ಬಾಗಲಕೋಟೆ: ‘ಮನುಷ್ಯನಾಗಿ ಹುಟ್ಟಿದ ಮೇಲೆ ಏನನ್ನಾದರೂ ಸಾಧಿಸಿ ಸಮಾಜಕ್ಕೆ ಉಪಕಾರ ಮಾಡಬೇಕು’ ಎಂದು ವಿದ್ವಾಂಸ ಮಲ್ಲೇಪುರಂ ವೆಂಕಟೇಶ ಹೇಳಿದರು.

ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ನಡೆದ ಪ್ರೊ.ಗೌ.ಮ. ಉಮಾಪತಿಶಾಸ್ತ್ರಿ ಜನ್ಮ ಶತಮಾನೋತ್ಸವ ವರ್ಷ, ಪ್ರತಿಷ್ಠಾನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಉಮಾಪತಿಶಾಸ್ತ್ರಿ ಸಾಹಿತ್ಯ–ಸಂಶೋಧನಾ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

‘ನಾನು ಮಾಡಿದೆ ಎಂಬ ಅಹಂಕಾರ ಇರಬಾರದು. ನಾನು ಮಾಡಿದೆ ಎಂಬ ಹೆಮ್ಮೆ ಇರಬೇಕು. ಹೆಮ್ಮೆ ಇದ್ದರೆ ಇನ್ನಷ್ಟು ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ಉಮಾಪತಿಶಾಸ್ತ್ರಿ ಅವರ ‘ವಿವೇಕ ಚಿಂತಾಮಣಿ’ ಕೃತಿ ನನ್ನ ಮೇಲೆ ಪ್ರಭಾವ ಬೀರಿದೆ. ಅವರು ಯಾವುದೇ ಅಪೇಕ್ಷೆ ಇಲ್ಲದ ವಿದ್ವಾಂಸರಾಗಿದ್ದರು’ ಎಂದರು.

ಪ್ರತಿಷ್ಠಾನ ಉದ್ಘಾಟಿಸಿ ಮಾತನಾಡಿದ ಶಿವಮೊಗ್ಗದ ಆನಂದಪುರ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರಘ ರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಕನ್ನಡ ನಾಡು ಪ್ರಾಚೀನ ಕಾಲದಿಂದಲೂ ವಿದ್ವತ್ತು ಮತ್ತು ವಿನಯ ಎರಡೂ ಪರಂಪರೆಗಳನ್ನು ಮೈಗೂಡಿಸಿಕೊಂಡು ಬಂದಿದೆ. ಇದು ಈ ನೆಲದ ಅಸ್ಮಿತೆ ಕೂಡ. ಇಂತಹ ಪರಂಪರೆಯ ಅಭಿಮಾನದ ಕೊಂಡಿಯಾಗಿ ಬಂದವರೇ ಉಮಾಪತಿ ಶಾಸ್ತ್ರಿ ಅವರು’ ಎಂದು ಹೇಳಿದರು.

‘ಪ್ರಾಧ್ಯಾಪಕರಾಗಿ, ಪತ್ರಿಕಾ ಸಂಪಾದಕರಾಗಿ, ಸಂಶೋಧಕರಾಗಿ, ಹಸ್ತಪ್ರತಿಗಳ ಶೋಧ ಮತ್ತು ಸಂರಕ್ಷಕರಾಗಿ ಕನ್ನಡ ನಾಡಿನ ವಿದ್ವತ್ ಪರಂಪರೆಯಲ್ಲಿ ಗುರುತಿಸಿಕೊಂಡವರು. ಕನ್ನಡನಾಡು, ನುಡಿ, ಸಂಸ್ಕೃತಿ ಮಾರ್ಗದಲ್ಲಿ ತಮ್ಮದೇ ಆದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ’ ಎಂದರು.

‘ಬಿವಿವಿ ಸಂಘದ ಬಸವೇಶ್ವರ ಕಲಾ ಕಾಲೇಜಿನಲ್ಲಿ ಹಿಂದಿ ಪ್ರಾಧ್ಯಾಪಕರಾಗಿ ಸೇವೆಯನ್ನಾರಂಭಿಸಿದ ಅವರು ನಿರಂತರ ಅಧ್ಯಯನದಿಂದ ಮಾದರಿಯಾದವರು. ಶಿವಯೋಗಮಂದಿರ ಪರಿಸರದಲ್ಲಿ ಇದ್ದ ಹಸ್ತಪ್ರತಿಗಳ ಸಂಗ್ರಹ, ಸಂರಕ್ಷಣೆ, ಅವುಗಳ ವ್ಯವಸ್ಥಿತ ಅಧ್ಯಯನ ಮಾಡಿದ್ದರು’ ಎಂದು ತಿಳಿಸಿದರು.

ಪ್ರೊ.ಗೌ.ಮ.ಉಮಾಪತಿಶಾಸ್ತ್ರಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭು ಸ್ವಾಮೀಜಿ ಮಾತನಾಡಿ, ‘ಉಮಾಪತಿಶಾಸ್ತ್ರಿ ಅವರು ಸಮಾಜಕ್ಕೆ ಉಪಯುಕ್ತ ಕೊಡುಗೆ ನೀಡಿದ್ದಾರೆ. ತಾಡೋಲೆ ಗ್ರಂಥಗಳ ಸಂಗ್ರಹದಲ್ಲಿ ಅಪಾರ ಆಸಕ್ತಿ ಹೊಂದಿದ್ದರು. ಅಧ್ಯಯನದಿಂದ ಸಾಧಿಸಲು ಸಾಧ್ಯ’ ಎಂದರು.

ಉಮಾಪತಿಶಾಸ್ತ್ರಿ ಅವರ ಬದುಕು-ಬರಹದ ಕುರಿತು ಮಾತನಾಡಿದ ಸಾಹಿತಿ ಎಸ್.ಎಂ. ದಾಶಾಳ, ‘ವೇದ, ವಿಜ್ಞಾನ ಸದಾ ಕಾಲ ಓದುವ ಮೂಲಕ ಪಾರಂಗತರಾಗಿ ಕಾಶಿಯಲ್ಲಿ ಅಧ್ಯಯನ ಮಾಡಿದ್ದರು. ಆ ಕಾಲದಲ್ಲೇ ಅವರು ಮನೆಯಲ್ಲಿ ಹತ್ತು ಸಾವಿರ ಪುಸ್ತಕಗಳನ್ನು ಸಂಗ್ರಹಿಸಿದ್ದರು’ ಎಂದು ಹೇಳಿದರು.

ಉಮಾಪತಿಶಾಸ್ತ್ರಿ ಸಾಹಿತ್ಯ- ಸಂಶೋಧನಾ ಪ್ರಶಸ್ತಿ ಜೊತೆಗೆ ₹25 ಸಾವಿರ ನಗದು ನೀಡಿ ಗೌರವಿಸಲಾಯಿತು.

ಟೀಕಿನಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಅಶೋಕ ಸಜ್ಜನ, ವಿಜಯಕುಮಾರ ಕಟಗಿಹಳ್ಳಿಮಠ, ಎಸ್.ಆರ್. ಮೂಗನೂರಮಠ, ಜಿ.ಯು. ಸುಕುಮಾರಶಾಸ್ತ್ರಿ, ಎಸ್.ಜಿ.ಕೋಟಿ, ಸುಭಾಸ ಪಾಟೀಲ, ಚಂದ್ರಶೇಖರ ಶೆಟ್ಟರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-19-1789324832

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.