ಬಳ್ಳಾರಿ: ‘ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯದವರೆಗೆ ಕನ್ನಡ ಶಿಕ್ಷಕರ ಕೊರತೆ ಕಾಣಿಸುತ್ತಿದೆ. ಭಾಷೆಯ ಅಭಿವೃದ್ಧಿಗೆ ನಿರಂತರ ಪ್ರಯತ್ನ ಅಗತ್ಯವಿದೆ’ ಎಂದು ಸಾಹಿತಿ ಹಾಗೂ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಅರವಿಂದ್ ಪಟೀಲ್ ಹೇಳಿದರು.

ವೀರಶೈವ ಮಹಾವಿದ್ಯಾಲಯದ ಕನ್ನಡ ವಿಭಾಗ ಮತ್ತು ಕವನ ಪ್ರಕಾಶನ, ಕೊಟ್ಟೂರು ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ನಿಷ್ಠಿ ರುದ್ರಪ್ಪ ಅವರ ‘ಸ್ವಾದ ಬೇಕ್ರಿ’ ಪ್ರಬಂಧ ಸಂಕಲನ ಬಿಡುಗಡೆ ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡದಲ್ಲಿ ಲಲಿತ ಪ್ರಬಂಧ ಬರೆಯುವ ಅಭ್ಯಾಸವನ್ನು ಉಪನ್ಯಾಸಕರು ಬೆಳೆಸಿಕೊಳ್ಳಬೇಕು’ ಎಂದು ಕರೆ ನೀಡಿದರು.

ಕೃತಿಯನ್ನು ಬಿಡುಗಡೆ ಮಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಸಿ.ಬಿ. ಚಿಲ್ಕರಾಗಿ, ‘ಸ್ಥಳೀಯ ವಿಷಯಗಳನ್ನು ಒಳಗೊಂಡ ಈ ಕೃತಿ ವಸ್ತುನಿಷ್ಠವಾಗಿ ಉಳಿಯುವ ಶಕ್ತಿಯಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಖ್ಯಾತ ಕಥೆಗಾರ ವೀರೇಂದ್ರ ರಾವಿಹಾಳ್ ಕೃತಿಯ ಆಳವಾದ ಚಿಂತನೆ ಹಾಗೂ ವೈವಿಧ್ಯವನ್ನು ಪರಿಚಯಿಸಿದರು.

ಅಬ್ದುಲ್ ಹೈ ತೋರಣಗಲ್ಲು, ಶರಣಬಸವ ಮತ್ತು ಭ್ರಮರಾಂಭ ಯಾಟಿ ಅವರನ್ನು ಸನ್ಮಾನಿಸಲಾಯಿತು. ಗಣ್ಯರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-25-1982853691

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.