ಬಾಗಲಕೋಟೆ: ‘ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯತೆ ತರುವ ಆಂದೋಲನದ ಅಗತ್ಯವಿದ್ದು, ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನವಾಗಬೇಕಿದೆ’ ಎಂದು ಅಖಿಲ ಭಾರತೀಯ ಸಂಯುಕ್ತ ಮಹಾಮಂತ್ರಿ ಮೀನಾ ಚಂದಾವರಕರ್ ಹೇಳಿದರು.

ಬಿವಿವಿಎಸ್. ಪಾಲಿಟೆಕ್ನಿಕ್ ಸಭಾಭವನದಲ್ಲಿ ಶುಕ್ರವಾರ ನಡೆದ ಭಾರತೀಯ ಶಿಕ್ಷಣ ಮಂಡಲ ಜಿಲ್ಲಾ ಘಟಕದ ಕಾರ್ಯಕಾರಿ ಘೋಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬೆಳಿಗ್ಗೆ ಹತ್ತರಿಂದ ಸಂಜೆ ಐದರ ನಡುವೆ ನಡೆಯುವ ಪಾಠ ಪ್ರವಚನವೇ ಶಿಕ್ಷಣವಲ್ಲ. ಬದುಕುವುದಕ್ಕೆ ಇಂಗ್ಲಿಷ್ ಅನಿವಾರ್ಯ ಎಂಬ ತಪ್ಪು ಕಲ್ಪನೆಯನ್ನು ಇಡೀ ಸಮಾಜಲ್ಲಿ ಬಿತ್ತಲಾಗಿದೆ. ಈ ಭ್ರಮೆಯಿಂದ ಹೊರಬರುವ ಅಗತ್ಯವಿದೆ’ ಎಂದರು.

‘ವ್ಯವಹಾರಕ್ಕೆ ಇಂಗ್ಲಿಷ್ ಬೇಕು. ಆದರೆ, ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ನಡೆಯಬೇಕು. ಪ್ರಶ್ನಿಸುವ ಗುಣವೇ ಭಾರತದ ಪ್ರಾಚೀನ ಪರಂಪರೆಯ ಅಂತಃಸತ್ವ. ಭಾರತದಷ್ಟು ಉದಾರವಾದಿ ಶಿಕ್ಷಣದ ಪರಿಕಲ್ಪನೆ ಪ್ರಪಂಚದ ಬೇರೆ ಯಾವುದೇ ನಾಗರಿಕತೆಯಲ್ಲಿಲ್ಲ. ಇದನ್ನು ಪ್ರತಿಪಾದಿಸುವ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನ ಆಗಬೇಕಿದೆ’ ಎಂದು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಬಸವರಾಜ ಯಂಕಂಚಿ ಮಾತನಾಡಿ, ‘ಗುರುಕುಲ ಪದ್ಧತಿ ಭಾರತ ದೇಶದ ಅತ್ಯಂತ ಪ್ರಾಚೀನ ಪದ್ದತಿಯಾಗಿದ್ದು, ಅದನ್ನು ಇವತ್ತಿಗೂ ಮುಂದುವರಿಸಬೇಕಾದ ಅಗತ್ಯವಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಭಾರತೀಯ ಶಿಕ್ಷಣ ಮಂಡಲ ಬಾಗಲಕೋಟೆ ಜಿಲ್ಲೆ ಅಧ್ಯಕ್ಷ ಎಸ್.ಆರ್. ಮನಹಳ್ಳಿ ಮಾತನಾಡಿ, ‘ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ‘ಬೋಧನೆ’ಗಿಂತಲೂ ಕಲಿಕೆಗೆ ಹೆಚ್ಚಿನ ಮಹತ್ವವಿದೆ. ಇದರ ಪ್ರಕಾರ ಯಾವುದನ್ನೂ ಹೊಸತಾಗಿ ಕಲಿಸಲಾಗದು, ಕಲಿಕಾರ್ಥಿ ತನ್ನ ಶ್ರದ್ಧೆಯಿಂದ ಕಲಿತುಕೊಳ್ಳಬಲ್ಲ ಅಷ್ಟೇ’ ಎಂದು ತಿಳಿಸಿದರು.

‘ಶಿಕ್ಷಣದಿಂದ ಜ್ಞಾನ ಹೆಚ್ಚಾಗಬೇಕು. ಬದುಕು ರೂಪಿಸಿಕೊಳ್ಳಲು ಅದು ನೆರವಾಗಬೇಕು. ಜೀವನದಲ್ಲಿ ಆತ್ಮನಿರ್ಭರತೆ ಸಾಧಿಸುವುದೇ ಶಿಕ್ಷಣದ ಉದ್ದೇಶ’ ಎಂದರು.

ಪಾಲಿಟೆಕ್ನಿಕ್ ಕಾಲೇಜಿನ ಪ್ರಾಚಾರ್ಯ ಎಂ.ಎಸ್.ಮಾಟೂರ, ಅರುಣ ಹೂಲಿ, ಜಗನ್ನಾಥ ಚವ್ಹಾಣ, ರವಿ ಕೋಟೆನ್ನವರ, ಜಿ.ಐ. ನಂದಿಕೋಲ್ಮಠ, ಬಸವರಾಜ ಕುಂಬಾರ, ಆರ್.ಎಂ.ಕುಲಕರ್ಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-19-1308293762

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.