ಬೈಲಹೊಂಗಲ: ನಗರ್ ಎ.ವಿ.ಢಮ್ಮಣಗಿ ವಿಜನ್ ಫೌಂಡೇಶನದ ಕಲ್ಪವೃಕ್ಷ ಮಾದರಿ ಶಾಲೆಯಲ್ಲಿ ಎನ್ಸಿಸಿ 28 ಕರ್ನಾಟಕ ಬಟಾಲಿಯನ್ (ಹುಬ್ಬಳ್ಳಿ) ವತಿಯಿಂದ 10 ದಿನಗಳ ವಾರ್ಷಿಕ ತರಬೇತಿ ಶಿಬಿರ (ಎಟಿಸಿ) ಆರಂಭಿಸಲಾಗಿದೆ.

ರಾಜ್ಯದ ಬೇರೆ, ಬೇರೆ 18 ಶಾಲೆ, ಕಾಲೇಜುಗಳಿಂದ ಜೂನಿಯರ್ ವಿಭಾಗದಲ್ಲಿ 8 ಹಾಗೂ 9 ನೇ ತರಗತಿ ಮತ್ತು ಸಿನಿಯರ್ ವಿಭಾಗದಲ್ಲಿ ಪಿ.ಯು.ಸಿ. ಹಾಗೂ ಪದವಿ ವಿದ್ಯಾರ್ಥಿ, ವಿದ್ಯಾರ್ಥಿನೀಯರು ಸೇರಿದಂತೆ 600 ಎನ್.ಸಿ.ಸಿ. ಕೆಡೆಟ್ಗಳು ಶಿಬಿರದಲ್ಲಿ ಭಾಗವಹಿಸಿದ್ದಾರೆ.

ಶಿಬಿರದಲ್ಲಿ ಯೋಗ ಮತ್ತು ದೈಹಿಕ ತರಬೇತಿ, ಡ್ರಿಲ್ ಮತ್ತು ಪರೇಡ್, ಶಸ್ತ್ರಾಸ್ತ್ರ ಬಳಕೆ ಮತ್ತು ಫೈರಿಂಗ್ ಅಭ್ಯಾಸ, ಮ್ಯಾಪ್ ರೀಡಿಂಗ್ ಮತ್ತು ಫೀಲ್ಡ ಕ್ರಾಫ್ಟ್, ಗುಂಪು ಚರ್ಚೆಗಳು ಮತ್ತು ನಾಯಕತ್ವ ತರಬೇತಿ, ಸಮಾಜ ಸೇವಾ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಬೆಟಾಲಿಯನ್ ಮುಖ್ಯಸ್ಥ, ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ಜಸದೀಪಸಿಂಗ್ ಅವರ ನೇತೃತ್ವದಲ್ಲಿ, ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ಕಪೀಲ್ ಕಶ್ಯಪ, ಎನ್.ಸಿ.ಸಿ.ಅಧಿಕಾರಿಗಳು ಶಿಬಿರದ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದಾರೆ. ಪ್ರಾಚಾರ್ಯ ಡಾ.ಹನಮೇಶ ದುಡ್ಯಾಳ, ಆಡಳಿತಾಧಿಕಾರಿ ರಾಜಶೇಖರ ಕೋತಂಬ್ರಿ ಶಿಬಿರದ ಚಟುವಟಿಕೆಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-21-2136438376

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.