ರಾಂಪುರ: ‘ವಿದ್ಯಾರ್ಥಿಗಳು ಪಠ್ಯ ಅಧ್ಯಯನದ ಜೊತೆಗೆ ನಾಡಿನ ಸಾಧಕರ ಜೀವನ ಚರಿತ್ರೆ ತಿಳಿದು ಸಾಹಿತ್ಯ ಗ್ರಂಥಗಳ ಅವಲೋಕನ ಮಾಡಿ ಜ್ಞಾನದ ಹರವು ಹೆಚ್ಚಿಸಿಕೊಳ್ಳಬೇಕು’ ಎಂದು ಬಾಗಲಕೋಟೆಯ ಬಸವೇಶ್ವರ ಕಲಾ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ. ಮಲ್ಲಿಕಾರ್ಜುನ ಸಜ್ಜನರ ಹೇಳಿದರು.

ಬೇವೂರಿನ ಪಿ.ಎಸ್ .ಸಜ್ಜನ ಕಾಲೇಜಿನಲ್ಲಿ ಶನಿವಾರ ಜರುಗಿದ ಪ್ರತಿಭಾ ಪುರಸ್ಕಾರ ಹಾಗೂ ಬಿ.ಎ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

‘ಜಾಗತಿಕ ಮಟ್ಟದಲ್ಲಿ ಇಂಗ್ಲಿಷ್ ಭಾಷೆಗೆ ಮನ್ನಣೆಯಿದ್ದು, ಪ್ರಾದೇಶಿಕ ಭಾಷೆಗಳೊಂದಿಗೆ ಇಂಗ್ಲಿಷ್ ಭಾಷೆಯ ಅಧ್ಯಯನ ಹಾಗೂ ತಿಳಿವಳಿಕೆ ಪಡೆಯುವುದು ಅಗತ್ಯವಾಗಿದೆ’ ಎಂದರು.

ಅತಿಥಿ ಪ್ರೊ.ಎಸ್.ಬಿ.ಹಂಚಿನಾಳ, ‘ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಕಲಿಕೆಯ ಹಂತದಲ್ಲಿಯೇ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಂಸ್ಕಾರವಂತರಾಗಿ ಬದುಕಬೇಕು’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಆದರ್ಶ ವಿದ್ಯಾವರ್ಧಕ ಸಂಘದ ಸದಸ್ಯ ಐ.ಜಿ.ಕಡೇಮನಿ ಮಾತನಾಡಿ, ‘ವಿದ್ಯಾರ್ಥಿಗಳು ಹೆತ್ತ ತಂದೆ -ತಾಯಿ, ಕಲಿಸಿದ ಗುರುಗಳ ಋಣವನ್ನು ತೀರಿಸಲು ಮುಂದಾಗಬೇಕು. ಒಳ್ಳೆಯ ಭವಿಷ್ಯಕ್ಕೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ವಿದ್ಯಾರ್ಥಿ ಪ್ರತಿನಿಧಿಗಳಾದ ವಿಜಯಲಕ್ಷ್ಮೀ ಬಂಡಿವಡ್ಡರ, ಸಿದ್ದಪ್ಪ ಆಲಗುಂಡಿ ಅನಿಸಿಕೆ ಹೇಳಿದರು. ಪ್ರಾಚಾರ್ಯ ಜಗದೀಶ ಭೈರಮಟ್ಟಿ, ಉಪನ್ಯಾಸಕರಾದ ಬಿ.ಬಿ.ಬೇವೂರ, ಎಸ್.ಎಸ್.ಆದಾಪುರ, ಜಿ.ಎಸ್.ಗೌಡರ, ಆದಪ್ಪ ಗೊರಚಿಕ್ಕನವರ, ಡಿ.ವೈ.ಬುಡ್ಡಿಯವರ, ಶ್ವೇತಾ ಕಾಗಿಯವರ, ಆರ್ .ಬಿ.ಕರಡಿಗುಡ್ಡ ಹಾಗೂ ಜ್ಯೋತಿ ಭೈರಮಟ್ಟಿ, ಜ್ಯೋತಿ ಗೌಡರ, ಅಶ್ವಿನಿ ಕುರಿ, ಲಕ್ಷ್ಮೀಬಾಯಿ ಮಾದರ ಇದ್ದರು.

ಪ್ರತಿಭಾವಂತ ವಿದ್ಯಾರ್ಥಿಗಳಾದ ವಿಜಯಲಕ್ಷ್ಮೀ ಬಂಡಿವಡ್ಡರ, ಜ್ಯೋತಿ ಗೌಡರ, ಪವಿತ್ರಾ ಮಾಗನೂರ, ಫಾತಿಮಾ ನದಾಫ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಂತರ ಜಾನಪದ ಕಲಾವಿದೆ ಪವಿತ್ರಾ ಜಕ್ಕಪ್ಪನವರ ತಂಡದಿಂದ ಜಾನಪದ ಸೌರಭ ಕಾರ್ಯಕ್ರಮ ಜರುಗಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-19-1617617190

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.