ಬಾಗಲಕೋಟೆ: ನಗರದ ವಿವಿಧ ಶಾಲಾ ಕಾಲೇಜುಗಳಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಯಿತು.

ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಸಾಮಾಜಿಕ ಸಮಾನತೆಯ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿವೆ. ಅವರು ಸಮಾನತೆಯ ಹರಿಕಾರರಾಗಿದ್ದಾರೆ ಎಂದು ಪ್ರಾಚಾರ್ಯ ಅರುಣಕುಮಾರ ಗಾಳಿ ಹೇಳಿದರು.

ಭಾರತದ ಸಂವಿಧಾನವು ಸರ್ವಶ್ರೇಷ್ಠವಾಗಿದೆ. ಅಂಬೇಡ್ಕರ್ ಅವರ ಸರಳತೆಯ ಬದುಕು, ದಿವ್ಯ ಪಾಂಡಿತ್ಯ ಭಾರತೀಯರಿಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗಿವೆ ಎಂದರು.

ಎಸ್.ಆರ್. ನರಸಾಪೂರ ಕಲಾ ಮತ್ತು ಎಂ.ಬಿ. ಶಿರೂರ ವಾಣಿಜ್ಯ ಕಾಲೇಜು:ಪ್ರಾಚಾರ್ಯ ಶ್ರೀನಿವಾಸ ನರಗುಂದ ಮಾತನಾಡಿ, ಅಂಬೇಡ್ಕರ್ ಅವರ ಶಿಕ್ಷಣ ಮತ್ತು ಬದುಕಿನ ಬಗೆಗಿನ ವಿಚಾರಧಾರೆ ಅರಿಯಬೇಕು ಎಂದರು.

ಜ್ಞಾನ ಜೀವನಕ್ಕೆ ಆಧಾರವಾಗಿದೆ. ಹೆಣ್ಣು ಮಕ್ಕಳು ಹೆಚ್ಚಿನ ಶಿಕ್ಷಣ ಪಡೆಯಬೇಕು. ಜನತೆ ವಿದ್ಯಾವಂತರಾಗುವುದರ ಜೊತೆಗೆ ಸಂಘಟಿತರಾಗಬೇಕು ಎಂಬುದು ಅವರ ವಿಚಾರವಾಗಿತ್ತು ಎಂದರು. ಎನ್ಎಸ್ಎಸ್ ಅಧಿಕಾರಿ ಎಸ್.ವೈ. ಬೊಮ್ಮಣ್ಣವರ, ಎಸ್.ಎಂ ಹಡಪದ, ಸಂಸ್ಥೆ ಗೌರವ ಕಾರ್ಯದರ್ಶಿ ಗಿರೀಶ ಮಸೂ ರಕರ, ಎಸ್.ಎಸ್. ಹಂಗರಗಿ ಇದ್ದರು.

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ ಬಸವೇಶ್ವರ ವಾಣಿಜ್ಯ ಕಾಲೇಜು:ಎನ್ಎಸ್ಎಸ್ ಜಿಲ್ಲಾ ನೋಡಲ್ ಅಧಿಕಾರಿ ಮಾರುತಿ ಪಾಟೋಳಿ ಮಾತನಾಡಿ, ಅಂಬೇಡ್ಕರ್ ಸಮಾನತೆಯ ಹರಿಕಾರರಾಗಿದ್ದಾರೆ ಎಂದರು.

ಅಂಬೇಡ್ಕರ್ ಅವರ ದೂರ ದೃಷ್ಟಿಕೋನ ಹಾಗೂ ಸಂವಿಧಾನ ದತ್ತವಾಗಿ ನೀಡಿದ ವಿಚಾರಧಾರೆಗಳು ನೈಜವಾಗಿ ಅನುಷ್ಠಾನಗೊಂಡಲ್ಲಿ ಭಾರತ ಸಮಾನತೆ ಸ್ಥಾಪಿಸಿ ವಿಶ್ವಗುರುವಾಗಲಿದೆ ಅವರ ವಿಚಾರಧಾರೆಗಳನ್ನು ಪಠಿಸುತ್ತಾ ನಡೆದರೆ ಎಂದಿಗೂ ಸಮಾನತೆ ಹಾಗೂ ಅಭಿವೃದ್ಧಿಯಾಗದು ಎಂದು ಹೇಳಿದರು. ಕಾಲೇಜಿನ ಪ್ರಾಚಾರ್ಯ ಜೆ.ವಿ. ಚವ್ಹಾಣ, ಸ್ಕೌಟ್ಸ್ ಅಂಡ್ ಗೈಡ್ಸ್ ಅಧಿಕಾರಿ ಗಳಾದ ಸುರೇಶ ಹಡಗಲ್, ಶ್ರೀದೇವಿ ಮಠದ, ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಜು ಹತ್ತಿಕಟಗಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260415-19-70590372

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.