ಬಾಗಲಕೋಟೆ: ‘ಅಂಬಿಗ ಸಮಾಜದ ಮಕ್ಕಳು ಸಮಾಜದ ಮುಂದುವರಿದ ಮಕ್ಕಳೊಂದಿಗೆ ಶೈಕ್ಷಣಿಕವಾಗಿ ಸಾಕಷ್ಟು ಸ್ಪರ್ಧೆ ನೀಡುತ್ತಿರುವುದು ಖುಷಿ ತಂದಿದೆ’ ಎಂದು ಅಂಬಿಗ ಸಮಾಜದ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಉದಯ ಅಂಬಿಗೇರ ಹೇಳಿದರು.

ನವನಗರದ ಕಲಾಭವನದಲ್ಲಿ ಭಾನುವಾರ ನಡೆದ ಅಂಬಿಗ ಸಮಾಜದ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮಾಜದ ಕಟ್ಟಕಡೆ ಬಡ ವಿದ್ಯಾರ್ಥಿಗಳು ಸಮಾಜ ಪ್ರಾರಂಭಿಸಿರುವ ವಿದ್ಯಾಸಿರಿ ಯೋಜನೆ ಲಾಭ ಪಡೆಯಬೇಕು’ ಎಂದರು.

ಸಮಾಜದ ಮಾಜಿ ರಾಜ್ಯ ಅಧ್ಯಕ್ಷ ಎಂ. ಮೌಲಾಲಿ ಮಾತನಾಡಿ, ‘ಸಮಾಜದ ಬಹುದಿನಗಳ ಬೇಡಿಕೆಯಾಗಿರುವ ಎಸ್ ಟಿ ಸೇರ್ಪಡೆಯ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಶೀಘ್ರವೇ ಅದು ಅನುಮೋದನೆಗೊಳ್ಳಲಿದೆ’ ಎಂದು ಹೇಳಿದರು.

ನೌಕರರ ಸಂಘದ ರಾಜ್ಯ ಅಧ್ಯಕ್ಷ ಎಂ. ಶ್ರೀನಿವಾಸ ಮಾತನಾಡಿ, ‘ಪಾಲಕರು ಮಕ್ಕಳ ಕೈಯಲ್ಲಿ ಮೊಬೈಲ್ ಕೊಡಬೇಡಿ. ಮಕ್ಕಳ ಬಗ್ಗೆ ನಿಗಾವಹಿಸಿ. ಮಕ್ಕಳು ವಿದ್ಯಾವಂತರಾದರೆ ಸಮಾಜ ಬಲಿಷ್ಠಗೊಳ್ಳಲಿದೆ. ಸಮಾಜ ಸಂಘಟನೆಗೆ ಹೆಚ್ಚು ಗಮನಕೊಡಿ. ಅಂದಾಗ ಮಾತ್ರ ರಾಜಕೀಯ ಲಾಭ ಪಡೆಯಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ವಿದ್ಯಾಸಿರಿ ಯೋಜನೆಯ ನಾಗೇಂದ್ರ ಹೊನ್ನಳ್ಳಿ ಮಾತನಾಡಿ, ‘ವಿದ್ಯಾರ್ಥಿಗಳು ಸಮಾಜದ ಉತ್ತಮ ನಾಗರಿಕರಾಗಬೇಕು. ಅವಕಾಶಗಳನ್ನು ಬಳಸಿಕೊಂಡು ಸಾಧನೆ ಮಾಡಬೇಕು’ ಎಂದರು.

ವಿದ್ಯಾಸಿರಿ ಯೋಜನೆಯಡಿ ₹70 ಲಕ್ಷ ಸಂಗ್ರಹಿಸಲಾಗಿದೆ. ಮಕ್ಕಳ ಉನ್ನತ ಅಭ್ಯಾಸಕ್ಕೆ ವಿನಿಯೋಗಿಸಲಾಗುವುದು ಎಂದರು.

ಅಂಬಿಗ ಸಮಾಜದ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಅಧ್ಯಕ್ಷ ಮಹೇಶ ಕೋಳಿ, ನಾಗಪ್ಪ ಅಂಬಿ, ಎಂ.ಬಿ ಅಂಬಿಗೇರ, ಚಿನ್ನು ಅಂಬಿ, ಶ್ರೀಕಾಂತ ಕಟ್ಟಿಮನಿ, ಎಚ್ ಸಿ ಅಂಬಿಗೇರ, ಚಂದ್ರು ಅಂಬಿಗೇರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260525-19-998862461

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.