ತೆಕ್ಕಲಕೋಟೆ: 'ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣ ಇಂದಿನ ಅವಶ್ಯಕತೆ ಆಗಿದೆ. ಮದರಸಾಗಳು ಔಪಚಾರಿಕ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ' ಎಂದು ಬಳ್ಳಾರಿ ಜಿಲ್ಲಾ ಎಸ್ಎಫ್ಐ ಕಾರ್ಯದರ್ಶಿ ಬುರ್ಹಾನುದ್ದೀನ್ ಹೇಳಿದರು.

ಪಟ್ಟಣದ ನಿಟ್ಟೂರು ರಸ್ತೆಯ ಆದೋನಿ ಸಾಹೇಬ್ ದರ್ಗಾದ ಆವರಣ ದಲ್ಲಿ ಮಂಗಳವಾರ ಝೀಲ್ ಶೈಕ್ಷಣಿಕ ಸಂಸ್ಥೆ ಆಯೋಜಿಸಿದ್ದ 20 ದಿನಗಳ ಉಚಿತ ಬೇಸಿಗೆ ಶಿಬಿರ ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಬಳ್ಳಾರಿಯ ಹಾಫಿಝ್ ಶಬ್ಬೀರ್ ಹಝ್ರತ್ ಗಜ್ಜೆಹಳ್ಳಿ ಮಾತನಾಡಿದರು.

ಶಿಬಿರದಲ್ಲಿ 67 ವಿದ್ಯಾರ್ಥಿಗಳು ಭಾಗವಹಿಸಿ ಕನ್ನಡ, ಇಂಗ್ಲಿಷ್ ಬುನಾದಿ ಕಲಿಕೆ, ಭಾಷಣ ಕಲೆ, ಗಾಯನ, ಕಂಠಪಾಠ, ಕುರಾನ್ ಪಾರಾಯಣ ಸೇರಿದಂತೆ ಹಲವು ಸ್ಪರ್ಧೆ ಹಾಗೂ ಚಟುವಟಿಕೆಗಳಲ್ಲಿ ಭಾಗವಹಿಸಿದರು. ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿ ದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ತೆಕ್ಕಲಕೋಟೆ ಝೀಲ್ ಸಂಸ್ಥೆಯ ಕಾರ್ಯದರ್ಶಿ ಸಿದ್ದೀಕ್ ಸಖಾಫಿ , ಸಯ್ಯಿದ್ ಚಾಂದ್ ಪೀರ್ ಷಾ ಖಾದ್ರಿ, ಜಾಮಿಅ ಮಸ್ಜಿದ್ ಅಧ್ಯಕ್ಷ ಖಾದರ್ ವಲಿ ವೈ, ಮನ್ಸೂರಿ ಮಸ್ಜಿದ್ ಅಧ್ಯಕ್ಷ ಪೀರಾವಲಿ, ಸಹೀದ್ ಸಖಾಫಿ ಅಲ್-ಮಳ್'ಹರಿ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-25-1012293565

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.