ಬಾದಾಮಿ: ‘ವಿದ್ಯಾರ್ಥಿಗಳು ಶಿಕ್ಷಕರನ್ನು 48 ವರ್ಷಗಳವರೆಗೂ ನೆನಪಿನಲ್ಲಿಟ್ಟುಕೊಂಡು ಸನ್ಮಾನಿಸುವ ಕಾರ್ಯ ಶ್ಲಾಘನೀಯ’ ಎಂದು ಗುರುವಂದನೆಯ ಸನ್ಮಾನ ಪಡೆದ ನಿವೃತ್ತ ಮುಖ್ಯಶಿಕ್ಷಕ ಬಿ.ಎಲ್.ಪಾಟೀಲ ಹೇಳಿದರು.

ಗಣೇಶ ಗುಡಿಯಲ್ಲಿ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ವೀರಪುಲಿಕೇಶಿ ಪ್ರೌಢ ಶಾಲೆಯಲ್ಲಿ 1979ನೇ ಸಾಲಿನ 10ನೇ ತರಗತಿಯ ವಿದ್ಯಾರ್ಥಿಗಳು ಶನಿವಾರ ಹಮ್ಮಿಕೊಂಡಿದ್ದ ಗುರುವಂದನೆ ಮತ್ತು ಸ್ನೇಹ ಸಮ್ಮಿಲನ ಸಮಾರಂಭದಲ್ಲಿ ಮಾತನಾಡಿದರು.

ಮೈಸೂರ ಅಶ್ವದಳದ ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಿ. ಮರಿಬಾಶೆಟ್ಟಿ ಮಾತನಾಡಿ, ‘ತಂತ್ರಜ್ಞಾನ ಬಂದ ಮೇಲೆ ಗುರು-ಶಿಷ್ಯರ ಸಂಬಂಧಗಳು ಕಡಿಮೆಯಾಗಿವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಎ.ಎಸ್. ವಸ್ತ್ರದ ಮಾತನಾಡಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಸರೋಜಾ ಗುಬ್ಬಿ, ವಸಂತ ಗುಡಿ ಅವರನ್ನು ಸನ್ಮಾನಿಸಲಾಯಿತು.

ಹಳೇ ವಿದ್ಯಾರ್ಥಿಗಳಾದ ಪಾರ್ವತಿ ಹೊರಪೇಟೆ, ಮಂಜುಳಾ ಹಿರೇಮಠ, ಅನಸೂಯಾ ಶೀಲವಂತ, ಮುರಳಿಧರ ಕುಲಕರ್ಣಿ ಅನಿಸಿಕೆ ಹಂಚಿಕೊಂಡರು.

ವಿ.ಜಿ.ಮರಿಬಾಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸರೋಜಾ ಮಾಹುಲಿ ಸ್ವಾಗತಿಸಿದರು. ವಿವೇಕಾನಂದ ನಾಯಕ ನಿರೂಪಿಸಿದರು. ಎಸ್.ಡಿ. ಮುತಾಲಿಕ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-19-1961220330

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.