ಬಾಗಲಕೋಟೆ: ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಪುಸ್ತಕದ ಜ್ಞಾನಾರ್ಜನೆಯಿಂದ ದೂರ ಸರಿಯುವ ವಾತಾವರಣ ನಿರ್ಮಾಣವಾಗುತ್ತಿದೆ. ಜನಪದರು ಕಲೆ, ಸಂಸ್ಕೃತಿ ಸಂಪ್ರದಾಯ ಶ್ರೀಮಂತಗೊಳಿಸಿದ್ದು, ಬದುಕು ಸೃಜನಾತ್ಮಕವಾಗಿ ರೂಪಿಸಿಕೊಳ್ಳಬೇಕು ಎಂದು ರಾಜ್ಯ ಶಾಲಾ ಶಿಕ್ಷಣ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಆನಂದ ಹಲಕುರ್ಕಿ ಹೇಳಿದರು.

ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಬಿ.ಎ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ‘ಸೃಜ ನೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬದುಕು ಸುಂದರಗೊಳ್ಳಬೇಕಾದರೆ ಶಿಕ್ಷಣ, ಸಂಸ್ಕಾರ, ಪರಿಶ್ರಮ ಅಗತ್ಯವಾಗಿದೆ. ಗುರು ಹಿರಿಯರು ಹಾಕಿಕೊಟ್ಟಿರುವ ಮಾರ್ಗ ಅನುಸರಿಸಿದಾಗ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಅರುಣಕುಮಾರ ಗಾಳಿ ಮಾತನಾಡಿ, ವಿದ್ಯಾರ್ಥಿಗಳು ಮೊದಲು ಜ್ಞಾನ ಸಂಪಾದನೆ ಮಾಡಿಕೊಂಡು ಬದುಕು ರೂಪಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಪ್ರೊ.ಪರಸಪ್ಪ ತಳವಾರ ಮಾತನಾಡಿದರು. ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಸುಮಂಗಲಾ ಮೇಟಿ, ಕ್ರೀಡಾ ನಿರ್ದೇಶಕ ನೀಲಪ್ಪ ಕುರಿ, ಪ್ರೊ.ಸಂಪತ್ ಲಮಾಣಿ, ಪ್ರೊ.ಶಿವಶಂಕರ ಪ್ರಸಾದ, ಮುಬೀನ್ ಬೆಳಗಾಂ, ಸುಮನ್ ಮುಚಖಂಡಿ, ಪ್ರೊ.ಲೆಪಾಕ್ಷಯ್ಯ ಪಾಲ್ಗೊಂಡಿದ್ದರು.

ಧೃತಿ ಕುರಬರ ಸ್ವಾಗತಿಸಿದರು. ಸಂಗಮೇಶ ಕಾಂಬಳೆ ಪರಿಚಯಿಸಿದರು.

ವಿಜಯಕುಮಾರ ಕೊಮಾರ ಮತ್ತು ಚಂದ್ರಮತಿ ಪಾಟೀಲ ನಿರೂಪಿಸಿದರು. ಶಿವಕುಮಾರ ಪಿಂಡರಕಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-19-49643239

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.