ಬಳ್ಳಾರಿ: ‘ನವ ಮಾಧ್ಯಮಗಳು ಸತ್ಯ, ಪ್ರಾಮಾಣಿಕತೆಯ ಕಡೆ ಗಮನ ಹರಿಸಬೇಕು. ದಿಟ್ಟತನ ಮತ್ತು ಸಾಮಾಜಿಕ ಕಳಕಳಿಯಿಂದ ಅವು ಕರ್ತವ್ಯ ನಿರ್ವಹಿಸಬೇಕು’ ಎಂದು ಹಿರಿಯ ಲೇಖಕ ಜಿ. ಪಿ. ಬಸವರಾಜ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಸಂಗಂ ಟ್ರಸ್ಟ್ ಹಾಗೂ ಕನ್ನಡ ಸ್ನಾತಕ ಹಾಗೂ ರಾಜ್ಯಶಾಸ್ತ್ರ ಸ್ನಾತಕೋತ್ತರ ಅಂತರ ವಿಭಾಗೀಯ ಉಪನ್ಯಾಸ ಸರಣಿಯಲ್ಲಿ ‘ನವ ಮಾಧ್ಯಮಗಳು ಮತ್ತು ಹೊಸ ತಲೆಮಾರು’ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.

‘ಮಾಧ್ಯಮಗಳಲ್ಲಿ ಹಿರಿಯ ವ್ಯಕ್ತಿಗಳೊಂದಿಗೆ ಮಾತುಕತೆ ನಡೆಸುವಾಗ ಅವರ ಬಗೆಗೆ ಸಂಪೂರ್ಣ ಮಾಹಿತಿ ಹೊಂದಿರಬೇಕಲ್ಲದೆ ಸೌಜನ್ಯ, ಗೌರವಗಳೊಂದಿಗಿನ ನಡೆ ಬಹಳ ಮುಖ್ಯ. ಜೋರು ಮಾತನಾಡುವ, ಅಹಂಕಾರವನ್ನು ಪ್ರದರ್ಶಿಸುವ, ಹೆದರಿಸಿ ಕೇಳುವ ಬಗೆ ಉಚಿತವಾದುದಲ್ಲ’ ಎಂದರು.

ಲೇಖಕ ಡಾ.ಶಿವಲಿಂಗಪ್ಪ ಹಂದಿಹಾಳು ಪ್ರಾಸ್ತಾವಿಕ ಮಾತನಾಡಿ, ‘ಯುವ ಸಮುದಾಯ ಬದುಕಿನ ಒತ್ತಡ, ತಲ್ಲಣ, ತಳಮಳಗಳನ್ನು ಅಕ್ಷರರೂಪಕ್ಕೆ ಇಳಿಸಲು ಮುಂದಾಗಬೇಕು’ ಎಂದರು.

ಸಂಗಮ ಟ್ರಸ್ಟ್ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ, ‘ಹೊಸ ತಲೆಮಾರಿಗೆ ಸಾಹಿತ್ಯ ಸಂಸ್ಕೃತಿ ಬಗೆಗೆ ಅಭಿರುಚಿ ಮೂಡಿಸುತ್ತಲೇ ಹೊಸ ವಿಚಾರಗಳನ್ನು ದಾಟಿಸುವ ಆಲೋಚನೆ ನಮ್ಮ ಟ್ರಸ್ಟಿಗೆ ಇದೆ’ ಎಂದರು.

ಪ್ರಾಂಶುಪಾಲ ಪ್ರಹ್ಲಾದ್ ಚೌದ್ರಿ, ಪ್ರಾಧ್ಯಾಪಕ ದಸ್ತಗೀರಸಾಬ್ ದಿನ್ನಿ, ಕೆ.ಬಸವರಾಜ, ಹುಚ್ಚೂಸಾಬ್ ಸಂಡೂರು, ಲೇಖಕ ವೀರೇಂದ್ರ ರಾವಿಹಾಳು, ನಾಗರಾಜ ಬಸರಕೋಡು, ಸಹಾಯಕ ಪ್ರಾಧ್ಯಾಪಕರಾದ ಬಿ ರಾಮಸ್ವಾಮಿ, ಪ್ರವೀಣಕುಮಾರ್ ಎಂ. ಎನ್, ಲಿಂಗಪ್ಪ, ಮಮತಾ, ಅತಿಥಿ ಉಪನ್ಯಾಸಕರಾದ ಆರ್.ಶ್ರೀನಿವಾಸ್, ಸುಜಾತ, ತಿಪ್ಪೇರುದ್ರ, ಕುಮಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-25-1642170006

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.