ಬಾಗಲಕೋಟೆ: ಶೂನ್ಯ ನೆರಳು ದಿನದ ಬಗ್ಗೆ ತಿಳಿದುಕೊಂಡು ಖಗೋಳ ವಿಜ್ಞಾನದಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಬ್ರಿಲಿಯಂಟ್ ಅಕಾಡೆಮಿ ಕಾರ್ಯದರ್ಶಿ ಆನಂದ ರಾಠೋಡ ಹೇಳಿದರು.

ನಗರದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಬ್ರಿಲಿಯಂಟ್ ಅಕಾಡೆಮಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶೂನ್ಯ ನೆರಳು ದಿನದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಗಳಾಗಿದ್ದ ಶಂಕ್ರಪ್ಪ ಸಕ್ರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ವಿಜಯಕುಮಾರ ಕೆ ಮಾತನಾಡಿ, ಶೂನ್ಯ ನೆರಳಿನ ದಿನದ ಸ್ವಾರಸ್ಯಕರ ಮಾಹಿತಿಗಳನ್ನು ವಿವರವಾಗಿ ತಿಳಿಸಿದರು. ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದಂತೆ ವಿವಿಧ ಆಕಾಶ ಕಾಯಗಳು, ನಕ್ಷತ್ರ ಪುಂಜಗಳ ಅಧ್ಯಯನದ ಮಾಹಿತಿ ನೀಡಿದರು.

ಸೂರ್ಯನ ಚಲನೆಯನ್ನು ವಿಶೇಷ ಸೂರ್ಯ ಮಸೂರಗಳನ್ನು ಬಳಸಿಕೊಂಡು ನೋಡಲಾಯಿತು. ಮಧ್ಯಾಹ್ನ 12.24ಕ್ಕೆ ಸೂರ್ಯನ ಕಿರಣಗಳು ಲಂಬವಾಗಿ ಬೀಳುವ ಮೂಲಕ ಸಂಭವಿಸಿದ ಶೂನ್ಯ ನೆರಳನ್ನು ಪ್ರಾಯೋಗಿಕ ಚಟುವಟಿಕೆಯ ಮೂಲಕ ತಿಳಿಸಿಕೊಡಲಾಯಿತು.

ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯೂರೇಟರ್ ಈರಣ್ಣ ಬುಳ್ಳಾ, ತಾಂತ್ರಿಕ ಸಹಾಯಕ ಆಸೀಫ್ ಬಾಗವಾನ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-19-823567064

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.