ಬಾಗಲಕೋಟೆ: ಬೇಸಿಗೆ ರಜೆ ನಂತರ ಪ್ರಾಥಮಿಕ, ಪ್ರೌಢಶಾಲೆಗಳು ಕೆಲವೇ ದಿನಗಳಲ್ಲಿ ಮತ್ತೆ ಆರಂಭವಾಗಲಿದ್ದು, ಮಕ್ಕಳು ಶಾಲೆಗೆ ಹೋಗುವುದಕ್ಕಿಂತ ಮೊದಲೇ ಬಹುತೇಕ ಪಠ್ಯಪುಸ್ತಕಗಳು ಶಾಲೆ ತಲುಪುತ್ತಿವೆ.

ಜಿಲ್ಲೆಯಲ್ಲಿ 2,252 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿವೆ. 1.82 ಲಕ್ಷ ವಿದ್ಯಾರ್ಥಿಗಳಿದ್ದು, 37.45 ಲಕ್ಷ ಪಠ್ಯಪುಸ್ತಕಗಳು ಉಚಿತವಾಗಿ ಹಂಚಿಕೆಯಾಗಬೇಕಿದೆ, ಈಗಾಗಲೇ 18.81,136 ಲಕ್ಷ ಪುಸ್ತಕಗಳು ಪೂರೈಕೆಯಾಗಿವೆ. ಖಾಸಗಿ ಶಾಲೆಗಳ ಮಕ್ಕಳಿಗೆ ಮಾರಾಟಕ್ಕಾಗಿ 9.22 ಲಕ್ಷ ಪಠ್ಯಪುಸ್ತಕಗಳಿಗೆ ಬೇಡಿಕೆ ಇದ್ದು, 6.76,061 ಲಕ್ಷ ಪುಸ್ತಕಗಳು ಪೂರೈಕೆಯಾಗಿವೆ.

8ನೇ ತರಗತಿಯ ವಿಜ್ಞಾನ ವಿಷಯ ಭಾಗ 1 ಪಠ್ಯಪುಸ್ತಕ ಬಂದಿಲ್ಲ. ಭಾಗ 2ರ ವಿವಿಧ ವಿಷಯಗಳ ಪಠ್ಯಪುಸ್ತಕಗಳು ಬಂದಿಲ್ಲ. ಖಾಸಗಿ ಶಾಲೆಗಳ ಮಾರಾಟಕ್ಕೆ ಬೇಕಾಗಿರುವ ಹಲವು ಪಠ್ಯಪುಸ್ತಕಗಳು ಬರಬೇಕಿದೆ.

ಕೆಲವು ವರ್ಷಗಳ ಹಿಂದೆ ಶಾಲೆ ಆರಂಭವಾಗಿ ತಿಂಗಳುಗಳು ಕಳೆದರೂ ಪಠ್ಯಪುಸ್ತಕಗಳ ಸರಬರಾಜು ಆಗುತ್ತಿರಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಶಾಲೆ ಆರಂಭಕ್ಕೆ ಮೊದಲೇ ಶೇ70ಕ್ಕೂ ಹೆಚ್ಚು ಪಠ್ಯಪುಸ್ತಕಗಳು ಸರಬರಾಜು ಆಗುತ್ತಿವೆ.

ಸರಬರಾಜುದಾರರು ವಾರದ ಹಿಂದೆಯೇ ಪಠ್ಯಪುಸ್ತಕಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತಲುಪಿಸಿದ್ದಾರೆ. ಅಲ್ಲಿಂದ ಅವುಗಳನ್ನು ಈಗಾಗಲೇ ಶಾಲೆಗಳಿಗೆ ತಲುಪಿಸುವ ಕೆಲಸ ನಡೆದಿದೆ. ಪ್ರಾರಂಭೋತ್ಸವದಲ್ಲಿಯೇ ಮಕ್ಕಳಿಗೆ ಪುಸ್ತಕಗಳನ್ನು ಹಂಚಿಕೆ ಮಾಡಲು ಯೋಜಿಸಲಾಗಿದೆ.

ಸರ್ಕಾರಿ ಶಾಲೆಗಳತ್ತ ಮಕ್ಕಳನ್ನು ಸೆಳೆಯಲು ಜಿಲ್ಲೆಯ ಹಲವು ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿಗಳನ್ನೂ ಆರಂಭಿಸಲಾಗಿದೆ. ಕೆಲವು ಶಾಲೆಗಳಲ್ಲಿ ಮಕ್ಕಳ ಹೆಸರಿನಲ್ಲಿ ಠೇವಣಿ ಇಡಲಾಗುತ್ತಿದೆ. ಶಾಲೆಗಳತ್ತ ಮಕ್ಕಳನ್ನು ಕರೆ ತರಲು ಶಿಕ್ಷಕರು ಶ್ರಮಿಸುತ್ತಿದ್ದಾರೆ.

ಪಠ್ಯಪುಸ್ತಕ ತೆಗೆದುಕೊಂಡು ಹೋಗಲು ಶಿಕ್ಷಕರ ಪರದಾಟ

ಹಿಂದಿನ ವರ್ಷಗಳಲ್ಲಿ ಶಾಲೆಗಳಿಗೆ ಪಠ್ಯಪುಸ್ತಕವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಸರಬರಾಜು ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಶಿಕ್ಷಕರೇ ತೆಗೆದುಕೊಂಡು ಹೋಗಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಶಾಲೆಗೆ ತೆಗೆದುಕೊಂಡು ಹೋಗಲು ತಗಲುವ ವೆಚ್ಚವನ್ನು ಮುಖ್ಯ ಶಿಕ್ಷಕರ ಖಾತೆಗೇ ನೇರವಾಗಿ ಜಮಾ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಈಗಾಗಲೇ ವಾಹನಗಳಲ್ಲಿ ಪಠ್ಯಪುಸ್ತಕಗಳನ್ನು ಮುಖ್ಯ ಶಿಕ್ಷಕರು ಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಒಂದೇ ಬಾರಿ ಪುಸ್ತಕ ಬಂದರೆ ತೊಂದರೆಯಿಲ್ಲ. ಈಗ ಇನ್ನೂ ಕೆಲವು ಪಠ್ಯಪುಸ್ತಕಗಳು ಬಂದಿಲ್ಲ. ಅವು ಬಂದಾಗ ಆಗಾಗ ಬಂದು ತೆಗೆದುಕೊಂಡು ಹೋಗಬೇಕಾಗುತ್ತದೆ

ಪ್ರತಿ ವಿದ್ಯಾರ್ಥಿಗೆ ಇಂತಿಷ್ಟೋ, ಪ್ರತಿ ಪಠ್ಯಪುಸ್ತಕಕ್ಕೆ ಇಷ್ಟೋ ಎಂದು ತೆಗೆದುಕೊಂಡು ಹೋಗಲು ತಗಲುವ ವೆಚ್ಚ ನಿರ್ಧರಿಸಿಲ್ಲ. ಹಾಗಾಗಿ, ಮುಖ್ಯ ಶಿಕ್ಷಕರಿಗೆ ಹಣ ಜಮಾ ಮಾಡಿಲ್ಲ. ಶಿಕ್ಷಕರೇ ಜೇಬಿಂದ ಹಾಕಿ ಪುಸ್ತಕ ತೆಗೆದುಕೊಂಡು ಹೋಗುತ್ತಿದ್ದಾರೆ.

ಬಹುತೇಕ ಪಠ್ಯಪುಸ್ತಕಗಳು ಬಂದಿದ್ದು, ಈಗಾಗಲೇ ಶಿಕ್ಷಕರು ಶಾಲೆಗಳಿಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ಶಾಲಾ ಪ್ರಾರಂಭೋತ್ಸವ ಸಂದರ್ಭದಲ್ಲಿ ಪಠ್ಯಪುಸ್ತಕ ವಿತರಣೆ ಮಾಡಲಾಗುವುದು
ಅಜಿತ್ ಮನ್ನಿಕೇರಿ, ಡಿಡಿಪಿಐ, ಶಾಲಾ ಶಿಕ್ಷಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.