಾಥ ಹೊಸಮನಿ, ಹನುಮಂತ ಅಪ್ಪನ್ನವರ, ಶಂಕರ ಕನಕಗಿರಿ, ತಹಶೀಲ್ದಾರ್ ಎಸ್.ಎಫ್ ಬೊಮ್ಮನ್ನವರ, ಪ್ರಾಚಾರ್ಯ ಶಿವಾನಂದ ರಾಯನಗೌಡರ, ಮಹಾಂತೇಶ ಶಿವನಕ್ಕನವರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-19-997801123

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.