ಬಾಗಲಕೋಟೆ: ‘ಧೈರ್ಯ, ಹಿಮಾಲಯ ಪರ್ವತದಂತಹ ದೊಡ್ಡ ಕನಸು, ಹೊಸ ಸಂಶೋಧನೆ, ತಂತ್ರಜ್ಞಾನ ಅಳವಡಿಕೆ, ಭಾರತೀಯ ನೀತಿ, ಸಂಪ್ರದಾಯ ಪಾಲನೆ ಜೀವನದ ಯಶಸ್ಸಿನ ಸೂತ್ರಗಳಾಗಿದ್ದು, ಅವುಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ನಾಗಪುರ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ನಿರ್ದೇಶಕ ಭೀಮರಾಯ ಮೇತ್ರಿ ಹೇಳಿದರು.

ಜಮಖಂಡಿಯ ಬಾಗಲಕೋಟ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ನಡೆದ ಪ್ರಥಮ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ‘ಜೀವನ ಎಂದರೆ ನಿಮ್ಮನ್ನು ನೀವು ಕಂಡುಕೊಳ್ಳುವುದಲ್ಲ, ಜೀವನ ಎಂದರೆ ನಿಮ್ಮನ್ನು ನೀವು ಸೃಷ್ಟಿಸಿಕೊಳ್ಳುವುದಾಗಿದೆ. ಹೊಸತನದತ್ತ ನೋಡುವುದಾಗಿದೆ. ವ್ಯಾಪಾರ ಮಾರುಕಟ್ಟೆಯಲ್ಲಿ ಉಳಿಯಲು ನಿರಂತರವಾಗಿ ಮರುಕೌಶಲ ಮತ್ತು ಉನ್ನತೀಕರಣದ ಕಡೆಗೆ ಗಮನ ಹರಿಸಬೇಕು’ ಎಂದರು.

‘ಇಂಟರ್ನೆಟ್, ಲ್ಯಾಪ್ಟಾಪ್, ಸ್ಮಾರ್ಟ್ಫೋನ್, ಎಐ ಕಾಲದಲ್ಲಿ ನೀವು ಜನಿಸಿದ್ದೀರಿ. ಭಾರತವು ಈಗ ವಿಶ್ವದಲ್ಲಿಯೇ ಬ್ರಾಂಡ್ ಆಗಿದೆ. ಮುಂದಿನ ಆರ್ಥಿ ವರ್ಷದ ವೇಳೆಗೆ ಭಾರತವು ವಿಶ್ವದಲ್ಲಿ ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ’ ಎಂದು ಹೇಳಿದರು.

‘ಆತ್ಮನಿರ್ಭರ್ ಭಾರತ, ವಿಕಸಿತ ಭಾರತದ ಪರಿಣಾಮ 2047ರ ವೇಳೆಗೆ ಭಾರತವು 30 ಟ್ರಿಲಿಯನ್ ಆರ್ಥಿಕತೆ ಹೊಂದಲಿದ್ದು, ತಲಾ ಆದಾಯ 18 ಸಾವಿರದಿಂದ 20 ಸಾವಿರ ಡಾಲರ್ಗೆ ತಲುಪಲಿದೆ. ಭಾರತವು ವಿಶ್ವದ ಯುವ ಶಕ್ತಿಯ ಐದನೇ ಒಂದು ಭಾಗದಷ್ಟು ಹೊಂದಿದೆ. ಹಿಂದೆ ಜಪಾನ್ ಯುವ ಶಕ್ತಿ ಹೊಂದಿದಾಗಲೇ ಆರ್ಥಿಕವಾಗಿ ಸೂಪರ್ ಶಕ್ತಿಯಾಗಿತ್ತು. ಆದ್ದರಿಂದ 21ನೇ ಶತಮಾನವು ಭಾರತದ ಶತಮಾನವಾಗಿದೆ’ ಎಂದರು.

‘ಶೇ 51ರಷ್ಟು ವಿದೇಶ ಬಂಡವಾಳ ಹೂಡಿಕೆ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಆಗುತ್ತಿದೆ. ಟೆಕ್ ಕ್ಯಾಪಿಟಲ್ ಆಗಿರುವ ಬೆಂಗಳೂರು ಮುಂದಿನ ದಿನಗಳಲ್ಲಿ ವಿಶ್ವಕ್ಕೇ ಸಿಲಿಕಾನ್ ವ್ಯಾಲಿಯಾಗಲಿದೆ. ತಂತ್ರಜ್ಞಾನ ಬಳಕೆ ಮಾತ್ರವಲ್ಲ, ಉತ್ಪಾದನೆಯಲ್ಲಿಯೂ ದೇಶ ಮುಂಚೂಣಿಯಲ್ಲಿದೆ’ ಎಂದು ಹೇಳಿದರು.

‘ಎಷ್ಟು ಮಂದಿ ನಿಮ್ಮನ್ನು ಅನುಸರಿಸುತ್ತಾರೆ ಎಂಬುದರಲ್ಲಿ ನಾಯಕತ್ವವಿಲ್ಲ, ಎಷ್ಟು ಮಂದಿ ನಾಯಕರನ್ನು ನೀವು ಹುಟ್ಟುಹಾಕಿದ್ದೀರಿ ಎಂಬುದು ನಾಯಕತ್ವವಾಗಿದೆ. ಸೋಲಿಗೆ ಭಯಪಡಬೇಡಿ. ಯಾವುದನ್ನೂ ಸರಳವಾಗಿ ಬಿಟ್ಟುಕೊಡಬೇಡಿ. ವಾಲ್ಟ್ ಡಿಸ್ನಿ, ಐನ್ಸ್ಟೀನ್ ಆರಂಭದಲ್ಲಿ ತೊಂದರೆ ಎದುರಿಸಿದ್ದರು. ನಂತರ ವಿಶ್ವವೇ ನಿಬ್ಬೆರಗಾಗುವಂತಹ ಸಾಧನೆ ಮಾಡಿದರು. ಕಠಿಣ ಪರಿಶ್ರಮ, ಸತತ ಪ್ರಯತ್ನ ಯಶಸ್ಸಿನ ಹಾದಿಯಲ್ಲಿ ಕರೆದುಕೊಂಡು ಹೋಗಲಿವೆ’ ಎಂದರು.

ಬಾಗಲಕೋಟ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಆನಂದ ದೇಶಪಾಂಡೆ ಮಾತನಾಡಿ, ಸಂಶೋಧನೆ ಮತ್ತು ಕೌಶಲಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ಸಕ್ಕರೆ, ನೇಕಾರಿಕೆ, ಕೃಷಿ ತಾಂತ್ರಿಕತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು.

ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಅನಕೂಲಕ್ಕಾಗಿ ‘ಕಲಿಕೆಯೊಂದಿಗೆ ಗಳಿಕೆ’ ಯೋಜನೆ ರೂಪಿಸಲಾಗಿದೆ. ಆಡಳಿತದಲ್ಲಿ ಸಂಪೂರ್ಣವಾಗಿ ಇ ಆಡಳಿತ ಅಳವಡಿಸಿಕೊಳ್ಳಲಾಗಿದೆ. ಸಂಶೋಧನೆಯಲ್ಲಿಯೂ ಮುಂಚೂಣಿಯಲ್ಲಿದೆ ಎಂದು ಹೇಳಿದರು.

ಕುಲಸಚಿವ ಸೋಮಲಿಂಗ ಗೆಣ್ಣೂರ, ಕುಲಸಚಿವ ಮೌಲ್ಯಮಾಪನ ಪ್ರೊ. ಲತಾ ಕೆ.ಪಿ, ಹಣಕಾಸು ಅಧಿಕಾರಿ ಚಿದಾನಂದ ಢವಳೇಶ್ವರ ಮತ್ತಿತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-19-714199130

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.